ಗಂಭೀರ್-ರೋಹಿತ್ ನಡುವಿನ ಕಿತ್ತಾಟಕ್ಕೆ ಅಭಿಷೇಕ್ ನಾಯ‌ರ್ ಬಲಿಪಶು?

Published : Apr 18, 2025, 01:51 PM ISTUpdated : Apr 18, 2025, 02:09 PM IST
ಗಂಭೀರ್-ರೋಹಿತ್ ನಡುವಿನ ಕಿತ್ತಾಟಕ್ಕೆ ಅಭಿಷೇಕ್ ನಾಯ‌ರ್ ಬಲಿಪಶು?

ಸಾರಾಂಶ

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಸೋಲಿನ ನಂತರ ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ವಜಾಗೊಳಿಸಲಾಗಿದೆ. ವರದಿಗಳ ಪ್ರಕಾರ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ನಾಯರ್ ಬಲಿಪಶುವಾಗಿದ್ದಾರೆ ಎನ್ನಲಾಗಿದೆ.

ನವದೆಹಲಿ: ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಹೀನಾಯ ಸೋಲುಗಳಿಗೆ ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್‌ರನ್ನು ಬಿಸಿಸಿಐ ಬಲಿಕೊಟ್ಟಿದೆ. ಹುದ್ದೆಗೇರಿದ ಕೇವಲ 8 ತಿಂಗಳಲ್ಲೇ ಅವರನ್ನು ವಜಾಗೊಳಿಸಲಾಗಿದೆ.

ವರದಿಗಳ ಪ್ರಕಾರ, ಗಂಭೀರ್ - ರೋಹಿತ್ ನಡುವಿನ ಮನಸ್ತಾಪಕ್ಕೆ ಅಭಿಷೇಕ್ ಬಲಿಪಶುವಾಗಿದ್ದಾರೆಂದು ಹೇಳಲಾಗುತ್ತಿದೆ. ಗಂಭೀರ್ ಕೋಚ್ ಆದಾಗ ಸಹಾಯಕ ಕೋಚ್ ಸ್ಥಾನಕ್ಕೆ ಅಭಿಷೇಕ್ ಮೊದಲ ಆಯ್ಕೆಯಾಗಿರಲಿಲ್ಲ. ಆದರೆ ರೋಹಿತ್-ಗಂಭೀರ್ ನಡುವಿನ ಮನಸ್ತಾಪ ಕಡಿಮೆ ಮಾಡ ಲೆಂದೇ, ರೋಹಿತ್‌ಗೆ ಹತ್ತಿರವಾಗಿದ್ದ ಅಭಿಷೇಕ್‌ನ್ನು ಸಹಾಯಕ ಕೋಚ್ ಆಗಿ ನೇಮಿಸಲಾಗಿತ್ತು ಎನ್ನಲಾಗಿದೆ. ಆದರೆ ಇಬ್ಬರ ಕಿತ್ತಾಟದಿಂದಲೇ ಅಭಿಷೇಕ್ ತಲೆದಂಡವಾಗಿದೆ ಎನ್ನಲಾಗಿದೆ.

ಭಾರತ ಕೋಚ್ ನಾಯರ್‌ 8 ತಿಂಗಳಿನಲ್ಲೇ ಗೇಟ್‌ಪಾಸ್!

ಕಳೆದ ವರ್ಷ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಅಭಿಷೇಕ್ ರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನದ ಕಾರಣ ನೀಡಿ ಸದ್ಯ ಅಭಿಷೇಕರನ್ನು ಹೊರಗಿಡಲಾಗಿದೆ. ಈಗಾಗಲೇ ಸಹಾಯಕ ಕೋಚ್ ಸಿತಾಂಶು ಕೋಟಕ್ ತಂಡದಲ್ಲಿದ್ದು ಅಭಿಷೇಕ್‌ ಸ್ಥಾನ ತುಂಬಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ದಕ್ಷಿಣ ಕ್ಯಾಲಿಫೋರ್ನಿಯಾ ಪೊಮಾನಾ ನಗರದಲ್ಲಿ 2028ರ ಒಲಿಂಪಿಕ್ಸ್‌ ಕ್ರಿಕೆಟ್‌

