ಬರ್ತ್ ಡೇ ದಿನ ಫ್ಯಾನ್ಸ್‌ ಗೆ ಕೆ ಎಲ್ ರಾಹುಲ್ ಗಿಫ್ಟ್ , ಮಗಳ ಹೆಸರು ರಿವೀಲ್

Published : Apr 18, 2025, 03:53 PM ISTUpdated : Apr 18, 2025, 04:55 PM IST
ಬರ್ತ್ ಡೇ ದಿನ ಫ್ಯಾನ್ಸ್‌ ಗೆ ಕೆ ಎಲ್ ರಾಹುಲ್ ಗಿಫ್ಟ್ , ಮಗಳ ಹೆಸರು ರಿವೀಲ್

ಸಾರಾಂಶ

ಕೆ.ಎಲ್ ರಾಹುಲ್ ಹುಟ್ಟುಹಬ್ಬದಂದು ಮಗಳ ಹೆಸರು ಮತ್ತು ಫೋಟೋ ಬಹಿರಂಗಪಡಿಸಿದ್ದಾರೆ. ಮಾರ್ಚ್ 24 ರಂದು ಜನಿಸಿದ್ದ ಮಗಳಿಗೆ "ಇವಾರಾ" ಎಂದು ನಾಮಕರಣ ಮಾಡಿದ್ದಾರೆ. ಇದರರ್ಥ "ದೇವರ ಕೊಡುಗೆ". ಅತಿಯಾ ಶೆಟ್ಟಿ ಮತ್ತು ರಾಹುಲ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಹುಲ್ ಗೆ ಈ ಸಂತಸ ಇಮ್ಮಡಿಗೊಳಿಸಿದೆ.

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕೆ ಎಲ್ ರಾಹುಲ್ (KL Rahul) ಬರ್ತ್ ಡೇ ದಿನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.  ಇಂದು 33ನೇ ವರ್ಷಕ್ಕೆ ಕಾಲಿಟ್ಟ ಕೆಎಲ್ ರಾಹುಲ್, ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಮಾರ್ಚ್ 24ರಂದು ಕೆಎಲ್ ರಾಹುಲ್ ಗೆ ಅಪ್ಪನಾಗಿ ಬಡ್ತಿ ಸಿಕ್ಕಿದೆ. ರಾಹುಲ್ ಹಾಗೂ ನಟಿ ಅತಿಯಾ ಶೆಟ್ಟಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿ ಆಗಿದೆ.  ಇಬ್ಬರೂ ಮಗಳು ಹುಟ್ಟಿರುವ ಖುಷಿ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆದ್ರೆ ಮಗಳ ಮುಖ ತೋರಿಸಿರಲಿಲ್ಲ. ಮಗಳಿಗೆ ಏನು ಹೆಸರಿಟ್ಟಿದ್ದಾರೆ ಎಂಬುದನ್ನೂ ಬಹಿರಂಗಪಡಿಸಿರಲಿಲ್ಲ. ತಮ್ಮ ಹುಟ್ಟುಹಬ್ಬದ ದಿನ ಕೆಎಲ್ ರಾಹುಲ್, ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ಮಗಳನ್ನು ತೋರಿಸಿ, ಅಭಿಮಾನಿಗಳನ್ನು ಖುಷಿಗೊಳಿಸಿದ್ದಾರೆ.

ಕೆಎಲ್ ರಾಹುಲ್ ಪೋಸ್ಟ್ ನಲ್ಲಿ ಏನಿದೆ? : ಕೆಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಕೆಎಲ್ ರಾಹುಲ್ ಮಗುವನ್ನು ಎತ್ತಿಕೊಂಡಿರೋದನ್ನು ಕಾಣ್ಬಹುದು. ಅತಿಯಾ ಶೆಟ್ಟಿ ಕೂಡ ಮಗುವನ್ನು ನೋಡ್ತಿದ್ದಾರೆ. ಆದ್ರೆ ಫೋಟೋದಲ್ಲಿ ಮಗು ಮುಖ ಕಾಣಿಸೋದಿಲ್ಲ. ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ. ಇವಾರಾ (Evaarah)  / ಇವಾರಾ - ದೇವರ ಕೊಡುಗೆ ಎಂದು ಕೆಎಲ್ ರಾಹುಲ್ ಶೀರ್ಷಿಕೆ ಹಾಕಿದ್ದಾರೆ. \

ಕೆಎಲ್ ರಾಹುಲ್ ಹುಟ್ಟುಹಬ್ಬ: 100 ಕೋಟಿ ಆಸ್ತಿ ಒಡೆಯ, ಕ್ರಿಕೆಟಿಗನ ಬಳಿ ಇರೋ ಕಾರುಗಳೆಷ್ಟು?

