ಟೀಮ್ ಇಂಡಿಯಾ ಕರೆ ಪಡೆಯುವ ನಿರೀಕ್ಷೆಯಲ್ಲಿ ಅಸ್ಸಾಂನ ಯುವ ಆಲ್ರೌಂಡರ್ ರಿಯಾನ್ ಪರಾಗ್, ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮುರಿದಿದ್ದಾರೆ.
ನವದೆಹಲಿ (ನ.1): ಯುವ ಆಲ್ರೌಂಡರ್ ರಿಯಾನ್ ಪರಾಗ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿ ಟಿ20 ಟೂರ್ನಿಯಲ್ಲಿ ಅಸ್ಸಾಂನ ಯುವ ಆಲ್ರೌಂಡರ್ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ದಂಗಾಗ ಹೋಗಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾದ ಯಾವ ಬ್ಯಾಟ್ಸ್‌ಮನ್‌ಗಳೂ ಕೂಡ ಮಾಡದ ದಾಖಲೆಯನ್ನು ರಿಯಾನ್ ಪರಾಗ್ ಮಾಡಿದ್ದಾರೆ. ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಿಯಾನ್ ಪರಾಗ್ ಸತತ 7 ಪಂದ್ಯಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 78 ರನ್ ಹಾಗೂ 9 ರನ್‌ಗೆ ಮೂರು ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ನಿರ್ವಹಣೆಯೊಂದಿಗೆ ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರೇಂದ್ರ ಸೆಹ್ವಾಗ್ ಅವರ ಅಪರೂಪದ ದಾಖಲೆಯನ್ನು ರಿಯಾನ್ ಪರಾಗ್ ಮುರಿದಿದ್ದಾರೆ. ಅದು ಮಾತ್ರವಲ್ಲದೆ, ಟೀಮ್ ಇಂಡಿಯಾಕ್ಕೆ ಅವರ ಆಯ್ಕೆಯ ಹಾದಿ ಕೂಡ ಇನ್ನಷ್ಟು ಸುಗಮವಾಗಿದೆ.
ಅಕ್ಟೋಬರ್ 17 ರಂದು ಬಿಹಾರ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 61 ರನ್ ಹಾಗೂ 25 ರನ್‌ಗೆ 2 ವಿಕೆಟ್ ಸಾಧನೆ ಮಾಡಿದ್ದ ರಿಯಾನ್ ಪರಾಗ್, ಸರ್ವೀಸಸ್ ವಿರುದ್ಧ ಅಜೇಯ 78 ರನ್ ಮತ್ತು 9 ರನ್‌ಗೆ 3 ವಿಕೆಟ್, ಸಿಕ್ಕಿಂ ವಿರುದ್ಧ ಅಜೇಯ 53 ರನ್ ಮತ್ತು 17 ರನ್‌ಗೆ 1 ವಿಕೆಟ್, ಚಂಡೀಗಢ ವಿರುದ್ಧ 76 ರನ್ ಮತ್ತು 37 ರನ್‌ಗೆ 1 ವಿಕೆಟ್, ಹಿಮಾಚಲದ ವಿರುದ್ಧ 72 ರನ್ ಮತ್ತು 35 ರನ್‌ಗೆ 1 ವಿಕೆಟ್, ಕೇರಳ ವಿರುದ್ಧ ಅಜೇಯಸ 57 ರನ್ ಮತ್ತು 17 ರನ್‌ಗೆ 1 ವಿಕೆಟ್, ಕೊನೆಯಲ್ಲಿ ಬಂಗಾಳ ವಿರುದ್ಧ ಮಂಗಳವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಅಜೇಯ 50 ರನ್ ಮತ್ತು 23 ರನ್‌ಗೆ 2 ವಿಕೆಟ್ ಉರುಳಿಸುವ ಮೂಲಕ ರಿಯಾನ್ ಪರಾಗ್ ದಾಖಲೆ ಮಾಡಿದ್ದಾರೆ.
'ಇದು ಟೀಮ್ ಇಂಡಿಯಾ ಅಲ್ಲ..' ವಿಶ್ವಕಪ್ ತಂಡದ ಕುರಿತಾಗಿ ವೀರೇಂದ್ರ ಸೆಹ್ವಾಗ್ ಅಚ್ಚರಿಯ ರಿಯಾಕ್ಷನ್!
ಈ ಸಾಧನೆಯೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ರಿಯಾನ್ ಪರಾಗ್ ಮುರಿದಿದ್ದಾರೆ. ಸುಲ್ತಾನ್ ಆಫ್ ಮುಲ್ತಾನ್ ವೀರೇಂದ್ರ ಸೆಹ್ವಾಗ್ ಮಾತ್ರವೇ ಅಲ್ಲ, ಇಂಗ್ಲೆಂಡ್‌ನ ಜೋಸ್ ಬಟ್ಲರ್, ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಹಾಗೂ ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ ದಾಖಲೆಯನ್ನೂ ರಿಯಾನ್ ಪರಾಗ್ ಮುರಿದಿದ್ದಾರೆ. ಇವರೆಲ್ಲರೂ ಟಿ20ಯಲ್ಲಿ ಸತತ 6 ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್ಸ್ ಎನಿಸಿದ್ದಾರೆ.
ದೇಶದ ಮರುನಾಮಕರಣ; ಕಾಂಗ್ರೆಸ್, ಇಂಡಿ ಒಕ್ಕೂಟದ ಮೇಲೆ ಮುಗಿಬಿದ್ದ ವೀರೇಂದ್ರ ಸೆಹ್ವಾಗ್!