ಆಟಗಾರರನ್ನು ರಲೀಸ್ ಮಾಡೋ ಮೂಲಕ 8 ಫ್ರಾಂಚೈಸಿಗಳು ಹರಾಜಿಗೆ ರೆಡಿಯಾಗಿವೆ. ಇದೀಗ ತಂಡದಲ್ಲಿ ಬಾಕಿ ಉಳಿದಿರುವ ಹಣವೆಷ್ಟು. ಪ್ರತಿ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮುಂಬೈ(ನ.15): 2020ರ ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳ ಕಸರತ್ತು ಆರಂಭವಾಗಿದೆ. ಆರಂಭದಲ್ಲಿ ಟ್ರೇಡ್ ಮೂಲಕ ಆಟಗಾರರ ವಿನಿಮಯ ಮಾಡಿಕೊಂಡ ಫ್ರಾಂಚೈಸಿಗಳು ಇದೀಗ, ತಂಡದಿಂದ ಆಟಗಾರರನ್ನು ರಿಲೀಸ್ ಮಾಡೋ ಮೂಲಕ ಐಪಿಎಲ್ ಹರಾಜಿಗೆ ಸಜ್ಜಾಗಿದೆ. ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!
undefined
ಆಟಗಾರರನ್ನು ತಂಡದಿಂದ ಕೈಬಿಟ್ಟ ಮೇಲೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗರಿಷ್ಠ ಹಣ ಉಳಿದಿದೆ. ಹೀಗಾಗಿ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27.90 ಕೋಟಿ ರೂಪಾಯಿ ಉಳಿಸಿಕೊಂಡಿದೆ.
ಇದನ್ನೂ ಓದಿ: IPL 2020 ಬಲಿಷ್ಠ 5 ಆಟಗಾರರನ್ನು ಹೊರದಬ್ಬಿದ ಸನ್‌ರೈಸರ್ಸ್..!
8 ಫ್ರಾಂಚೈಸಿಗಳಲ್ಲಿ ಬಾಕಿ ಉಳಿದ ಹಣ ಹಾಗೂ ಗರಿಷ್ಠ ಖರೀದಿ ಮಾಹಿತಿ:
ತಂಡ | ಬಾಕಿ ಉಳಿದ ಹಣ | ಗರಿಷ್ಠ ಖರೀದಿ | ವಿದೇಶಿ ಖರೀದಿ |
ಚೆನ್ನೈ | 14.60 ಕೋಟಿ | 5 | 2 |
ಡೆಲ್ಲಿ | 27.85 ಕೋಟಿ | 11 | 5 |
ಪಂಜಾಬ್ | 42.70 ಕೋಟಿ | 9 | 4 |
ಕೋಲ್ಕತಾ | 35.65 ಕೋಟಿ | 11 | 4 |
ಮುಂಬೈ | 13.05 ಕೋಟಿ | 7 | 2 |
ರಾಜಸ್ಥಾನ | 28.90 ಕೋಟಿ | 11 | 4 |
ಆರ್‌ಸಿಬಿ | 27.90 ಕೋಟಿ | 12 | 6 |
ಹೈದರಾಬಾದ್ | 17.00 ಕೋಟಿ | 7 | 2 |
ಇದನ್ನೂ ಓದಿ: ಮಿಲ್ಲರ್, ಟೈ ಸೇರಿ 7 ಆಟಗಾರರಿಗೆ ಕಿಂಗ್ಸ್ XI ಪಂಜಾಬ್ ಗೇಟ್ ಪಾಸ್..!