ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಮಯಾಂಕ್ ಅಗರ್‌ವಾಲ್ ಹಾಗೂ ಮೊಹಮ್ಮದ್ ಶಮಿ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದುಬೈ[ನ.18]: ಭಾರತದ ತಾರಾ ವೇಗದ ಬೌಲರ್ ಮೊಹಮದ್ ಶಮಿ ಭಾನುವಾರ ನೂತನವಾಗಿ ಪ್ರಕಟಗೊಂಡ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ ಶಮಿ, 8 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಗಳಿಸಿದ್ದಾರೆ. ಶಮಿ 790 ರೇಟಿಂಗ್ ಅಂಕ ಕಲೆಹಾಕಿದ್ದು, ಭಾರತೀಯ ವೇಗಿ ಗಳಿಸಿದ 3ನೇ ಗರಿಷ್ಠ ಅಂಕ ಇದಾಗಿದೆ. ಕಪಿಲ್ ದೇವ್ (877) ಹಾಗೂ ಜಸ್ಪ್ರೀತ್ ಬುಮ್ರಾ (832), ಶಮಿಗಿಂತ ಹೆಚ್ಚು ಅಂಕ ಗಳಿಸಿದ ವೇಗಿಗಳಾಗಿದ್ದಾರೆ.
ಭರ್ಜರಿ ಬ್ಯಾಟಿಂಗ್: ರ‍್ಯಾಂಕಿಂಗ್’ನಲ್ಲಿ ರೋಹಿತ್-ಕೊಹ್ಲಿ ಅಪರೂಪದ ದಾಖಲೆ
ಅಗ್ರ 10ರಲ್ಲಿ ಭಾರತದ ಮೂವರು ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. 802 ರೇಟಿಂಗ್ ಅಂಕಗಳೊಂದಿಗೆ ಬುಮ್ರಾ 4ನೇ ಸ್ಥಾನದಲ್ಲಿದ್ದು, ಆರ್.ಅಶ್ವಿನ್ 780 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಗ್ರ 10ರ ಪಟ್ಟಿಯಲ್ಲಿ ಅತಿಹೆಚ್ಚು ಸ್ಥಾನ ಗಳಿಸಿರುವ ಕ್ರಿಕೆಟಿಂಗ್ ರಾಷ್ಟ್ರ ಭಾರತ ಎನ್ನುವುದು ವಿಶೇಷ.
ಮಯಾಂಕ್‌ಗೆ 11ನೇ ಸ್ಥಾನ: 8 ಪಂದ್ಯಗಳಲ್ಲಿ 2 ದ್ವಿಶತಕ ಸೇರಿ 858 ರನ್ ಕಲೆಹಾಕಿರುವ ಮಯಾಂಕ್ ಅಗರ್‌ವಾಲ್, ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. 8 ಟೆಸ್ಟ್‌ಗಳಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಯಾಂಕ್ 8ನೇ ಸ್ಥಾನದಲ್ಲಿದ್ದಾರೆ. ಡಾನ್ ಬ್ರಾಡ್ಮನ್ (1210), ಎರ್ವಟನ್ ವೀಕ್ಸ್ (968), ಸುನಿಲ್ ಗವಾಸ್ಕರ್ (938), ಮಾರ್ಕ್ ಟೇಲರ್ (906), ಜಾರ್ಜ್ ಹೆಡ್ಲಿ (904), ಫ್ರಾಂಕ್ ವೊರೆಲ್ (890) ಹಾಗೂ ಹರ್ಬರ್ಟ್ ಸಟ್‌ಕ್ಲಿಫ್ (872) ಮಯಾಂಕ್‌ಗಿಂತ ಹೆಚ್ಚು ರನ್ ಗಳಿಸಿದ್ದರು.
ವಿಶ್ವಕಪ್ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ
691 ರೇಟಿಂಗ್ ಅಂಕ ಹೊಂದಿರುವ ಮಯಾಂಕ್, ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲೂ ಉತ್ತಮ ಪ್ರದರ್ಶನ ತೋರಿದರೆ ಅಗ್ರ 10ರೊಳಗೆ ಸ್ಥಾನ ಪಡೆಯಬಹುದಾಗಿದೆ. ಸದ್ಯ ವಿರಾಟ್ ಕೊಹ್ಲಿ (912 ಅಂಕ) 2ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ್ ಪೂಜಾರ (790) 4ನೇ ಸ್ಥಾನ ಪಡೆದಿದ್ದಾರೆ. ಅಜಿಂಕ್ಯ ರಹಾನೆ (759) 5ನೇ ಸ್ಥಾನ ಹಾಗೂ ರೋಹಿತ್ ಶರ್ಮಾ (701) 10ನೇ ಸ್ಥಾನ ಪಡೆದಿದ್ದಾರೆ. ಅಗ್ರ 10ರಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿರುವುದು ವಿಶೇಷ.
ವಿಂಡೀಸ್ ಏಕದಿನ ಸರಣಿಗೆ ಮಯಾಂಕ್’ಗೆ ಚಾನ್ಸ್ ?
ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 2ನೇ ಸ್ಥಾನ ಹಾಗೂ ಆರ್.ಅಶ್ವಿನ್ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಮುಂದುವರಿದಿದೆ.