ICC T20 World Cup: 2022ರಲ್ಲಿ ಆಸ್ಪ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ಟೂರ್ನಿ

By Suvarna NewsFirst Published Nov 15, 2021, 9:49 AM IST
Highlights

* 2021 ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಯಶಸ್ವಿ ಮುಕ್ತಾಯ

* 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ

* ಇನ್ನು 11 ತಿಂಗಳಲ್ಲಿ ಮತ್ತೊಂದು ಟಿ20 ವಿಶ್ವಕಪ್ ಟೂರ್ನಿ ಆರಂಭ 

ದುಬೈ(ನ.15): 2016ರ ಟಿ20 ವಿಶ್ವಕಪ್‌ (ICC T20 World Cup) ಬಳಿಕ ಮತ್ತೊಂದು ವಿಶ್ವಕಪ್‌ಗಾಗಿ ಕ್ರಿಕೆಟ್ ಅಭಿಮಾನಿಗಳು (Cricket Fans) 5 ವರ್ಷ ಕಾಯುಬೇಕಾಗಿತ್ತು. ಆದರೆ ಈ ಬಾರಿ ಹಾಗಾಗಲ್ಲ. ಇನ್ನು ಕೇವಲ 11 ತಿಂಗಳಲ್ಲಿ ಮತ್ತೊಂದು ಟಿ20 ವಿಶ್ವಕಪ್‌ ನಡೆಯಲಿದೆ.

ಹೌದು, 2022ರ ಅಕ್ಟೋಬರ್ 16ರಿಂದ ನವೆಂಬರ್13ರ ವರೆಗೂ ಆಸ್ಪ್ರೇಲಿಯಾದಲ್ಲಿ (Australia) ವಿಶ್ವಕಪ್‌ ನಿಗದಿಯಾಗಿದೆ. ಹಾಲಿ ಚಾಂಪಿಯನ್‌ ಆಗಿ ಆಸೀಸ್‌ ತವರಿನಲ್ಲಿ ಮತ್ತೊಂದು ವಿಶ್ವಕಪ್‌ ಗೆಲ್ಲಲು ಹೋರಾಟ ನಡೆಸಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿದ್ದು, 2021ರ ವಿಶ್ವಕಪ್‌ನ ಸೂಪರ್‌-12 ಹಂತದಲ್ಲಿ ಆಡಿದ 12 ತಂಡಗಳು ನೇರ ಅರ್ಹತೆ ಪಡೆದಿವೆ. ಇನ್ನು 4 ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಯಲಿದೆ.

ಐಪಿಎಲ್ ಆಯ್ತು, ಈಗ ಟಿ20 ವಿಶ್ವಕಪ್‌ ಕೂಡಾ ಯಶಸ್ವಿ..!

2021ರ ಐಸಿಸಿ ಟಿ20 ವಿಶ್ವಕಪ್‌ಗೆ ತೆರೆ ಬಿದ್ದಿದೆ. ಐಪಿಎಲ್‌ (IPL 2021) 14ನೇ ಆವೃತ್ತಿಯ ಭಾಗ-2ರ ಪಂದ್ಯಗಳಿಗೆ ಯಶಸ್ವಿಯಾಗಿ ಆತಿಥ್ಯ ನೀಡಿದ್ದ ಯುಎಇ ಕ್ರಿಕೆಟ್‌ ಮಂಡಳಿ, ಟಿ20 ವಿಶ್ವಕಪ್‌ನ ಪಂದ್ಯಗಳನ್ನೂ ಅಷ್ಟೇ ಅಚ್ಚುಕಟ್ಟಾಗಿ ನಡೆಸಿಕೊಟ್ಟಿತು. ಎರಡೂ ಟೂರ್ನಿಗಳನ್ನು ಬಿಸಿಸಿಐ (BCCI) ಆಯೋಜಿಸಿತ್ತು.

T20 World Cup: ಹೀಗಿತ್ತು ನೋಡಿ ಆಸ್ಟ್ರೇಲಿಯಾ ತಂಡದ ಫೈನಲ್‌ವರೆಗಿನ ಪಯಣ

ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಟೂರ್ನಿಗೆ ಕಾಲಿಟ್ಟ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್‌ಗೆ ನಿರಾಸೆ ಉಂಟಾಯಿತು. ಭಾರತ ಸೂಪರ್‌-12 ಹಂತದಲ್ಲೇ ಹೊರಬಿದ್ದರೆ, ಇಂಗ್ಲೆಂಡ್‌ ಸೆಮೀಸ್‌ನಲ್ಲಿ ಸೋಲುಂಡಿತು. ಹಿಂದಿನ ಆವೃತ್ತಿಯ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ನಿರಾಸೆ ಮೂಡಿಸಿತು.