ಇನ್ನು, ಫೀಲ್ಡಿಂಗ್ ಕೋಚ್ ಟಿ.ದಿಲೀಪ್, ಟ್ರೈನರ್ ಸೋಹಮ್ ದೇಸಾಯಿ ಅವರ ಕಾರ್ಯಾವಧಿಯೂ ಮುಕ್ತಾಯಗೊಂಡಿದೆ. ವರದಿಗಳ ಪ್ರಕಾರ ಸಹಾಯಕ ಕೋಚ್ ಆಗಿರುವ ರಯಾನ್ ಟೆನ್ ಡೊಶಾಟ್‌ರಿಗೆ ಫೀಲ್ಡಿಂಗ್ ಕೋಚ್ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ. ಟ್ರೈನರ್ ಆಗಿ ದಕ್ಷಿಣ ಆಫ್ರಿಕಾದ ಆಡ್ರಿಯನ್ ಲೆ ರೂಕ್ಸ್ ಮತ್ತೆ ಹೊಣೆ ಹೊತ್ತುಕೊಳ್ಳುವ ಸಾಧ್ಯತೆ ಸಾಧ್ಯತೆಯಿದೆ. ಆಡ್ರಿಯನ್ 2003ರಲ್ಲೂ ಭಾರತಕ್ಕೆ ಟ್ರೈನರ್‌ ಆಗಿದ್ದರು.

ಸಿಡ್ನಿ ಟೆಸ್ಟ್‌ ಆಡಲ್ಲ ಎಂದು ಜಗಳವಾಡಿದ್ದ ರೋಹಿತ್‌!

ನವದೆಹಲಿ: ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ ಹೊರಗುಳಿದಿರುವ ಬಗ್ಗೆ ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಮಾತನಾಡಿದ್ದು, ‘ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯುವ ನಿರ್ಧಾರ ಸರ್ವಾನುಮತದಿಂದ ಕೂಡಿರಲಿಲ್ಲ. ಹೀಗಾಗಿ ಕೋಚ್‌ ಗಂಭೀರ್‌ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಜೊತೆ ಜಗಳ ಮಾಡಿದ್ದೆ’ ಎಂದಿದ್ದಾರೆ. 

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ‘ಅಡಿಲೇಡ್‌ನಲ್ಲಿ ನಾನು ಉತ್ತಮವಾಗಿ ಆಟವಾಡಿರಲಿಲ್ಲ. ಹೀಗಾಗಿ ಸಿಡ್ನಿಯಲ್ಲಿ ಗಿಲ್‌ ಆಡಬೇಕೆಂದು ಬಯಸಿದ್ದೆ. ನಾಯಕನಾದ ನಂತರ ಎಲ್ಲಾ ಸಮಯದಲ್ಲಿಯೂ ತಂಡದ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡಬೇಕು’ ಎಂದಿದ್ದಾರೆ.

ಇದನ್ನೂ ಓದಿ: SRH ಟ್ರಾವಿಸ್ ಹೆಡ್ ಊಬರ್ ಜಾಹೀರಾತಿಗೆ ಆರ್‌ಸಿಬಿ ಕೆಂಡ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಆಸೀಸ್‌ ಪ್ರವಾಸದಲ್ಲಿದ್ದ ಕೋಚ್ ಮತ್ತು ಆಯ್ಕೆದಾರರ ಜೊತೆಗೆ ನಾನು ಮಾತನಾಡಿದೆ. ಅವರು ಒಂದು ರೀತಿಯಲ್ಲಿ ಒಪ್ಪಿಕೊಂಡರು. ಆದರೂ ಒಪ್ಪಿಕೊಳ್ಳಲಿಲ್ಲ. ಅದರ ಸುತ್ತಲೂ ವಾದವಿತ್ತು. ನೀವು ತಂಡವು ಏನು ಬಯಸುತ್ತದೆ ಎಂಬುದನ್ನು ನೋಡಿ ಅದಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಕೆಲವೊಮ್ಮೆ ಅದು ಕೆಲಸ ಮಾಡಬಹುದು. ಕೆಲವೊಮ್ಮೆ ಅದು ಆಗದಿರಬಹುದು’ಎಂದರು.

