ನ್ಯೂಜಿಲೆಂಡ್ ವಿರುದ್ದ ಸೌತ್ ಆಫ್ರಿಕಾ ಭರ್ಜರಿ 190 ರನ್ ಗೆಲುವು ದಾಖಲಿಸಿದೆ. ಈ ಗೆಲವನ್ನು ಸೌತ್ ಆಫ್ರಿಕಾ ತಂಡಕ್ಕಿಂತ ಪಾಕಿಸ್ತಾನ ತಂಡ ಸಂಭ್ರಮಿಸಿದೆ. ಕಾರಣ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವಿನ ಹಿಂದೆ ಪಾಕಿಸ್ತಾನದ ಸೆಮಿಫೈನಲ್ ಕನಸು ಅಡಗಿತ್ತು. ಇದೀಗ ಪಾಕಿಸ್ತಾನ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ.
ಪುಣೆ(ನ.01) ಐಸಿಸಿ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಹೋರಾಟ ತೀವ್ರಗೊಳ್ಳುತ್ತಿದೆ. ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನ ಖಚಿತಪಡಿಸಲು ಪೈಪೋಟಿ ಹೆಚ್ಚಾಗಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಸೌತ್ ಆಫ್ರಿಕಾ 190 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಗೆಲುವನ್ನು ಪಾಕಿಸ್ತಾನ ಸಂಭ್ರಮಿಸಿದೆ. ಕಾರಣ ಇಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆದ್ದರೆ ಮಾತ್ರ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತ. ಇಷ್ಟೇ ಅಲ್ಲ, ಪಾಕಿಸ್ತಾನದ ಸೆಮೀಸ್ ಪ್ರವೇಶ ಇತರ ತಂಡದ ಫಲಿತಾಂಶದ ಮೇಲೂ ಅವಲಂಬಿತವಾಗಿದೆ. ಸದ್ಯ ಸೌತ್ ಆಫ್ರಿಕಾ ಭರ್ಜರಿ ಗೆಲುವಿನ ಸಂಭ್ರಮದಲ್ಲಿ ಪಾಕಿಸ್ತಾನ ತೇಲಾಡಿದೆ.
ಪಾಕಿಸ್ತಾನದ ಸೆಮಿಫೈನಲ್ ಪ್ರವೇಶ ಸುಲಭವಾಗಿಲ್ಲ. ಬಹುತೇಕ ಬಾಗಿಲು ಬಂದ್ ಆಗಿದೆ. ಆದರೆ ಕೊನೆಯ ಅವಕಾಶವೊಂದಿದೆ. ಪಾಕಿಸ್ತಾನ ಉಳಿದಿರುವ ಎರಡು ಪಂದ್ಯದಲ್ಲೂ ಗೆಲುವು ಸಾಧಿಸಬೇಕು. ಇದರ ಜೊತೆಗೆ ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಾಣಬೇಕು. ಈ ಪೈಕಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮುಗ್ಗರಿಸಿದೆ. ಇನ್ನು ಶ್ರೀಲಂಕಾ ಕಂಡ ಕನಿಷ್ಠ ಒಂದು ಪಂದ್ಯದಲ್ಲಿ ಸೋಲಬೇಕು. ಆಫ್ಘಾನಿಸ್ತಾನ ಗರಿಷ್ಠ ಒಂದು ಪಂದ್ಯವನ್ನು ಮಾತ್ರ ಗೆಲ್ಲಬೇಕು. ಹೀಗಾದಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್
ಈ ಲೆಕ್ಕಾಚಾರದ ಪ್ರಕಾರ ಸೋಲು ಗೆಲುವು ಕಷ್ಟ. ಆದರೆ ಕ್ರಿಕೆಟ್‌ನಲ್ಲಿ ಅಚ್ಚರಿ ಫಲಿತಾಂಶ ಹಲವು ತಂಡಗಳಿಗೆ ವರವಾದ ಉದಾಹರಣೆಗಳಿವೆ. ಇದೇ ಮ್ಯಾಜಿಕ್‌ಗಾಗಿ ಪಾಕಿಸ್ತಾನ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ದ ಸೌತ್ ಆಫ್ರಿಕಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಕ್ವಿಂಟನ್ ಡಿಕಾಕ್ ಹಾಗೂ ವ್ಯಾನ್ ಡರ್ ಡೆಸೆನ್ ಶತಕ ಸಿಡಿಸಿ ಮಿಂಚಿದ್ರು. ಡಿಕಾಕ್ 114 ರನ್ ಸಿಡಿಸಿದ್ದರೆ, ಡಸೆನ್ 133 ರನ್ ಸಿಡಿಸಿದ್ದರು. ಡೇವಿಡ್ ಮಿಲ್ಲರ್ 53 ರನ್ ಕಾಣಿಕೆ ನೀಡಿದ್ದರು. ಈ ಮೂಲಕ ಸೌತ್ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 357 ರನ್ ಸಿಡಿಸಿತ್ತು.
'ಇದೇ ತಂಡ ವಿಶ್ವಕಪ್ ಗೆಲ್ಲಲಿದೆ': 2023ರ ಒನ್‌ಡೇ ವಿಶ್ವಕಪ್ ಫೈನಲ್ ಫಲಿತಾಂಶ ಭವಿಷ್ಯ ನುಡಿದ ನೇಥನ್ ಲಯನ್..!
ಈ ಗುರಿ ಚೇಸ್ ಮಾಡಿದ ನ್ಯೂಜಿಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಸೌತ್ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿತು. ಗ್ಲೆನ್ ಫಿಲಿಪ್ 60 ರನ್ ಕಾಣಿಕೆ ಹೊರತುಪಡಿಸಿದರೆ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ. 167ರನ್‌ಗೆ ನ್ಯೂಜಿಲೆಂಡ್ ಆಲೌಟ್ ಆಯಿತು.