
ಬೆಂಗಳೂರು[ನ.15]: 2016ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ, ಮುಂಬರುವ 2020ರ ಆಟಗಾರರ ಹರಾಜಿಗೂ ಮುನ್ನ ಐವರು ಕ್ರಿಕೆಟಿಗರನ್ನು ತಂಡದಿಂದ ಹೊರದಬ್ಬಿದೆ.
IPL 2020; 6 ಸ್ಟಾರ್ ಕ್ರಿಕೆಟಿಗರಿಗೆ ಕೋಕ್ ನೀಡಿದ CSK!
ನಿರೀಕ್ಷೆಯಂತೆಯೇ ಐಸಿಸಿ ನಿಷೇಧಕ್ಕೆ ಗುರಿಯಾಗಿರುವ ಶಕೀಬ್ ಅಲ್ ಹಸನ್’ರನ್ನು ಸನ್‌ರೈಸರ್ಸ್ ಹೈದರಬಾದ್ ತಂಡ ಹೊರಗಿಟ್ಟಿದೆ. ಇನ್ನುಳಿದಂತೆ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್, ಯೂಸುಫ್ ಪಠಾಣ್ ಅವರಿಗೂ ಕೊಕ್ ನೀಡಲಾಗಿದೆ. ಇನ್ನು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್’ಮನ್’ಗಳಾದ ದೀಪಕ್ ಹೂಡಾ ಹಾಗೂ ರಿಕಿ ಬೊಯೆಯನ್ನು ತಂಡದಿಂದ ಕೈಬಿಡಲಾಗಿದೆ.
IPL 2020: ಹನ್ನೊಂದು ಆಟಗಾರರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್
ಡಿಸೆಂಬರ್ 19ರಂದು ನಡೆಯಲಿರುವ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 5 ದೇಶಿ ಹಾಗೂ 2 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
SRH ತಂಡದಿಂದ ಗೇಟ್ ಪಾಸ್ ಪಡೆದ ಆಟಗಾರರಿವರು:
1. ದೀಪಕ್ ಹೂಡಾ
2. ಮಾರ್ಟಿನ್ ಗಪ್ಟಿಲ್
3. ರಿಕಿ ಬೊಯೆ
4. ಶಕೀಬ್ ಅಲ್ ಹಸನ್
5. ಯೂಸುಫ್ ಪಠಾಣ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.