Sanju Samson Helping Hands: ಕೇರಳ ಫುಟ್ಬಾಲಿಗನ ವಿಮಾನ ಟಿಕೆಟ್‌ಗೆ ಕ್ರಿಕೆಟಿಗನ ನೆರವು

By Suvarna News  |  First Published Nov 15, 2021, 10:20 AM IST

* ಯುವ ಫುಟ್ಬಾಲ್ ಆಟಗಾರನಿಗೆ ನೆರವಾದ ಸಂಜು ಸ್ಯಾಮ್ಸನ್‌

* ಸ್ಪೇನ್‌ಗೆ ಟಿಕೆಟ್‌ ಸ್ಪಾನ್ಸರ್‌ ಮಾಡಿದ ಕೇರಳ ಕ್ರಿಕೆಟಿಗ

* ಬಿಎಫ್‌ಸಿ ತಂಡಕ್ಕೆ 9ನೇ ವರ್ಷವೂ ನಾಯಕನಾಗಿ ಅಯ್ಕೆಯಾದ ಸುನಿಲ್ ಚೆಟ್ರಿ


ತಿರುವನಂತಪುರ(ನ.15): ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ (Sanju Samson) ಕೇರಳದ ಯುವ ಫುಟ್ಬಾಲಿಗನಿಗೆ ಸ್ಪೇನ್‌ಗೆ ತೆರಳಲು ವಿಮಾನದ ಟಿಕೆಟ್‌ ಕೊಡಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. 

ಮನ್ನಾರ್‌ ಎಂಬಲ್ಲಿನ ಕುಟ್ಟಮ್‌ಪೆರೂರ್‌ನ ಆದರ್ಶ್‌.ಪಿ.ಆರ್‌. ಸ್ಪೇನ್‌ನ 5ನೇ ಡಿವಿಷನ್‌ ಫುಟ್ಬಾಲ್‌ ಲೀಗ್‌ನಲ್ಲಿ 1 ತಿಂಗಳ ಅಭ್ಯಾಸ ಶಿಬಿರಕ್ಕೆ ಆಯ್ಕೆಯಾಗಿದ್ದರು. ಆದರೆ ಆದರ್ಶ್‌ಗೆ ಆರ್ಥಿಕ ನೆರವಿನ ಅಗತ್ಯವಿರುವ ಬಗ್ಗೆ ಕೇರಳ ಸಚಿವ ಶಾಜಿ ಚೆರಿಯನ್‌ ಫೇಸ್ಬುಕ್‌ ಪೋಸ್ಟ್‌ (Facebook Post) ಹಾಕಿದ್ದು, ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸಂಜು ವಿಮಾನದ ಟಿಕೆಟ್‌ ಹೊಣೆ ಹೊತ್ತುಕೊಂಡಿದ್ದಾರೆ.

Tap to resize

Latest Videos

undefined

ಚೆನ್‌ಗನ್ನೂರು ಶಾಸಕ ಹಾಗೂ ಮೀನುಗಾರಿಕೆ ಮತ್ತು ಯುವಜನ ಸೇವಾ ಸಚಿವರಾದ ಸಚಿವರಾದ ಶಾಜಿ ಫೇಸ್‌ಬುಕ್‌ನಲ್ಲಿ ನೆರವಾಗಲು ಕೋರಿ ಮನವಿ ಸಲ್ಲಿಸಿದ್ದಕ್ಕೆ ಸುಮಾರು 50,000 ರುಪಾಯಿ ಸಂಗ್ರಹವಾಗಿದ್ದು, ಆ ಹಣವನ್ನು ಆದರ್ಶ್‌ ಅವರಿಗೆ ಹಸ್ತಾಂತರಿಸಲಾಗಿದೆ.  

ಸತತ 9ನೇ ವರ್ಷ ಬೆಂಗಳೂರು ಎಫ್‌ಸಿಗೆ ಸುನಿಲ್ ಚೆಟ್ರಿ ನಾಯಕ

ಬೆಂಗಳೂರು: 2021-22ರ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ಗೆ ಬೆಂಗಳೂರು ಎಫ್‌ಸಿ (Bengaluru FC) (ಬಿಎಫ್‌ಸಿ) ತಂಡ 32 ಆಟಗಾರರ ತಂಡವನ್ನು ಭಾನುವಾರ ಪ್ರಕಟಿಸಿತು. ಸುನಿಲ್‌ ಚೆಟ್ರಿ (Sunil Chhetri) ಸತತ 9ನೇ ವರ್ಷ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. 

