ವೇಗದ 1000 ಟೆಸ್ಟ್‌ ರನ್: ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕಮಿಂಡು

By Naveen KodaseFirst Published Sep 28, 2024, 9:29 AM IST
Highlights

ಶ್ರೀಲಂಕಾದ ಪ್ರತಿಭಾನ್ವಿತ ಕ್ರಿಕೆಟಿಗ ಕಮಿಂಡು ಮೆಂಡಿಸ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 1000 ಟೆಸ್ಟ್‌ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಾರೆ

ಗಾಲೆ: ಶ್ರೀಲಂಕಾದ ಯುವ ಬ್ಯಾಟರ್ ಕಮಿಂಡು ಮೆಂಡಿಸ್ ಟೆಸ್ಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಕಮಿಂಡು ಔಟಾಗದೆ 182 ರನ್ ಗಳಿಸಿದರು. ಇದರೊಂದಿಗೆ ತಮ್ಮ 13ನೇ ಇನ್ನಿಂಗ್ಸ್‌ನಲ್ಲೇ 1000 ರನ್‌ಗಳ ಮೈಲುಗಲ್ಲು ತಲುಪಿದರು. 

ಇದು ಏಷ್ಯನ್ ಬ್ಯಾಟರ್‌ಗಳ ವೇಗದ 1000 ರನ್. ಒಟ್ಟಾರೆ ವೇಗದ ಸಾವಿರ ರನ್ ಸರದಾರರ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಬ್ರಾಡ್ಮನ್ 1930ರಲ್ಲಿ ತಮ್ಮ 13 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನ ಹರ್ಬರ್ಟ್‌  ಸುಟ್‌ಕ್ಲಿಫ್, ವೆಸ್ಟ್‌ ಇಂಡೀಸ್‌ನ ಎವರ್‌ಟನ್ ವೀಕ್ಸ್ ತಲಾ 12 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್ ಪೂರೈ ಸಿದ್ದರು. ಕಮಿಂಡು 5 ಶತಕ ಬಾರಿಸಿದ್ದಾರೆ.

Kamindu Mendis fastest to 1000 Test runs in 75 years | 2nd Test, Day 2 Highlights - https://t.co/DO4O1Vd7I8 | pic.twitter.com/M8w1UKzNRN

— Sri Lanka Cricket 🇱🇰 (@OfficialSLC)

In elite company 🎉 |

More on Kamindu Mendis' record-equalling innings ➡ https://t.co/EOawuPf7Qb pic.twitter.com/7yEo0hG7EC

— ICC (@ICC)

Latest Videos

ದಿನೇಶ್‌ ಶತಕ: ಮೊದಲ ದಿನ ಶ್ರೀಲಂಕಾ 306/3

ಗಾಲೆ: ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮೊದಲ ದಿನ ಮೇಲುಗೈ ಸಾಧಿಸಿದೆ. ದಿನದಂತ್ಯಕ್ಕೆ ತಂಡ 3 ವಿಕೆಟ್‌ ಕಳೆದುಕೊಂಡು 306 ರನ್‌ ಗಳಿಸಿದೆ. ದಿನೇಶ್‌ ಚಾಂಡಿಮಲ್‌ 116 ರನ್‌ ಗಳಿಸಿದರೆ, ಕರುಣಾರತ್ನೆ 46 ರನ್‌ ಕೊಡುಗೆ ನೀಡಿದರು. ಸದ್ಯ ಏಂಜೆಲೋ ಮ್ಯಾಥ್ಯೂಸ್‌(ಔಟಾಗದೆ 78) ಹಾಗೂ ಕಮಿಂಡು ಮೆಂಡಿಸ್‌(ಔಟಾಗದೆ 51) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಕಿವೀಸ್‌ ಪರ ಟಿಮ್‌ ಸೌಥಿ, ಗ್ಲೆನ್‌ ಫಿಲಿಪ್ಸ್ ತಲಾ 1 ವಿಕೆಟ್‌ ಪಡೆದರು.

ಕಾನ್ಪುರದಲ್ಲಿ ಮೊದಲ ದಿನ ಮಳೆ ಕಣ್ಣಾಮುಚ್ಚಾಲೆ; ಆಕಾಶ್‌ದೀಪ್‌ಗೆ 2 ವಿಕೆಟ್‌

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿಂಡೀಸ್‌ನ ಬ್ರಾವೋ ಗುಡ್‌ಬೈ

ಟ್ರಿನಿಡಾಡ್: ವೆಸ್ಟ್‌ ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಓರ್ವರಾಗಿರುವ ಡ್ವೇನ್ ಬ್ರಾವೋ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆ ಬ್ರಾವೋ ಗಾಯದಿಂದಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರ ಬಿದ್ದಿದ್ದರು. ಗುರುವಾರ 21 ವರ್ಷ ಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ವಿದಾಯ ಪ್ರಕಟಿಸಿದ್ದಾರೆ.

21 ವರ್ಷಗಳ ಪಯಣ ಕೊನೆಗೊಂಡಿದೆ. ಪ್ರತಿ ಹೆಜ್ಜೆ ಯಲ್ಲೂ ನಾನು ಶೇ.100ರಷ್ಟು ಆಟ ಪ್ರದರ್ಶಿಸಿದ್ದೇನೆ. ಈ ಮೂಲಕ ನನ್ನ ಕನಸು ನನಸಾಗಿಸಿದ್ದೇನೆ' ಎಂದಿದ್ದಾರೆ. 40 ವರ್ಷದ ಬ್ರಾವೋ 2021ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು. 2004ರಲ್ಲಿ ವಿಂಡೀಸ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಬ್ರಾವೊ 295 ಅಂತಾರಾಷ್ಟ್ರೀಯ ಪಂದ್ಯ ಗಳನ್ನಾಡಿದ್ದಾರೆ. ಐಪಿಎಲ್ ಸೇರಿ 10ಕ್ಕೂ ಹೆಚ್ಚು ಟಿ20 ಲೀಗ್‌ಗಳಲ್ಲಿ 582 ಪಂದ್ಯಗಳನ್ನಾಡಿರುವ ಅವರು, 6970 ರನ್ ಗಳಿಸಿದ್ದು, 631 ವಿಕೆಟ್ ಕಿತ್ತಿದ್ದಾರೆ.

ಆರ್‌ಸಿಬಿ ಸಂಭಾವ್ಯ ರೀಟೈನ್ ಆಟಗಾರರ ಪಟ್ಟಿ ಪ್ರಕಟ; ಈ ಮೂವರಿಗೆ ಗೇಟ್‌ಪಾಸ್?

ಚೆನ್ನೈ ತೊರೆದು ಕೆಕೆಆರ್‌ಗೆ ಮೆಂಟ‌ರ್: ನಿವೃತ್ತಿ ಬೆನ್ನಲ್ಲೇ ಬ್ರಾವೋ ಕೆಕೆಆರ್ ತಂಡಕ್ಕೆ ಮಾರ್ಗ ದರ್ಶಕರಾಗಿ ನೇಮಕಗೊಂಡಿದ್ದಾರೆ. ಕಳೆದ ಬಾರಿ ಗೌತಮ್ ಗಂಭೀರ್ ಮಾರ್ಗದರ್ಶಕರಾಗಿದ್ದರು. ಅವರ ಸ್ಥಾನವನ್ನು ಬ್ರಾವೋ ತುಂಬಲಿದ್ದಾರೆ. ಬ್ರಾವೋ 2023, 2024ರಲ್ಲಿ ಚೆನ್ನೈ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರನಿರ್ವಹಿಸಿದ್ದರು.
 

click me!