ಇಂಗ್ಲೆಂಡ್ ತಂಡದ ದಯನೀಯ ನಿರ್ವಹಣೆ ಮುಂದುವರಿದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಸೋಲು ಕಂಡಿದೆ.
ಬೆಂಗಳೂರು (ಅ.26); ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ದಯನೀಯ ಫಾರ್ಮ್ ಮುಂದುವರಿದಿದೆ. ಗುರುವಾರ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್‌ಗಳಿಂದ ಶ್ರೀಲಂಕಾ ತಂಡಕ್ಕೆ ಶರಣಾಯಿತು. ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ತಂಡಕ್ಕೆ ಮರಳಿದ ಬಳಿಕ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಶ್ರೀಲಂಕಾ ತಂಡ ಮಿಂಚಿನ ನಿರ್ವಹಣೆ ತೋರುವ ಮೂಲಕ 157 ರನ್‌ಗಳ ಸವಾಲನ್ನು ಕೇವಲ 25.4 ಓವರ್‌ಗಳಲ್ಲಿ ಬೆನ್ನಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಶ್ರೀಲಂಕಾದ ನಿಖರ ಬೌಲಿಂಗ್ ದಾಳಿಗೆ ಬೆಂಡಾಗಿ 33.2 ಓವರ್‌ಗಳಲ್ಲಿ 156 ರನ್‌ಗೆ ಆಲೌಟ್ ಆಯಿತು. ಇನ್ನೊಂದೆಡೆ ಶ್ರೀಲಂಕಾ ತಂಡ 25.4 ಓವರ್‌ಗಳಲ್ಲಿ 2 ವಿಕೆಟ್‌ಗೆ 160 ರನ್ ಬಾರಿಸಿ ಗೆಲುವು ಕಂಡಿತು. ಹಾಲಿ ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 29 ರಂದು ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿರುವ ಭಾರತ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಸವಾಲಿನ ಪಿಚ್‌ನಲ್ಲಿ ಬಹಳ ಸಾಧಾರಣ ಮೊತ್ತ ಪೇರಿಸಿತು. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 229 ರನ್‌ಗಳ ಬೃಹತ್ ಅಂತರದ ಸೋಲು ಎದುರಿಸಿದ್ದ ಇಂಗ್ಲೆಂಡ್ ಈ ಬಾರಿ ಗೆಲುವು ಸಾಧಿಸುವ ಗುರಿಯಲ್ಲಿಯೇ ಮೊದಲು ಬ್ಯಾಟಿಂಗ್‌ನ ನಿರ್ಧಾರ ಮಾಡಿತ್ತು. ಆದರೆ, ತಂಡದ ಬ್ಯಾಟಿಂಗ್ ಮತ್ತೊಮ್ಮೆ ದಯನೀಯವಾಗಿ ವಿಫಲವಾಯಿತು. ಇದರಿಂದಾಗಿ ಬ್ಯಾಟಿಂಗ್‌ಗೆ ಸವಾಲಾಗಿದ್ದ ಪಿಚ್‌ನಲ್ಲಿ ಕೇವಲ 156 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.
undefined
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಹಾಯ ನೀಡುತ್ತಿದ್ದ ಪಿಚ್‌ನಲ್ಲಿ ಇಂಗ್ಲೆಂಡ್ ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟಿಂಗ್ ಮಾಡಲು ವಿಫಲವಾಯಿತು. ಆಕ್ರಮಣಕಾರಿ ಆಟವಾಡಲು ಯತ್ನಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸೋಲು ಕಂಡರು. ಚೇಸಿಂಗ್ ವೇಳೆ ಇಂಗ್ಲೆಂಡ್ ತಂಡಕ್ಕೆ ಡೇವಿಡ್ ವಿಲ್ಲಿ ಗೆಲುವಿನ ಹೋಪ್ ನೀಡಿದ್ದರು. 23 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಬಳಿಕ ಪಥುಮ್ ನಿಸ್ಸಾಂಕ ಹಾಗೂ ಸಾದೀರ ಸಮರವಿಕ್ರಮ ಅಧಿಕಾರಯುತ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ನಿಸ್ಸಾಂಕ ಟೂರ್ನಿಯಲ್ಲಿ ಸತತ ನಾಲ್ಕನೇ ಅರ್ಧಶತಕ ಬಾರಿಸಿದರೆ, ಸಮರವಿಕ್ರಮ 2ನೇ ಅರ್ಧಶತಕ ಸಿಡಿಸಿದರು. 83 ಎಸೆತ ಎದುರಿಸಿದ ಪಥುಮ್ ನಿಸ್ಸಾಂಕ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಅಜೇಯ 77 ರನ್ ಬಾರಿಸಿದರೆ, 54 ಎಸೆತ ಎದುರಿಸಿದ ಸಮರವಿಕ್ರಮ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 65 ರನ್ ಸಿಡಿಸಿದರು.
ಈ ಜೋಡಿ 3ನೇ ವಿಕೆಟ್‌ಗೆ 122 ಎಸೆತಗಳಲ್ಲಿ 137 ರನ್‌ಗಳ ಜೊತೆಯಾಟವಾಡಿತು. ಇನ್ನೊಂದೆಡೆ, ಸತತ ಮೂರನೇ ಸೋಲಿನೊಂದಿಗೆ ಇಂಗ್ಲೆಂಡ್ ತಂಡ ವಿಶ್ವಕಪ್‌ನಿಂದ ಬಹುತೇಕ ಹೊರಬಿದ್ದಂತಾಗಿದೆ. ಪಂದ್ಯದಲ್ಲಿ 35 ರನ್‌ಗೆ 3 ವಿಕೆಟ್ ಉರುಳಿಸಿದ ಲಹಿರು ಕುಮಾರ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಸಂಪಾದಿಸಿದರು.
ವಿಶ್ವಕಪ್ ಸ್ಟೇಡಿಯಂನಲ್ಲಿ ಲೈಟ್ ಶೋಗೆ ಮ್ಯಾಕ್ಸ್‌ವೆಲ್ ಅಸಮಾಧಾನ, ಮೆಚ್ಚಿದ ಡೇವಿಡ್ ವಾರ್ನರ್!
2007ರ ವಿಶ್ವಕಪ್‌ಗೂ ಮುನ್ನ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಿತು. ಇಂಗ್ಲೆಂಡ್ ವಿರುದ್ಧ ಏಕೈಕ ಗೆಲುವು ದಾಖಲಾಗಿದ್ದು, 1996ರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ. ಆದರೆ, 2007ರ ಬಳಿಕ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಆಡಿದ ಐದೂ ಪಂದ್ಯಗಳಲ್ಲಿ ಗೆಲುವು ಕಂಡಿದೆ. ಇನ್ನು 1996ರ ವಿಶ್ವಕಪ್ ಬಳಿಕ ಒಂದೇ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಸತತ ಮೂರು ಸೋಲು ಕಂಡಿದ್ದು ಇದೇ ಮೊದಲಾಗಿದೆ.
ಇಂಗ್ಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡ್ತಾರಾ?