ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೋಲಿನಿಂದ ಭಾರಿ ಟ್ರೆಂಡ್ ಆಗಿದೆ. ಇದೇ ವೇಳೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪಾಕ್ ಪರ ಆಡಿದ ಹಿಂದೂ ಕ್ರಿಕೆಟಿಗ ಕನೇರಿಯಾ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಲಾಹೋರ್(ಅ.27) ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ ಭಾರಿ ಟ್ರೋಲ್ ಆಗಿತ್ತು. ಬಾಬರ್ ಅಜಮ್ ನಾಯಕತ್ವ, ಪಾಕಿಸ್ತಾನ ತಂಡ ವಿರುದ್ದ ಟ್ರೋಲ್ ಹರಿದಾಡಿತ್ತು. ಪಾಕ್ ತಂಡ ಕೂಡ ಆತಿಥ್ಯ ವಹಿಸಿರುವ ಭಾರತ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೇಶ್ ಕನೇರಿಯಾ ಕೂಡ ಭಾರಿ ಟ್ರೆಂಡ್ ಆಗಿದ್ದಾರೆ. ಪ್ರತಿ ಬಾರಿ ಹಿಂದುತ್ವ, ಸನಾತನ ಧರ್ಮ, ಭಾರತ, ನರೇಂದ್ರ ಮೋದಿ ಸೇರಿದಂತೆ ಹಿಂಧೂ ಧರ್ಮ ಸಂಸ್ಕೃತಿ ವಿಚಾರದಲ್ಲಿ ಮಾತನಾಡುವ ದಾನೇಶ್ ಕನೇರಿಯಾ ಇದೀಗ ಪಾಕಿಸ್ತಾನ ತನ್ನನ್ನು ನಡೆಸಿಕೊಂಡ ರೀತಿ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಇಸ್ಲಾಂಗೆ ಮತಾಂತರವಾದರೆ ತನಗೆ ಪಾಕಿಸ್ತಾನ ತಂಡದ ನಾಯಕನಾಗುವ ಅವಕಾಶವಿತ್ತು. ಆದರ ನನಗೆ ಸನಾತನ ಧರ್ಮವೇ ಮಿಗಿಲು. ನಾನೊಬ್ಬ ಸನಾನತಿ, ಶ್ರೀರಾಮ ಹಾಕಿ ಕೊಟ್ಟ ಮಾರ್ಗದಲ್ಲೇ ನಾನು ಸಾಗುತ್ತೇನೆ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ.
ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಾನೀಶ್ ಕನೇರಿಯಾ ತಮ್ಮ ಕರಾಳ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ನನ್ನ ಕರಿಯರ್ ಸಾಗುತ್ತಿತ್ತು. ಈ ವೇಳೆ ಹಲವು ನಾಯಕರು, ಪಾಕ್ ಕ್ರಿಕೆಟಿಗರು ಇಸ್ಲಾಂಗೆ ಮತಾಂತರವಾಗಲು ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಇಸ್ಲಾಂಗೆ ಮತಾಂತರವಾಗಿದ್ದರೆ ನನ್ನ ಕ್ರಿಕೆಟ್ ಕರಿಯರ್ ಹೀಗೆ ಅಂತ್ಯವಾಗುತ್ತಿರಲಿಲ್ಲ. ನನಗೆ ಸನಾತನ ಧರ್ಮವೇ ಮುಖ್ಯ. ಶ್ರೀರಾಮ ನನಗೆ ಸ್ಪೂರ್ತಿ. ಸನಾತನ ಧರ್ಮಕ್ಕೆ ಅನ್ಯಾಯವಾಗುತ್ತಿದ್ದರೆ ಶ್ರೀರಾಮನ ಮಾತಿನಂತೆ ನಾನು ಅನ್ಯಾಯದ ವಿರುದ್ದ ಹೋರಾಡಿದ್ದೇನೆ ಎಂದು ಕನೇರಿಯಾ ಹೇಳಿದ್ದಾರೆ.
undefined
ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!
ಸನಾತನ ಧರ್ಮ ನನಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ಕಲಿಸಿಕೊಟ್ಟಿದೆ. ಇದು ನನ್ನ ಹಿಂದೂ ಸಹೋದರ ಸಹೋದರಿಯರಿಗೆ, ನನ್ನ ಹಿಂದೂ ಸಮುದಾಯಕ್ಕಾಗಿ ಮಾಡಿದ್ದೇನೆ. ಪಾಕ್ ಪರ ಗರಿಷ್ಠ ವಿಕೆಟ್ ಕಬಳಿಸಿದ ನಾಲ್ಕನೇ ಕ್ರಿಕೆಟಿಗ ನಾನು. ನನಗೆ ಪಾಕಿಸ್ತಾನ ನಾಯಕರ ಪೈಕಿ ಇನ್ಜಮಾಮ್ ಉಲ್ ಹಕ್ ಮಾತ್ರ ಬೆಂಬಲ ನೀಡಿದ್ದರು. ಇನ್ನುಳಿದ ಎಲ್ಲಾ ನಾಯಕರು, ಕ್ರಿಕೆಟಿಗರು ನನ್ನ ವಿರುದ್ದವೇ ಸಿಡಿದು ನಿಂತಿದ್ದರು.
ಪ್ರಮುಖವಾಗಿ ಶಾಹಿದ್ ಆಫ್ರಿದಿ ನನಗೆ ಅತೀ ಹೆಚ್ಚು ಕಿರುಕುಳ ನೀಡಿದ್ದಾರೆ. ಮತಾಂತರವಾಗಲು ಒತ್ತಡ ಹೇರಿದ್ದರು. ತಂಡದಲ್ಲಿರುವಾಗ ನನ್ನ ಜೊತೆ ಭೋಜನ ಸವಿಯುತ್ತಿರಲಿಲ್ಲ. ಹೀಗಾಗಿ ನನ್ನನ್ನು ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಸಲಾಯಿತು. ಫಿಕ್ಸಿಂಗ್ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಪೀಡಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಧರ್ಮದ ಆಧಾರದಲ್ಲಿ ನನ್ನ ಮೇಲೆ ಅನ್ಯಾಯ ಮಾಡಿತ್ತು. ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾದ ನಜೀಮ್ ಸೇಥಿ, ಇಜಾಜ್ ಭಟ್ ಸೇರಿದಂತೆ ಕೆಲವರು ನನಗೆ ಯಾವುದೇ ನೆರವು ನೀಡಲಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.
ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!
ನಾನು ಮತ್ತಷ್ಟು ವರ್ಷ ಆಡಿದರೆ ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗರ ಎಲ್ಲಾ ದಾಖಲೆ ಪುಡಿ ಮಾಡುತ್ತೇನೆ ಅನ್ನೋ ಭಯ ಕಾಡಿತ್ತು. ಹಿಂದೂ ಕ್ರಿಕೆಟಿಗ ಪಾಕಿಸ್ತಾನದ ಮುಸ್ಲಿಂ ಕ್ರಿಕೆಟಿಗರ ದಾಖಲೆ ಪುಡಿ ಮಾಡಿದರೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ ಎಂದು ಭಾವಿಸಿದ್ದರು. ಹೀಗಾಗಿ ನನ್ನ ಕ್ರಿಕೆಟ್ ಕರಿಯರನ್ನು ವ್ಯವಸ್ಥಿತವಾಗಿ ಅಂತ್ಯಗೊಳಿಸಿದರು. ಪಾಕಿಸ್ತಾನದ ಯಾವುದಾದರು ಒಂದು ಕ್ಷೇತ್ರದಲ್ಲಿ ಹಿಂದೂ ವ್ಯಕ್ತಿಗಳು ಸಾಧನೆ ಮಾಡಿದ ಹೆಸರಗಳಿದೆಯೇ? ಒಂದು ಅಧಿಕಾರಿಗಳಿದ್ದಾರೇಯೇ? ಇದಕ್ಕೆ ಪಾಕಿಸ್ತಾನ ಅವಕಾಶ ನೀಡಿಲ್ಲ. ಆದರೆ ಭಾರತದಲ್ಲಿ ಎಲ್ಲಾ ವರ್ಗ, ಮತಗಳಿಗೆ ಸಮಾನ ಅವಕಾಶವಿದೆ ಎಂದು ಕನೇರಿಯಾ ಹೇಳಿದ್ದಾರೆ.
ಕ್ರಿಕೆಟ್ ಕರಿಯರ್ ಮುಗಿಸಿದರೆ, ನನಗೆ ಯಾವುದೇ ಕೆಲಸವಿಲ್ಲದೆ ಒದ್ದಾಡುವ ಪರಿಸ್ಥಿತಿಗೆ ನನ್ನನ್ನು ತಳ್ಳಿದರು. ಶಾರ್ಜಿಲ್ ಖಾನ್ ಸೇರಿದಂತೆ ಹಲವು ಪಾಕಿಸ್ತಾನ ಕ್ರಿಕೆಟಿಗರು ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದರೂ ಪಾಕ್ ಕ್ರಿಕೆಟ್ ಮಂಡಳಿ ನೆರವಿಗೆ ನಿಂತು ಮತ್ತೆ ಕ್ರಿಕೆಟ್ ಆಡವಂತೆ ಮಾಡಿತ್ತು. ಆದರೆ ಫಿಕ್ಸಿಂಗ್‌ನಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ಸಿಲುಕಿಸಿ ನನ್ನ ಕರಿಯರ್ ಅಂತ್ಯಗೊಳಿಸಿದರು. ಇದಕ್ಕೆ ಕಾರಣ ನಾನೊಬ್ಬ ಹಿಂದು ಎಂದು ಕನೇರಿಯಾ ಹೇಳಿದ್ದಾರೆ.