ಮುಂಬೈ(ನ.15): ಸಚಿನ್. ಸಚಿನ್..ಸಚಿನ್...ಈ ಮೂರಕ್ಷರ ಅದೆಷ್ಟು ದೊಡ್ಡ ಹೆಸರು ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ವಿಶ್ವ ಕ್ರಿಕೆಟ್ ಆಳಿದ ಸಾಮ್ರಾಟ. ದಾಖಲೆಗಳ ಸರದಾರ, ಎಲ್ಲಕ್ಕಿಂತ ಹೆಚ್ಚಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಹಚ್ಚಹಸುರಾಗಿರುವ ವಾಮನಮೂರ್ತಿ. ವಿಶ್ವ ಕ್ರಿಕೆಟ್‌ನಲ್ಲಿ ಇಂದು ಮಹತ್ವದ ದಿನ. ಇದೇ ದಿನ, ಅಂದರೆ 32 ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ (Sahin tendulkar)ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನ.
ನವೆಂಬರ್ 15, 1989. ಪಾಕಿಸ್ತಾನ(Pakistan) ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ(Tet cricket) ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾಗೆ(Team India) ಪದಾರ್ಪಣೆ ಮಾಡಿದರು. ವಿಶ್ವದ ಅತ್ಯಂತ ಮಾರಕ ಬೌಲರ್‌ಗಳಾದ ಇಮ್ರಾನ್ ಖಾನ್, ವಕಾರ್ ಯೂನಿಸ್ ಹಾಗೂ ವಾಸಿಮ್ ಅಕ್ರಮ ದಾಳಿಗೆ ಎದೆಯೊಡ್ಡಿ ನಿಂತ 16ರ ಪೋರ, ಬಳಿಕ ಜಗತ್ತೆ ತಿರುಗುವಂತೆ ಮಾಡಿದ ಕ್ರಿಕೆಟ್ ದೇವರಾಗಿ ನಿವೃತ್ತಿಯಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಪದಾರ್ಪಣಾ ದಿನಕ್ಕೆ ಬಿಸಿಸಿಐ(Bcci) ಎರಡು ಫೋಟೋ ಹಂಚಿಕೊಂಡು ಸ್ಮರಣೀಯ ನೆನಪನ್ನು ಹಂಚಿಕೊಂಡಿದೆ. ಪದಾರ್ಪಣೆ ದಿನದಂದು ಕ್ರಿಕೆಟ್ ಅಭಿಮಾನಿಗಳು ಸಚಿನ್ ತೆಂಡುಲ್ಕರ್‌ಗೆ ಧನ್ಯವಾದ ಹೇಳಿದ್ದಾರೆ.
undefined
Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್ ದೇವರು!
ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ 15 ರನ್ ಸಿಡಿಸಿ ಔಟಾಗಿದ್ದರು. ವಕಾರ್ ಯೂನಿಸ್‌ಗೆ ವಿಕೆಟ್ ಒಪ್ಪಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ಎಂದೇ ಗುರುತಿಸಿಕೊಂಡಿರುವ ಸಚಿನ್ ತೆಂಡುಲ್ಕರ್ 2013ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಈಗಲೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಸಚಿನ್ ಹೆಸರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಸಿಡಿಸಿದ ದಾಖಲೆಯೂ ಸಚಿನ್ ಹೆಸರಲ್ಲೇ ಇದೆ. ಹೀಗೆ ಹತ್ತು ಹಲವು ದಾಖಲೆಗಳು ಸಚಿನ್ ಹೆಸರಲ್ಲಿ ಉಳಿದುಕೊಳ್ಳಲಿದೆ.
24 ವರ್ಷಗಳ ಕಾಲ ಕ್ರಿಕೆಟ್ ಆಳಿದ ಸಚಿನ್ ತೆಂಡುಲ್ಕರ್ ದಾಖಲೆ ವೀರ ಎಂದೇ ಖ್ಯಾತಿ ಪಡೆದಿದ್ದಾರೆ. 200 ಟೆಸ್ಟ್ ಪಂದ್ಯ ಆಡಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡುಲ್ಕರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ 15,921 ರನ್ ಸಿಡಿಸಿದ್ದಾರೆ. 248 ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ಬೆಸ್ಟ್ ಸ್ಕೋರ್. ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕ, 6 ದ್ವಿಶತಕ, 68 ಆರ್ಧಶತಕ ಸಿಡಿಸಿದ್ದಾರೆ. ಸಚಿನ್ ಬ್ಯಾಟಿಂಗ್ ಸರಾಸರಿ 53.79.
