ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕಮಾಲ್ ಮಾಡಿರುವ ಮಯಾಂಕ್ ಅಗರ್‌ವಾಲ್ ಭಾರತ ಪರ ಬ್ಲೂ ಜೆರ್ಸಿ ತೊಡಲು ರೆಡಿಯಾಗಿದ್ದಾರೆ. ಮುಂಬರುವ ವಿಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಮಯಾಂಕ್ ಅಗರ್‌ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.18]: ಟೆಸ್ಟ್‌ನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಗಮನ ಸೆಳೆದಿರುವ ಮಯಾಂಕ್ ಅಗರ್‌ವಾಲ್‌ರನ್ನು ಮುಂದಿನ ತಿಂಗಳು ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಆಯ್ಕೆ ಮಾಡುವ ನಿರೀಕ್ಷೆ ಇದೆ. ಬಿಸಿಸಿಐ ಅಂಗಳದಲ್ಲಿ ಅವರ ಆಯ್ಕೆ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!
ಸತತವಾಗಿ ಕ್ರಿಕೆಟ್ ಆಡುತ್ತಿರುವ ಉಪನಾಯಕ ರೋಹಿತ್ ಶರ್ಮಾ, ಮುಂದಿನ ವರ್ಷ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಅವರ ಸ್ಥಾನವನ್ನು ಮಯಾಂಕ್‌ಗೆ ನೀಡುವ ನಿರೀಕ್ಷೆ ಇದೆ. ಮುಂದಿನ ತಿಂಗಳು 15ರಿಂದ ವಿಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಶಿಖರ್ ಧವನ್ ಲಯ ಕಳೆದುಕೊಂಡಿರುವ ಕಾರಣ, ಅವರ ಬದಲಿಗೆ ಮಯಾಂಕ್ ಸ್ಥಾನ ಗಳಿಸಬಹುದು ಎನ್ನುವ ಮಾತು ಸಹ ಕೇಳಿಬರುತ್ತಿದೆ. 2023ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಮಯಾಂಕ್‌ಗೆ ಅವಕಾಶ ನೀಡುವುದು ಸೂಕ್ತ. 2019ರ ಏಕದಿನ ವಿಶ್ವಕಪ್ ವೇಳೆ ಗಾಯಾಳು ವಿಜಯ್ ಶಂಕರ್ ಬದಲಿಗೆ ಮಯಾಂಕ್ರನ್ನು ಆಯ್ಕೆ ಮಾಡಲಾಗಿತ್ತು.
ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್ ಲೀಗ್ ಪ್ರವೇಶಿಸಿದ ಕರ್ನಾಟಕ
ಬಿಸಿಸಿಐ ಆಯ್ಕೆಗಾರರು ಕರ್ನಾಟಕ ಬ್ಯಾಟ್ಸ್‌ಮನ್ ಏಕದಿನ ಮಾದರಿಗೂ ಹೊಂದಿಕೊಳ್ಳುವ ಆಟಗಾರ ಎಂದು ಗುರುತಿಸಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಲಿಸ್ಟ್ ‘ಎ’ ಮಾದರಿಯಲ್ಲಿ ಮಯಾಂಕ್ 13 ಶತಕ ಸಿಡಿಸಿದ್ದು, 50ಕ್ಕಿಂತಲೂ ಹೆಚ್ಚಿನ ಸರಾಸರಿ, 100ಕ್ಕೂ ಹೆಚ್ಚು ಸ್ಟ್ರೈಕ್’ರೇಟ್ ಹೊಂದಿದ್ದಾರೆ. 2020ರ ಐಪಿಎಲ್ನಲ್ಲಿ ಅವರ ಆಟ ನೋಡಿಕೊಂಡು ಮುಂದಿನ ವರ್ಷ ಟಿ20 ವಿಶ್ವಕಪ್ಗೂ ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.