ಸಿಬ್ಬಂದಿಗೆ ಟ್ರಕ್ಕಿಂಗ್ ಆಯೋಜಿಸಿದ ಕೋಚ್ ದ್ರಾವಿಡ್, ಕೊಹ್ಲಿ-ರೋಹಿತ್ ಸೇರಿ ಆಟಗಾರರಿಗೆ ನೋ ಎಂಟ್ರಿ!

By Suvarna News  |  First Published Oct 27, 2023, 12:36 PM IST

ಕೋಚ್ ರಾಹುಲ್ ಟೀಂ ಇಂಡಿಯಾ ಸಹಾಯ ಸಿಬ್ಬಂದಿಗಳನ್ನು ಪ್ರವಾಸಿ ತಾಣ ಟ್ರೈಉಂಡ್‌ಗೆ ಟ್ರೆಕ್ಕಿಂಗ್ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಟ್ರೆಕ್ಕಿಂಗ್‌ಗೆ ಕೊಹ್ಲಿ, ರೋಹಿತ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಆಟಗಾರರಿಗೆ ನೋ ಎಂಟ್ರಿ ಸೂಚನೆ ನೀಡಿದ್ದು ಯಾಕೆ?
 


ಧರ್ಮಶಾಲಾ(ಅ.27) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾಗೆ ಕೆಲ ದಿನಗಳ ವಿಶ್ರಾಂತಿ ಸಿಕ್ಕಿದೆ. ನ್ಯೂಜಿಲೆಂಡ್ ಗೆಲುವಿನ ಬಳಿಕ 6ದಿನಗಳ ಹಾಲಿಡೇ ಪಡೆದಿರುವ ಟೀಂ ಇಂಡಿಯಾ ಅಭ್ಯಾಸ ಜೊತೆಗೆ ಕೆಲ ಫನ್ ಚಟುವಟಿಕೆಯಲ್ಲೂ ಪಾಲ್ಗೊಂಡಿದೆ. ಇತ್ತ ಕೋಚ್ ರಾಹುಲ್ ದ್ರಾವಿಡ್ ಈ ಹಾಲಿಡೇ ಸಮಯದಲ್ಲಿ ಸಹಾಯ ಸಿಬ್ಬಂದಿಗೆ ಟ್ರೆಕ್ಕಿಂಗ್ ಆಯೋಜಿಸಿದ್ದರು. ಕಿವೀಸ್ ವಿರುದ್ಧದ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಿದ್ದ ಟೀಂ ಇಂಡಿಯಾ ಅಲ್ಲೇ ಉಳಿದುಕೊಂಡಿತ್ತು. ಹೀಗಾಗಿ ರಾಹುಲ್ ದ್ರಾವಿಡ್, ಧರ್ಮಶಾಲಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಟ್ರೈಉಂಡ್‌ಗೆ ಸಹಾಯ ಸಿಬ್ಬಂದಿಗಳನ್ನು ಟ್ರೆಕ್ಕಿಂಗ್ ಕರೆದುಕೊಂಡು ಹೋಗಿದ್ದರು. ಆದರೆ ಈ ಯಾಣಕ್ಕೆ ಆಟಗಾರರಿ ನೋ ಎಂಟ್ರಿ ಸೂಚನೆ ನೀಡಲಾಗಿತ್ತು.

ಧರ್ಮಶಾಲಾದ ಕಂಗ್ರಾ ಜಿಲ್ಲೆಯಲ್ಲಿರುವ ಸಣ್ಣ ಟ್ರೆಕ್ಕಿಂಗ್ ತಾಣ. 9,278 ಅಡಿ ಎತ್ತರದ ಪರ್ವತಾರೋಹಣ ಸಾಹಸ ಇದಾಗಿದೆ. ದೌಲಂಧರ್ ಪರ್ವತ ಶಿಖರ್‌ಗಳ ಅತ್ಯಂತ ಸುಂದರ ತಾಣ ಇದಾಗಿದೆ. ಈ ತಾಣಕ್ಕೆ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸೇರಿದಂತೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗಳು ಟ್ರೆಕ್ಕಿಂಗ್ ಮಾಡಿದ್ದಾರೆ. ಒಂದು ದಿನದ ಟ್ರಕ್ಕಿಂಗ್‌ನಲ್ಲಿ ರಾಹುಲ್ ದ್ರಾವಿಡ್ ಸೇರಿದಂತೆ ಸಿಬ್ಬಂದಿಗಳು ಎಂಜಾಯ್ ಮಾಡಿದ್ದಾರೆ.