ಬಿಎಫ್‌ಸಿ 5ನೇ ಬಾರಿ ಐಎಸ್‌ಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, 2017-18ರಲ್ಲಿ ರನ್ನರ್‌-ಅಪ್‌ ಆಗಿದ್ದರೆ, 2018-19ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಬಳಿಕ 2019-20ರ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು. ಐಎಸ್‌ಎಲ್‌ಗೆ ಸೇರ್ಪಡೆಗೊಳ್ಳುವ ಮೊದಲು ಬಿಎಫ್‌ಸಿ ಐ-ಲೀಗ್‌ನ 4 ಆವೃತ್ತಿಗಳಲ್ಲಿ ಆಡಿತ್ತು. ಆ ನಾಲ್ಕೂ ಆವೃತ್ತಿಗಳಲ್ಲಿ ಚೆಟ್ರಿಯೇ ತಂಡವನ್ನು ಮುನ್ನಡೆಸಿದ್ದರು.

ಖೇಲ್‌ ರತ್ನ ಸ್ವೀಕರಿಸುವ ಮುನ್ನ ತಾಯಿಯನ್ನು ಕಳೆದುಕೊಂಡ ನಾಗರ್‌!

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ (Tokyo Paralympics) ಚಿನ್ನದ ಪದಕ ವಿಜೇತ ಬ್ಯಾಡ್ಮಿಂಟನ್‌ ತಾರೆ ಕೃಷ್ಣ ನಾಗರ್‌ (Krishna Nagar), ತಾವು ಖೇಲ್‌ ರತ್ನ ಪ್ರಶಸ್ತಿ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಶನಿವಾರ ರಾಷ್ಟ್ರಪತಿ ಭವನದಲ್ಲಿ ಕೃಷ್ಣ ರಾಷ್ಟ್ರಪತಿ ಕೋವಿಂದ್‌ರಿಂದ ಪ್ರಶಸ್ತಿ ಸ್ವೀಕರಿಸಿದರು. ಆದರೆ ಮನೆಯ ಟೆರೇಸ್‌ನಿಂದ ಬಿದ್ದು ಗಾಯಗೊಂಡಿದ್ದ ಅವರ ತಾಯಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ನಿಧನರಾಗಿದ್ದಾರೆ. ಈ ವಿಚಾರವನ್ನು ಕೃಷ್ಣ ಅವರಿಂದ ಮೊದಲು ಮುಚ್ಚಿಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿ ಜೈಪುರದ ತಮ್ಮ ಮನೆಗೆ ತಲುಪಿದ ಬಳಿಕವೇ ಅವರಿಗೆ ತಾಯಿಯ ನಿಧನದ ಸುದ್ದಿ ಗೊತ್ತಾಯಿತು ಎಂದು ತಿಳಿದುಬಂದಿದೆ.

T20 World Cup: ಸತತ 5 ಸರಣಿ ಸೋತು ವಿಶ್ವಕಪ್‌ಗೆ ಕಾಲಿಟ್ಟಿದ್ದ ಆಸೀಸ್ ಈಗ ಚಾಂಪಿಯನ್‌..!

ಒಲಿಂಪಿಕ್ಸ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ (Neeraj Chopra), ಭಾರತದ ಹಿರಿಯ ಮಹಿಳಾ ಕ್ರಿಕೆಟರ್‌ ಮಿಥಾಲಿ ರಾಜ್‌(Mithali Raj), ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಸೇರಿ 12 ಕ್ರೀಡಾ ಸಾಧಕರಿಗೆ 2021ನೇ ಸಾಲಿನ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿಯನ್ನು ಶನಿವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಪ್ರದಾನ ಮಾಡಿದರು. 

ಖೇಲ್‌ ರತ್ನ (Khel Ratna) ಪಡೆದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ಹಿರಿಮೆಗೆ ಮಿಥಾಲಿ ಪಾತ್ರರಾದರೆ, ಈ ಗೌರವ ಪಡೆದ ಮೊದಲ ಫುಟ್ಬಾಲಿಗ ಎನ್ನುವ ದಾಖಲೆಯನ್ನು ಚೆಟ್ರಿ ಬರೆದರು. ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌, ಒಲಿಂಪಿಕ್ಸ್‌ ಬೆಳ್ಳಿ ವಿಜೇತ ರವಿ ದಹಿಯಾ, ಕಂಚು ವಿಜೇತೆ ಲವ್ಲೀನಾ, ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಾದ ಶೂಟರ್‌ ಅವನಿ ಲೇಖರಾ, ಮನೀಶ್‌ ನರ್ವಾಲ್‌, ಬ್ಯಾಡ್ಮಿಂಟನ್‌ ಆಟಗಾರರಾದ ಪ್ರಮೋದ್‌ ಭಗತ್‌, ಕೃಷ್ಣ ನಾಗರ್‌, ಜಾವೆಲಿನ್‌ ಪಟು ಸುಮಿತ್‌ ಅಂತಿಲ್‌ಗೂ ಖೇಲ್‌ ರತ್ನ ದೊರೆಯಿತು.

click me!