ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಲೇ ಇದೆ. ಇದರ ಬೆನ್ನಲ್ಲೇ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮುಂಬೈ(ನ.01) ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಪೋಸ್ಟ್, ಪ್ರತಿಕ್ರಿಯೆಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇನ್ನು ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ಹಾಜರಾಗುವ ಮೂಲಕ ಉಹಾಪೋಹಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಈ ಬೆಳವಣಿಗೆ ನಡುವೆ ಇದೀಗ ಗಿಲ್ ಹಾಗೂ ಸಾರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮುಕೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನೆ ಸಮಾರಂಭ ಅದ್ಧೂರಿಯಾಗಿ ಮುಂಬೈನಲ್ಲಿ ನಡೆದಿದೆ. ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವು ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಶುಬಮನ್ ಗಿಲ್ ಪಾಲ್ಗೊಂಡಿದ್ದಾರೆ. ಇತ್ತ ಸಾರಾ ತೆಂಡೂಲ್ಕರ್ ಕೂಡ ಪಾಲ್ಗೊಂಡಿದ್ದಾರೆ. ಇದರೆ ಇವರಿಬ್ಬರು ಜೊತೆಯಾಗಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
IND vs BAN ಪಂದ್ಯದ ವೇಳೆ ಸಾರಾ ತೆಂಡುಲ್ಕರ್ ಪ್ರತ್ಯಕ್ಷ, ಗಿಲ್ ಸೆಂಚುರಿ ಪಕ್ಕಾ ಎಂದ ಫ್ಯಾನ್ಸ್!
ಇಬ್ಬರು ಜೊತೆಯಾಗಿ ನಡೆದುಕೊಂಡು ಬರುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದು ಇವರಿಬ್ಬರ ಡೇಟಿಂಗ್ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಮುಂಬೈನಲ್ಲಿ ಬೀಡಿ ಬಿಟ್ಟಿದೆ. ನವೆಂಬರ್ 2 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಂಬೈನಲ್ಲಿರುವ ಶುಭಮನ್ ಗಿಲ್ ಜಿಯೋ ವರ್ಲ್ಡ್ ಪ್ಲಾಜಾ ಕಾರ್ಯಕ್ರಮದಲ್ಲಿ ಸಾರಾ ಜೊತೆಗೆ ಕಾಣಿಸಿಕೊಂಡು ಇದೀಗ ವೈರಲ್ ಆಗಿದ್ದಾರೆ.
Shubman Gill and Sara Tendulkar Spotted Together at Jio World Plaza Opening...!! pic.twitter.com/wVurLfROXs
— Ayush Aggarwal (@AyushAg44506532)
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ಹಾಜರಾಗಿದ್ದರು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಸಾರಾ ತೆಂಡೂಲ್ಕರ್ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಗಿಲ್ ಪ್ರತಿ ಬೌಂಡರಿಯನ್ನು ಚಪ್ಪಾಳೆ ಮೂಲಕ ಹುರಿದುಂಬಿಸಿದ್ದರು. ಸಾರಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಫೋಟೋಗಳು ಹರಿದಾಡಿತ್ತು.
ಶುಭ್‌ಮನ್ ಗಿಲ್‌ಗಾಗಿ ಮಿಡಿದ ಸಾರಾ ಹೃದಯ..! ತೆಂಡುಲ್ಕರ್ ಪುತ್ರಿಯ ಹೊಸ ಟ್ವೀಟ್ ವೈರಲ್
ಈಗಾಗಲೇ ಇವರಿಬ್ಬರು ಸಾಮಾಜಿಕ ಮಾಧ್ಯಮದಲ್ಲಿನ ಹಾಕಿರುವ ಪೋಸ್ಟ್‌ಗಳು ಬಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಗಿಲ್ ಐಸಿಸಿ ಪ್ರಶಸ್ತಿ ಸ್ವೀಕರಿಸಿದ್ದರು. ಈ ವೇಳೆ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಗಿಲ್‌ಗೆ ಅಭಿನಂದನೆ. ಕ್ರಿಕೆಟ್‌ನ ರಾಜ ಶುಭಮನ್ ಗಿಲ್ ಎಂದು ಸಾರಾ ತೆಂಡೂಲ್ಕರ್ ಪೋಸ್ಟ್ ಹಾಕಿದ್ದರು. ಇಷ್ಟೇ ಅಲ್ಲ ಗಿಲ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.