ಮೊದಲ ಬಾರಿ ಮಗಳ ಫೋಟೋ ರಿವೀಲ್‌ ಮಾಡಿ ಹೆಸರು ತಿಳಿಸಿದ KL Rahul, Athiya Shetty!

Published : Apr 18, 2025, 04:09 PM ISTUpdated : Apr 18, 2025, 05:00 PM IST
ಮೊದಲ ಬಾರಿ ಮಗಳ ಫೋಟೋ ರಿವೀಲ್‌ ಮಾಡಿ ಹೆಸರು ತಿಳಿಸಿದ KL Rahul, Athiya Shetty!

ಸಾರಾಂಶ

ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ದಂಪತಿಗೆ ಮಾರ್ಚ್ ೨೪ ರಂದು ಹೆಣ್ಣು ಮಗು ಜನಿಸಿತ್ತು. ಈಗ ಮಗುವಿನ ಫೋಟೋ ಹಂಚಿಕೊಂಡು, "ಆರಿಯಾ" ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. "ದೇವರ ವರ" ಎಂದರ್ಥ. ಜನವರಿಯಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದ ಈ ಜೋಡಿ, ಮದುವೆಗೂ ಮುನ್ನ ಪ್ರೀತಿಸುತ್ತಿದ್ದ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ.

ನಟಿ ಅಥಿಯಾ ಶೆಟ್ಟಿ ಹಾಗೂ ಕೆ ಎಲ್‌ ರಾಹುಲ್‌ ಅವರು ಇತ್ತೀಚೆಗೆ ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಮಾರ್ಚ್‌ 24ರಂದು ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿದೆ. ಈಗ ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡು, ಈ ಜೋಡಿ ಮಗಳ ಹೆಸರನ್ನು ಕೂಡ ರಿವೀಲ್‌ಮಾಡಿದ್ದಾರೆ. 

ಮಗಳ ಫೋಟೋ ರಿಲೀಸ್!‌ 
ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಅವರು ಮಗಳನ್ನು ಎತ್ತಿಕೊಂಡಿರೋ, ಅಥಿಯಾ ಶೆಟ್ಟಿ ಕೂಡ ಇರುವ ಫೋಟೋವನ್ನು ರಿವೀಲ್‌ಮಾಡಿದ್ದಾರೆ. ಕೆ ಎಲ್‌ ರಾಹುಲ್‌ ಅವರು, "ನಮ್ಮ ಮಗಳು, ಇವಾರಾʼ ಎಂದು ಹೆಸರು ಬರೆದುಕೊಂಡಿದ್ದಾರೆ. ಗಾಡ್‌ ಗಿಫ್ಟ್‌ ಎನ್ನೋದು ಇದರ ಅರ್ಥ. ಅರ್ಜುನ್ ಕಪೂರ್‌ ಸಮಂತಾ ಪ್ರಭು, ಅನುಷ್ಕಾ ಶರ್ಮಾ, ವಾಣಿ ಕಪೂರ್‌ಅವರು ಶುಭಾಶಯ ತಿಳಿಸಿದ್ದಾರೆ. 

 

ಫಾರ್ಮ್‌ಹೌಸ್‌ನಲ್ಲಿ ಮದುವೆ! 
ಮಗು ಹುಟ್ಟುವ ಕೆಲ ತಿಂಗಳುಗಳ ಹಿಂದೆ ಕೆ ಎಲ್‌ ರಾಹುಲ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಈ ಜೋಡಿ ವಿಶೇಷವಾಗಿ ಬೇಬಿಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡು, ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆ ಕ್ರಿಕೆಟರ್‌ ಕೆ ಎಲ್ ರಾಹುಲ್ ಅವರು ಅಥಿಯಾ ಶೆಟ್ಟಿ ಜನ್ಮದಿನದಂದು, ರೊಮ್ಯಾಂಟಿಕ್ ಆಗಿ ಜನ್ಮದಿನದ ಶುಭಾಶಯ ತಿಳಿಸಿದ್ದರು, ಅಂದೇ ಇವರಿಬ್ಬರ ಸಂಬಂಧದ ಬಗ್ಗೆ ಅನೇಕರಿಗೆ ಗೊತ್ತಾಯ್ತು. ಅಲ್ಲಿವರೆಗೂ ಯಾರಿಗೂ ಇವರ ಬಗ್ಗೆ 2023ರ ಜನವರಿಯಲ್ಲಿ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಕೆ ಎಲ್‌ರಾಹುಲ್‌ ಹಾಗೂ ಅಥಿಯಾ ಶೆಟ್ಟಿ ಅವರು ಖಾಸಗಿಯಾಗಿ ಮದುವೆಯಾಗಿದ್ದರು. 