ಕೇವಲ ಒಂದು ಗಂಟೆ ಹಿಂದೆ ಮಗಳ ಫೋಟೋವನ್ನು ಕೆ ಎಲ್ ರಾಹುಲ್ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೇಗವಾಗಿ ವೈರಲ್ ಆಗ್ತಿದೆ.  10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ನೂರಾರು ಮಂದಿ ಈ ಪೋಸ್ಟ್ ಗೆ ಕಮೆಂಟ್ ಹಾಕಿದ್ದಾರೆ. ಕೆ ಎಲ್ ರಾಹುಲ್ ಮುದ್ದು ಕುಟುಂಬವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಹಾರ್ಟ್ ಎಮೋಜಿ ತುಂಬಿದೆ.  

ಇವಾರಾ ಹೆಸರಿನ ಅರ್ಥ ಏನು? : ಇವಾರಾ ಸಂಸ್ಕೃತ ಪದವಾಗಿದೆ. ಈ ಹೆಸರಿನ ಅರ್ಥ ದೇವರು ಕಳುಹಿಸಿದ ಉಡುಗೊರೆ ಎಂದರ್ಥ. ಅನುಷ್ಕಾ ಶರ್ಮಾ, ಸಮಂತಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೆ ಎಲ್ ರಾಹುಲ್ ಪೋಸ್ಟ್ ಗೆ ಕಮೆಂಟ್ ಹಾಕಿದ್ದಾರೆ.  ಜನವರಿ 2023 ರಲ್ಲಿ ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಮದುವೆ ಆಗಿದ್ದಾರೆ. 

ಕೆ ಎಲ್ ರಾಹುಲ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡ್ತಿದ್ದಾರೆ. ಅತಿಯಾ ಜೊತೆಗಿದ್ದ ರಾಹುಲ್ ಈ ಋತುವಿನ ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದರು. ಕಳೆದ ವರ್ಷ ನವೆಂಬರ್ನಲ್ಲಿಅತಿಯಾ ಶೆಟ್ಟಿ ಗರ್ಭಿಣಿ ಎಂಬ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.  ಐಪಿಎಲ್ 2025ರಲ್ಲಿ ಕೆ ಎಲ್ ರಾಹುಲ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ಕೆ ಎಲ್ ರಾಹುಲ್ ಮೈದಾನದಲ್ಲಿ ಕಾಂತಾರ ಸಿನಿಮಾ ದೃಶ್ಯವನ್ನು ರೀ ಕ್ರಿಯೆಟ್ ಮಾಡಿ ಸುದ್ದಿಯಾಗಿದ್ದರು. ಆರ್ ಸಿಬಿ ಫ್ಯಾನ್ಸ್ ಕೂಡ ರಾಹುಲ್ ಆಟಕ್ಕೆ ಚಪ್ಪಾಳೆ ತಟ್ಟಿದ್ದರು. 

ಗಂಭೀರ್-ರೋಹಿತ್ ನಡುವಿನ ಕಿತ್ತಾಟಕ್ಕೆ ಅಭಿಷೇಕ್ ನಾಯ‌ರ್

ದೆಹಲಿ ಪರ ಐಪಿಎಲ್ ಆಡ್ತಿರುವ ರಾಹುಲ್ ಕರ್ನಾಟಕದ ಆಟಗಾರ.  ರಾಹುಲ್ ಏಪ್ರಿಲ್ 18, 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ರಾಹುಲ್ ತಂದೆ ಕೆ.ಎನ್. ಲೋಕೇಶ್ ಕ್ರಿಕೆಟ್ ನ ದೊಡ್ಡ ಅಭಿಮಾನಿಯಾಗಿದ್ದು, ಮಗನಿಗೆ  ಸುನಿಲ್ ಗವಾಸ್ಕರ್  ಮಗನ ಹೆಸರಿಡಲು ಮುಂದಾಗಿದ್ದರು. ಆದ್ರೆ ಸುನಿಲ್ ಗವಾಸ್ಕರ್ ಮಗನ ಹೆಸರನ್ನು ತಪ್ಪಾಗಿ ತಿಳಿದಿದ್ದ ಅವರು ರೋಹನ್ ಬದಲು ರಾಹುಲ್ ಎಂದು ಭಾವಿಸಿ ಮಗನಿಗೆ ರಾಹುಲ್ ಅಂತ ಹೆಸರಿಟ್ಟಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!