Tap to resize

Latest Videos

World Cup 2023: ಶ್ರೀಲಂಕಾ ವಿರುದ್ಧವೂ ಮುಗ್ಗರಿಸಿದ ವಿಶ್ವ ಚಾಂಪಿಯನ್‌ ಇಂಗ್ಲೆಂಡ್

ಟೀಂ ಇಂಡಿಯಾ ಆಟಗಾರರಿಗೂ ವಿಶ್ರಾಂತಿ ದಿನಗಳಿದ್ದರೂ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟ ಸೂಚನೆ ನೀಡಿದ್ದರು. ಆಟಗಾರರನ್ನು ಟ್ರೆಕ್ಕಿಂಗ್ ಮಾಡಲು ನಿರ್ಬಂಧಿಸಲಾಗಿತ್ತು. ಇದಕ್ಕೆ ಕಾರಣವನ್ನೂ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ಕಡಿದಾದ ದಾರಿ, ಕಲ್ಲು ಬಂಡೆಗಳ ನಡುವಿನ ಟ್ರಕ್ಕಿಂಗ್‌ನಲ್ಲಿ ಆಟಗಾರರು ಗಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇದು ವಿಶ್ವಕಪ್ ಟೂರ್ನಿ ನಡುವೆ ತಂಡಕ್ಕೆ ತೀವ್ರ ಹಿನ್ನಡೆ ತರಲಿದೆ. ಸಣ್ಣ ತಪ್ಪು ಕೂಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರ ಜೊತೆಗೆ ಕೊಹ್ಲಿ, ರೋಹಿತ್ ಸೇರಿದಂತೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು ಟ್ರೆಕ್ಕಿಂಗ್ ಮಾಡಿದರೆ ಭದ್ರತೆ ಪ್ರಶ್ನೆ ಕೂಡ ಕಾಡಲಿದೆ.ಈ ಕಾರಣಗಳಿಂದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಟ್ರೆಕ್ಕಿಂಗ್ ಮಾಡಲು ನಿರ್ಬಂಧ ವಿಧಿಸಲಾಗಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

 

A day off for the squad is a day well spent in the hills for the support staff 🏔️

Dharamsala done ✅

💙 Taking some positive vibes to Lucknow next | | | pic.twitter.com/g0drFKacT4

— BCCI (@BCCI)

 

ರಾಹುಲ್ ದ್ರಾವಿಡ್ ತಂಡ ತೆರಳಿದ ಪ್ರವಾಸಿ ತಾಣಕ್ಕೆ  9 ಕಿಲೋಮೀಟರ್ ದೂರವನ್ನು ಟ್ರಕ್ಕಿಂಗ್ ಮಾಡುತ್ತಲೇ ಸಾಗಬೇಕು. ಕನಿಷ್ಠ 4 ರಿಂದ 6 ಗಂಟೆ ಸಮಯ ತೆಗೆದುಕೊಳ್ಳಲಿದೆ. ಇದೀಗ ಕೋಚ್ ಹಾಗೂ ಸಿಬ್ಬಂದಿಗಳ ತಂಡ ಟ್ರೆಕ್ಕಿಂಗ್‌ನಿಂದ ರೀಫ್ರೆಶ್ ಆಗಿದೆ. ಇತ್ತ ರೋಹಿತ್ ಟೀಂ ಇತರ ಕೆಲ ಚಟುವಟಿಕೆ ಮೂಲಕ ಸಮಯ ಕಳೆದಿದಿದೆ.

IPL ಆಟಗಾರರ ಹರಾಜಿಗೆ ಡೇಟ್ ಫಿಕ್ಸ್..? ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಲೇಟೆಸ್ಟ್ ಅಪ್‌ಡೇಟ್‌

ಸತತ 5 ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಈ ಪಂದ್ಯ ನಡೆಯಲಿದೆ.
 

click me!