ಆ ಮೂರು ಗಂಟೆಗಳು ನಮ್ಮ ಸಾಮರ್ಥ್ಯವನ್ನು ನಿರ್ಧರಿಸಲ್ಲ: ರೋಹಿತ್ ಶರ್ಮಾ

By Kannadaprabha News  |  First Published Oct 21, 2024, 1:27 PM IST

ನ್ಯೂಜಿಲೆಂಡ್ ಎದುರಿನ ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ತಮ್ಮ ತಂಡದ ಹೋರಾಟದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಬೆಂಗಳೂರು: ನ್ಯೂಜಿಲೆಂಡ್‌ ವಿರುದ್ಧ ಸೋಲಿನ ಹೊರತಾಗಿಯೂ ತಮ್ಮ ತಂಡ ಹೋರಾಡಿದ ರೀತಿ ಬಗ್ಗೆ ಹೆಮ್ಮೆ ಇದೆ ಎಂದು ಭಾರತದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ‘ಆ ಮೂರು ಗಂಟೆಗಳು’ ನಮ್ಮ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಇನ್ನಿಂಗ್ಸ್‌ನಲ್ಲಿ 46ಕ್ಕೆ ಆಲೌಟ್‌ ಆಗಿದ್ದನ್ನು ಉಲ್ಲೇಖಿಸಿದರು. ‘ಈ ಪಂದ್ಯದ ಬಗ್ಗೆ ನಾನು ಹೆಚ್ಚೇನೂ ಮಾತನಾಡಲ್ಲ. ಅದನ್ನಿಟ್ಟುಕೊಂಡು ಆಟಗಾರರು ಹಾಗೂ ತಂಡದ ಬಗ್ಗೆ ಮಾತನಾಡುವುದು ಸರಿಯಲ್ಲ. ನಾವು ಸೋತಿದ್ದೇವೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿದ ಬಳಿಕ ನಾವು ಹೋರಾಡಿದ ರೀತಿ ಬಗ್ಗೆ ಹೆಮ್ಮೆಯಿದೆ. ಸಣ್ಣ ತಪ್ಪಾಗಿದ್ದರೂ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಇದಕ್ಕಿಂತ ಮೊದಲೂ ಒಂದು ಪಂದ್ಯ ಸೋತು, ಕಮ್‌ಬ್ಯಾಕ್‌ ಮಾಡಿದ ಇತಿಹಾಸ ನಮಗಿದೆ’ ಎಂದು ಹೇಳಿದ್ದಾರೆ.

Latest Videos

undefined

ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಎರಡನೇ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಒಂದು ಮೇಜರ್ ಚೇಂಜ್!

ಇನ್ನು, ರಿಷಭ್‌ ಪಂತ್‌ ಗಾಯದ ಬಗ್ಗೆ ಮಾತನಾಡಿರುವ ರೋಹಿತ್‌, ‘ದೊಡ್ಡ ಶಸ್ತ್ರಚಿಕಿತ್ಸೆ ನಡೆದಿದ್ದ ಕಾಲಿಗೆ ಮತ್ತೆ ಗಾಯವಾಗಿದೆ. ಅವರು ಬ್ಯಾಟ್‌ ಮಾಡುವಾಗಲೂ ರನ್ನಿಂಗ್‌ಗೆ ಕಷ್ಟಪಡುತ್ತಿದದ್ದಾರೆ. ಹೀಗಾಗಿ ರಿಷಭ್‌ ಗಾಯದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: ಭಾರತ ನಂಬರ್‌ 1 ಸ್ಥಾನ ಭದ್ರ

ದುಬೈ: ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತ ಹೊರತಾಗಿಯೂ 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಪಂದ್ಯಕ್ಕೂ ಮುನ್ನ ಶೇ.74.24 ಗೆಲುವಿನ ಪ್ರತಿಶತ ಹೊಂದಿದ್ದ ಭಾರತ ಸದ್ಯ ಶೇ.68.05ಕ್ಕೆ ಕುಸಿದಿದೆ. ಆದರೂ ತಂಡದ ನಂ.1 ಸ್ಥಾನಕ್ಕೆ ಕುತ್ತು ಬಂದಿಲ್ಲ.

ಭಾರತ ಚಾಂಪಿಯನ್‌ಶಿಪ್‌ನಲ್ಲಿ ಈ ವರೆಗೂ 12 ಪಂದ್ಯಗಳನ್ನಾಡಿದ್ದು, 8 ಗೆಲುವು, 3 ಸೋಲು ಹಾಗೂ 1 ಡ್ರಾ ಸಾಧಿಸಿದೆ. ತಂಡಕ್ಕೆ ಇನ್ನು ಒಟ್ಟು 7 ಟೆಸ್ಟ್‌(ನ್ಯೂಜಿಲೆಂಡ್‌ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 5) ಪಂದ್ಯಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ.

ಆರ್‌ಸಿಬಿಗೆ ಬನ್ನಿ: ಬೆಂಗಳೂರು ಫ್ಯಾನ್ಸ್‌ ಮನವಿಗೆ ರೋಹಿತ್ ಶರ್ಮಾ ಕೊಟ್ಟ ಉತ್ತರ ಹೇಗಿತ್ತು ನೋಡಿ!

ಸದ್ಯ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಶೇ.62.50 ಗೆಲುವಿನ ಪ್ರತಿಶತ ಹೊಂದಿದೆ. ಶ್ರೀಲಂಕಾ (ಶೇ.55.56) 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌(ಶೇ.44.44) 4ನೇ ಸ್ಥಾನಕ್ಕೇರಿದೆ. ಉಳಿದಂತೆ ಇಂಗ್ಲೆಂಡ್‌ (ಶೇ.43.05), ದಕ್ಷಿಣ ಆಫ್ರಿಕಾ (ಶೇ.38.89), ಬಾಂಗ್ಲಾದೇ (ಶೇ.34.38), ಪಾಕಿಸ್ತಾನ (ಶೇ.25.92) ಹಾಗೂ ವೆಸ್ಟ್‌ಇಂಡೀಸ್‌ (ಶೇ.18.5) ನಂತರದ ಸ್ಥಾನಗಳಲ್ಲಿವೆ.

ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್‌, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

click me!