ಮುಂದಿನ ಐಪಿಎಲ್‌ನಲ್ಲೂ 74 ಪಂದ್ಯ: 10 ಪಂದ್ಯ ಹೆಚ್ಚಿಸುವ ನಿರ್ಧಾರ ಕೈಬಿಟ್ಟ ಬಿಸಿಸಿಐ!

By Kannadaprabha News  |  First Published Sep 28, 2024, 10:24 AM IST

ಮುಂಬರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವನ್ನು ಬಿಸಿಸಿಐ ಕೈಬಿಟ್ಟಿದೆ. ಈ ಕುರಿತಾದ ರಿಪೋರ್ಟ್‌ ಇಲ್ಲಿದೆ ನೋಡಿ


ನವದೆಹಲಿ: 2025ರ ಐಪಿಎಲ್‌ನಲ್ಲೂ ಈ ಹಿಂದಿನ 3 ಆವೃತ್ತಿಗಳಂತೆ 74 ಪಂದ್ಯಗಳೇ ಇರಲಿವೆ. ಪಂದ್ಯದ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

2022ರಲ್ಲಿ ಹೊಸ ಮಾಧ್ಯಮ ಹಕ್ಕು ಹರಾಜು ನಡೆದಾಗ 2023 ಹಾಗೂ 2024ರ ಐಪಿಎಲ್‌ನಲ್ಲಿ ತಲಾ 74 ಪಂದ್ಯಗಳು, 2025 ಹಾಗೂ 2026ರಲ್ಲಿ ತಲಾ 84 ಪಂದ್ಯಗಳು ಹಾಗೂ 2027ರಲ್ಲಿ ಗರಿಷ್ಠ 94 ಪಂದ್ಯಗಳನ್ನು ನಡೆಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ಭಾರತದ ತಾರಾ ಆಟಗಾರರ ನಿರಂತರ ಪಂದ್ಯಗಳ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ 74 ಪಂದ್ಯಗಳನ್ನೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.

Tap to resize

Latest Videos

undefined

ಅಲ್ಲದೆ, ಭಾರತ 2025ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಪಂದ್ಯ ಜೂ.11ರಿಂದ ನಡೆಯಲಿದೆ. ಐಪಿಎಲ್‌ ಹೆಚ್ಚು ಕಾಲ ನಡೆದರೆ ಆಟಗಾರರಿಗೆ ಅಗತ್ಯ ವಿಶ್ರಾಂತಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದಿರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ವೇಗದ 1000 ಟೆಸ್ಟ್‌ ರನ್: ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕಮಿಂಡು

ಐಪಿಎಲ್‌ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ಐವರು ಆಟಗಾರರ ರೀಟೈನ್‌ಗೆ ಅವಕಾಶ?

ನವದೆಹಲಿ: ಮುಂದಿನ ಐಪಿಎಲ್‌ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ತಲಾ ಐವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಿಸಿಸಿಐ ಈಗಾಗಲೇ ಈ ಬಗ್ಗೆ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸಿದೆ. ಕೆಲ ಫ್ರಾಂಚೈಸಿಗಳು 5ರಿಂದ 6 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದವು. ಸದ್ಯ ಬಿಸಿಸಿಐ ಗರಿಷ್ಠ ಐವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಿದೆ ಎಂದು ಗೊತ್ತಾಗಿದೆ. ಆದರೆ ಇದರಲ್ಲಿ ವಿದೇಶಿ ಆಟಗಾರರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದೇ ವೇಳೆ ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌(ಆರ್‌ಟಿಎಮ್‌) ಅವಕಾಶ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಕಾನ್ಪುರದಲ್ಲಿ ಮೊದಲ ದಿನ ಮಳೆ ಕಣ್ಣಾಮುಚ್ಚಾಲೆ; ಆಕಾಶ್‌ದೀಪ್‌ಗೆ 2 ವಿಕೆಟ್‌

ಸುಳ್ಳು ಸುದ್ದಿ ಹರಡದಿರಿ: ಆರ್‌ಸಿಬಿ ಸೇರ್ಪಡೆ ಬಗ್ಗೆ ಪೋಸ್ಟ್‌ಗೆ ರಿಷಭ್‌ ಪಂತ್‌ ಕೆಂಡ!

ನವದೆಹಲಿ: ಐಪಿಎಲ್‌ನ ಆರ್‌ಸಿಬಿ ತಂಡ ಸೇರ್ಪಡೆ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದಿದ್ದಾರೆ.

‘ರಿಷಭ್‌ ಆರ್‌ಸಿಬಿ ಮಾಲಿಕರ ಜೊತೆ ಮಾತುಕತೆಯಲ್ಲಿದ್ದಾರೆ. ಆದರೆ ರಿಷಭ್‌ ಆರ್‌ಸಿಬಿ ಸೇರುವುದು ವಿರಾಟ್‌ ಕೊಹ್ಲಿ ವಿರೋಧಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್‌, ‘ಸುಳ್ಳು ಸುದ್ದಿ. ಸಾಮಾಜಿಕ ತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಯಾಕೆ ಹರಡುತ್ತೀರಿ. ಸೂಕ್ಷ್ಮತೆಯಿಂದ ವರ್ತಿಸಿ. ಸತ್ಯವಲ್ಲದ ಸುದ್ದಿಗಳನ್ನು ಸೃಷ್ಟಿಸಬೇಡಿ. ಇಂತಹ ಸುದ್ದಿಗಳು ಹರಡುವುದು ಇದು ಮೊದಲಲ್ಲ, ಕೊನೆಯೂ ಅಲ್ಲ. ಸುದ್ದಿ ಹರಡುವ ಮುನ್ನ ನಿಮ್ಮದೇ ಸ್ವಯಂಘೋಷಿತ ಮೂಲಗಳಲ್ಲಿ ಖಚಿತಪಡಿಸಿಕೊಳ್ಳಿ. ದಿನಕಳೆದಂತೆ ಸುಳ್ಳುಸುದ್ದಿ ವ್ಯಾಪಕವಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ. ರಿಷಭ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದು, ಅವರನ್ನು ಫ್ರಾಂಚೈಸಿಯು ಹರಾಜಿಗೂ ಮುನ್ನ ತಂಡಕ್ಕೆ ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿದೆ.

click me!