ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ವೇಗಿಗಳಾಗಿ ಮೂವರು ಸ್ಥಾನ ಭದ್ರವಾಗಿದ್ದು, ಇನ್ನೊಂದು ಸ್ಥಾನ ಸದ್ಯದಲ್ಲೇ ನಿರ್ಧಾರವಾಗಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ
ಹೈದರಾಬಾದ್[ಡಿ.06]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2020ರ ಟಿ20 ವಿಶ್ವಕಪ್ಗೆ ತಂಡದ ಸಂಯೋಜನೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ಗೆ ತಂಡ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದು, ಆ ಪೈಕಿ ಮೂವರು ಯಾರೆಂಬುದು ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಇಂದಿನ ಪಂದ್ಯದಲ್ಲೇ 3ನೇ ಅಂಪೈರ್‌ನಿಂದ ನೋಬಾಲ್ ನಿರ್ಧಾರ!
undefined
‘ಒಂದು ಸ್ಥಾನಕ್ಕಾಗಿ ಪೈಪೋಟಿ ಇದೆ. ಮೂವರು ತಮ್ಮ ಸ್ಥಾನಗಳನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಇದೊಂದು ಅರೋಗ್ಯಕರ ಸ್ಪರ್ಧೆಯಾಗಲಿದ್ದು, ಹೇಗೆ ಸಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ’ ಎಂದು ಕೊಹ್ಲಿ ಹೇಳಿದರು. ಭಾರತ ತಂಡದ ವೇಗಿಗಳ ಆಯ್ಕೆಯಲ್ಲಿ ಇರುವ ಗೊಂದಲದ ಬಗ್ಗೆ ಮಾತನಾಡಿದ ಕೊಹ್ಲಿ, ‘ಆಯ್ಕೆ ವಿಚಾರದಲ್ಲಿ ಹೆಚ್ಚೇನೂ ಸಮಸ್ಯೆ ಆಗುವುದಿಲ್ಲ. ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಅನುಭವ ಹೊಂದಿದ್ದಾರೆ. ಮೊಹಮದ್ ಶಮಿ ಟಿ20 ತಂಡಕ್ಕೆ ಮರಳಿದ್ದು, ಅವರೊಬ್ಬ ಅದ್ಭುತ ಬೌಲರ್. ಟಿ20 ಮಾದರಿಯಲ್ಲೂ ಅವರ ದಾಖಲೆ ಅತ್ಯುತ್ತಮವಾಗಿದೆ’ ಎಂದರು.
ಇಂಡೋ-ವಿಂಡೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ದೀಪಕ್ ಚಹರ್ ತಂಡಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಾವು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬಲ್ಲ ಬೌಲರ್ ಎನಿಸಿದ್ದಾರೆ. ಆರಂಭಿಕ ಹಾಗೂ ಕೊನೆ ಓವರ್‌ಗಳಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದು, ಒತ್ತಡ ನಿಭಾಯಿಸುವ ಕಲೆ ಸಹ ಇದೆ. ಹೀಗಾಗಿ, 4ನೇ ಆಯ್ಕೆ ಅವರೇ ಆಗಲಿದ್ದಾರೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ನವ್‌ದೀಪ್ ಸೈನಿ, ಉಮೇಶ್ ಯಾದವ್ ನಡುವೆ ಪೈಪೋಟಿ ಇದೆ.