RCB ವಿರುದ್ಧ ಸೇಡು ತೀರಿಸಿಕೊಂಡು 'ಕಾಂತಾರ' ನೆನೆದ KL Rahul;‌ ನಂಗೆ ಈ ಗ್ರೌಂಡ್‌ ಪಿಚ್‌ ಗೊತ್ತು ಎಂದ ಕನ್ನಡಿಗ

ಪ್ರೀತಿ ವಿಷಯ ಹೇಳಿಕೊಂಡಿದ್ದರು! 
ನೂರು ಜನರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು, ಆಮೇಲೆ ಮುಂಬೈನಲ್ಲಿ ಆರತಕ್ಷತೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದ್ದರೂ ಕೂಡ, ಯಾರು ಎಷ್ಟೇ ಪ್ರಶ್ನೆ ಕೇಳಿದ್ದರೂ ಕೂಡ ಉತ್ತರ ಕೊಟ್ಟಿರಲಿಲ್ಲ. ಆದರೆ ಸುನೀಲ್‌ ಶೆಟ್ಟಿ ಅವರು ಮಾಧ್ಯಮದ ಮುಂದೆ ಪರೋಕ್ಷವಾಗಿ ಇವರಿಬ್ಬರು ಪ್ರೀತಿ ಮಾಡ್ತಿರೋದು ಸತ್ಯ ಎಂದು ಹೇಳಿಕೊಂಡಿದ್ದರು.

ಪ್ರಗ್ನೆನ್ಸಿ ವಿಷಯ ರಿವೀಲ್!‌ 
ಮದುವೆ ಬಳಿಕ ಕಳೆದ ವರ್ಷ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ‌ ಈ ಜೋಡಿ "ಬೇಗನೇ ನಮಗೆ ಮುದ್ದಾದ ಆಶೀರ್ವಾದವೊಂದು ಬರಲಿದೆ" ಅಂತ ಕ್ಯಾಪ್ಶನ್‌ ನೀಡಿದ್ದರು. ಈ ಕ್ಯಾಪ್ಶನ್‌ ಅಲ್ಲಿ ಒಂದು ಕೆಟ್ಟ ದೃಷ್ಟಿ ತಡೆಯುವ ಗೊಂಬೆ, ನಕ್ಷತ್ರಗಳ ಜೊತೆಗೆ ಒಂದು ಮಗುವಿನ ಕಾಲು ಇರುವ ಫೋಟೋ ಜೊತೆಗೆ ಇಮೋಜಿ ಕೂಡ ಹಂಚಿಕೊಂಡಿದ್ದರು. ಸೆಲೆಬ್ರಿಟಿಗಳು, ಫ್ಯಾನ್ಸ್ ಸೇರಿದಂತೆ ಅನೇಕರು ಈ ಪೋಸ್ಟ್‌ಗೆ ಶುಭಾಶಯಗಳನ್ನು ತಿಳಿಸಿದ್ದರು.  ನಟಿ ರಿಯಾ ಕಪೂರ್, ವಾಣಿ ಕಪೂರ್, ಅಹಾನ್ ಶೆಟ್ಟಿ, ಶಿಬಾನಿ ಅಖ್ತರ್, ಇಶಾ ಗುಪ್ತಾ ಮುಂತಾದವರು ಶುಭಾಶಯ ತಿಳಿಸಿದ್ದರು.

ಬರ್ತ್ ಡೇ ದಿನ ಫ್ಯಾನ್ಸ್‌ ಗೆ ಕೆ ಎಲ್ ರಾಹುಲ್ ಗಿಫ್ಟ್ , ಮಗಳ ಹೆಸರು ರಿವೀಲ್

ತಾತ ಸುನೀಲ್‌ ಶೆಟ್ಟಿ ಫುಲ್‌ ಖುಷ್!‌ 
ಸುನೀಲ್‌ ಶೆಟ್ಟಿ ಅವರು ತಾತನಾಗಿದ್ದಕ್ಕೆ ಫುಲ್‌ ಖುಷಿಯಾಗಿದ್ದಾರೆ. ಸುನೀಲ್‌ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಅವರು ರಾಹುಲ್‌ ಅವರನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಆಗಿದ್ದು, ಸದ್ಯ ಸಿನಿಮಾಗಳಿಂದ ದೂರ ಇದ್ದಾರೆ. 

ಕ್ರಿಕೆಟರ್‌ ಕೆ ಎಲ್‌ ರಾಹುಲ್‌ ಅವರು ಇತ್ತೀಚೆಗೆ ಐಪಿಎಲ್‌ ಮ್ಯಾಚ್‌ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸೋಲಿಸಿದ್ದು ಮಾತ್ರ ಭಾರೀ ಸೌಂಡ್‌ ಮಾಡಿತ್ತು. ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಆರ್‌ಸಿಬಿಯಲ್ಲಿ ಆಡಲು ಅವಕಾಶವನ್ನೇ ಕೊಟ್ಟಿರಲಿಲ್ಲ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್