T20 World Cup: ಸತತ 5 ಸರಣಿ ಸೋತು ವಿಶ್ವಕಪ್‌ಗೆ ಕಾಲಿಟ್ಟಿದ್ದ ಆಸೀಸ್ ಈಗ ಚಾಂಪಿಯನ್‌..!

ಇದೇ ಮೊದಲ ಟಿ20 ವಿಶ್ವಕಪ್‌ನಲ್ಲಿ ಆಡಿದ ನಮೀಬಿಯಾ (Namibia) ಆಕರ್ಷಕ ಪ್ರದರ್ಶನದೊಂದಿಗೆ ಗಮನ ಸೆಳೆಯಿತು. ಈ ಟಿ20 ವಿಶ್ವಕಪ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಕೆಲ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿತು. ಐರ್ಲೆಂಡ್‌ನ ಕರ್ಟಿಸ್‌ ಕ್ಯಾಂಫರ್‌, ನೆದರ್‌ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ 4 ಎಸೆತಗಳಲ್ಲಿ 4 ವಿಕೆಟ್‌ ಕಬಳಿಸಿ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕೇವಲ 3ನೇ ಬೌಲರ್‌ ಎನ್ನುವ ಹಿರಿಮೆಗೆ ಪಾತ್ರರಾದರು. ಪಾಕಿಸ್ತಾನ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದು ಸಂಭ್ರಮಿಸಿತು.

ಫೈನಲ್‌ ಪಂದ್ಯಕ್ಕೆ ಕ್ರೀಡಾಂಗಣ ಖಾಲಿ ಖಾಲಿ!

ಟಿ20 ವಿಶ್ವಕಪ್‌ಗೆ ಯುಎಇ ಸರ್ಕಾರ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿತ್ತು. ಆದರೆ ದುಬೈ ಕ್ರೀಡಾಂಗಣ ಭಾನುವಾರ ಖಾಲಿ ಖಾಲಿಯಾಗಿತ್ತು. ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ (Aus vs NZ) ನಡುವಿನ ಪಂದ್ಯದ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವಲ್ಲಿ ಆಯೋಜಕರು ವಿಫಲರಾಗಿದ್ದರು. ಕ್ರೀಡಾಂಗಣ ಕೇವಲ ಶೇ.30ರಿಂದ 35ರಷ್ಟುಭರ್ತಿಯಾಗಿತ್ತು. ಭಾರತ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಪಂದ್ಯಗಳಿಗೆ ಮಾತ್ರ ಕ್ರೀಡಾಂಗಣಗಳು ಭರ್ತಿಯಾಗಿದ್ದವು.

T20 World cup 2021; ನ್ಯೂಜಿಲೆಂಡ್ ಮಣಿಸಿದ ಆಸ್ಟ್ರೇಲಿಯಾ ಟಿ20 ಚಾಂಪಿಯನ್!

ಟಾಸ್‌ ಗೆದ್ದವರೇ ಬಾಸ್‌!

2007ರಿಂದ 2021ರ ವರೆಗೂ ಒಟ್ಟು 7 ಟಿ20 ವಿಶ್ವಕಪ್‌ಗಳಲ್ಲಿ 6ರಲ್ಲಿ ಟಾಸ್‌ ಗೆದ್ದ ತಂಡವೇ ಚಾಂಪಿಯನ್‌ ಆಗಿದೆ. 2009ರ ಫೈನಲ್‌ನಲ್ಲಿ ಶ್ರೀಲಂಕಾ ಟಾಸ್‌ ಗೆದ್ದಿತ್ತು. ಆದರೆ ಪಾಕಿಸ್ತಾನ ಚಾಂಪಿಯನ್‌ ಆಗಿತ್ತು. ಉಳಿದಂತೆ 2007ರಲ್ಲಿ ಭಾರತ, 2010ರಲ್ಲಿ ಇಂಗ್ಲೆಂಡ್‌, 2012ರಲ್ಲಿ ವಿಂಡೀಸ್‌, 2014ರಲ್ಲಿ ಲಂಕಾ, 2016ರಲ್ಲಿ ವಿಂಡೀಸ್‌, 2021ರಲ್ಲಿ ಆಸೀಸ್‌ ಫೈನಲ್‌ನಲ್ಲಿ ಟಾಸ್‌ ಜಯಿಸಿ ಚಾಂಪಿಯನ್‌ ಆದವು.

click me!