2 ದರ್ಜೆ ಟೆಸ್ಟ್‌ ಸರಣಿ ಯೋಜನೆ ಸದ್ಯ ಕೈಬಿಡಲು ಐಸಿಸಿ ಚಿಂತನೆ

ನವದೆಹಲಿ: 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಬೋನಸ್‌ ಅಂಕ ನೀಡುವ ಪ್ರಸ್ತಾವಕ್ಕೆ ಐಸಿಸಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಆದರೆ 2 ದರ್ಜೆ ಟೆಸ್ಟ್‌ ಸರಣಿ ಆಡಿಸುವ ಯೋಜನೆ ಸದ್ಯಕ್ಕೆ ಮುಂದೂಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸದ್ಯ ಒಂದು ಟೆಸ್ಟ್‌ನಲ್ಲಿ ಕಡಿಮೆ ಅಥವಾ ಬೃಹತ್‌ ಅಂತರದಲ್ಲಿ ಗೆದ್ದರೂ ಆ ತಂಡಕ್ಕೆ 12 ಅಂಕ ಸಿಗುತ್ತಿದೆ. ಟೈ ಆದರೆ 6, ಡ್ರಾ ಆದರೆ 4 ಅಂಕ ಲಭಿಸುತ್ತಿದೆ. ಆದರೆ ಇನ್ನು ಇನ್ನಿಂಗ್ಸ್‌, 100 ರನ್‌ಗಿಂತ ಹೆಚ್ಚಿನ ಅಂತರದ ಗೆಲುವು, ಬಲಿಷ್ಠ ತಂಡಗಳ ವಿರುದ್ಧ ಹಾಗೂ ತವರಿನಾಚೆ ಪಂದ್ಯಗಳಲ್ಲಿ ಗೆಲ್ಲುವ ತಂಡಗಳಿಗೆ ಬೋನಸ್‌ ಅಂಕ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: RCB ಫ್ಯಾನ್ಸ್ ಅಂದ್ರೆ ಕಡಿಮೆನಾ? ಬೆಂಗಳೂರು ತಂಡದ ಬಗ್ಗೆ ಜಿತೇಶ್ ಶರ್ಮಾ ಅಚ್ಚರಿ ಹೇಳಿಕೆ!

ಒಂದೇ ದರ್ಜೆ ಟೆಸ್ಟ್‌: ಟೆಸ್ಟ್‌ ತಂಡಗಳನ್ನು 2 ವಿಭಾಗಗಳನ್ನಾಗಿ ವಿಂಗಡಿಸಿ ಸರಣಿ ಆಡಿಸುವ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಇದರ ಬಗ್ಗೆ ಸುದೀರ್ಘ ಚರ್ಚೆ ಅಗತ್ಯ ಇರುವ ಕಾರಣ ಸದ್ಯಕ್ಕೆ ಒಂದೇ ದರ್ಜೆ ಸರಣಿ ಮುಂದುವರಿಸುವ ನಿರೀಕ್ಷೆಯಿದೆ. ಪ್ರಸ್ತಾವದ ಪ್ರಕಾರ ಭಾರತ, ಆಸ್ಟ್ರೇಲಿಯಾ ಸೇರಿದಂತೆ ಬಲಿಷ್ಠ 6 ತಂಡಗಳ ಒಂದು ವಿಭಾಗ, ಜಿಂಬಾಬ್ವೆ, ಬಾಂಗ್ಲಾದೇಶ ಸೇರಿ ಇನ್ನು 6 ತಂಡಗಳನ್ನು ಮತ್ತೊಂದು ವಿಭಾಗಕ್ಕೆ ಸೇರಿಸಲಾಗುತ್ತದೆ. ಆಯಾಯ ವಿಭಾಗಗಳ ನಡುವೆ ಮಾತ್ರ ಟೆಸ್ಟ್‌ ಸರಣಿ ನಡೆಸಬೇಕು ಎಂಬ ಪ್ರಸ್ತಾವ ಮುಂದಿಡಲಾಗಿತ್ತು. ಇದಕ್ಕೆ ಈಗಾಗಲೇ ಬಾಂಗ್ಲಾ, ಜಿಂಬಾಬ್ವೆ ಸೇರಿ ಕೆಲ ದೇಶಗಳು ವಿರೋಧ ವ್ಯಕ್ತಪಡಿಸಿವೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