ಏಕದಿನದಲ್ಲಿ 463 ಪಂದ್ಯಗಳನ್ನಾಡಿರುವ ಮಾಸ್ಟರ್, 18,426 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಸಚಿನ್ ಬೆಸ್ಟ್ ಸ್ಕೋರ್ 200. 49 ಸೆಂಚುರಿ, 96 ಹಾಫ್ ಸೆಂಚುರಿ ಹಾಗೂ 1 ಡಬಲ್ ಸೆಂಚುರಿ ಸಿಡಿಸಿದ್ದಾರೆ. ಏಕದಿನದಲ್ಲಿ ಸಚಿನ್ ಬ್ಯಾಟಿಂಗ್ ಸರಾಸರಿ 44.83. ಏಕೈಕ ಟಿ20 ಪಂದ್ಯವನ್ನೂ ಆಡಿರುವ ಸಚಿನ್ ತೆಂಡುಲ್ಕರ್ ವಿಶ್ವದ ಶ್ರೇಷ್ಠ ಕ್ರಿಕೆಟ ಎನಿಸಿಕೊಂಡಿದ್ದಾರೆ.
ರೈತನ ಮಗಳನ್ನು ಎಂಬಿಬಿಎಸ್‌ಗೆ ಸೇರಿಸಿದ ಸಚಿನ್ ತೆಂಡುಲ್ಕರ್
ಸಚಿನ್ ತೆಂಡುಲ್ಕರ್ ಹಲವು ಅವಿಸ್ಮರಣೀಯ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ಅದರಲ್ಲೂ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 98 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಶೋಯೆಬ್ ಅಕ್ತರ್ ಎಸೆತದಲ್ಲಿ ಸಿಡಿಸಿದ ಸಿಕ್ಸರ್ ಯಾರು ಮರೆತಿಲ್ಲ. ಈ ರೀತಿಯ ಹತ್ತು ಹಲವು ಇನ್ನಿಂಗ್ಸ್ ಸಚಿನ್ ಬ್ಯಾಟಿಂಗ್‌ನಲ್ಲಿ ಮೂಡಿ ಬಂದಿದೆ.
2013ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 200ನೇ ಟೆಸ್ಟ್ ಪಂದ್ಯದೊಂದಿಗೆ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಮೂರು ಮಾದರಿಗಳಿಂದ ಸಚಿನ್ ತೆಂಡುಲ್ಕರ್ 34,357 ರನ್ ಸಿಡಿಸಿದ್ದಾರೆ. ಗರಿಷ್ಠ ರನ್ ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ ನಂತರದ ಸ್ಥಾನವನ್ನು ಕುಮಾರ ಸಂಗಕ್ಕಾರ ಅಲಂಕರಿಸಿದ್ದಾರೆ. ಸಂಗಕ್ಕಾರ 6,000 ರನ್ ಹಿನ್ನಡೆಯಲ್ಲಿದ್ದಾರೆ. ಇಬ್ಬರು ದಿಗ್ಗಜರು ಕ್ರಿಕೆಟ್‌ನಿಂದ ನಿವೃತ್ತಿಯಾದರೂ ದಾಖಲೆ ಹಾಗೆ ಇದೆ.
ಭಾರತ ತಂಡಕ್ಕೆ ಪದಾರ್ಪಣೆಗೂ ಮೊದಲು ಪಾಕಿಸ್ತಾನ ಪರ ಆಡಿದ್ದ ಸಚಿನ್ ತೆಂಡುಲ್ಕರ್!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನಗೆ ಪಾತ್ರರಾಗಿದ್ದಾರೆ. ಇನ್ನು ಪದ್ಮಶ್ರೀ, ಪದ್ಮವಿಭೂಷಣ, ಖೇಲ್ ರತ್ನ ಸೇರಿದಂತೆ 48ಕ್ಕೂ ಹೆಚ್ಚಿನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿರುವ ಸಚಿನ್ ತೆಂಡುಲ್ಕರ್, ಕ್ರಿಕೆಟ್‌ಗೆ ವಿದಾಯ ಹೇಳಿದರೂ ಅವರ ಇನ್ನಿಂಗ್ಸ್ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.