ಕೃಷ್ಣ ಕೀರ್ತನೆಯಲ್ಲಿ ಭಾಗಿಯಾದ ವಿರುಷ್ಕಾ ಜೋಡಿ: ವೀಡಿಯೋ ವೈರಲ್

By Anusha KbFirst Published Oct 21, 2024, 12:07 PM IST
Highlights

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮೆಲ್ಲಾ ಬ್ಯುಸಿ ಶೆಡ್ಯುಲ್‌ಗಳನ್ನು ಪಕ್ಕಕ್ಕಿಟ್ಟು ಕೆಲ ಕಾಲ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮೆಲ್ಲಾ ಬ್ಯುಸಿ ಶೆಡ್ಯುಲ್‌ಗಳನ್ನು ಪಕ್ಕಕ್ಕಿಟ್ಟು ಕೆಲ ಕಾಲ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಭಾಗಿಯಾದರು. ಆಧ್ಮಾತ್ಮದಲ್ಲಿ ಮೊದಲಿನಿಂದಲೂ ಬೇರೆಲ್ಲಾ ಸೆಲೆಬ್ರಿಟಿಗಳಿಗಿಂತ ತುಸು ಹೆಚ್ಚೆ ಆಸಕ್ತರಾಗಿರುವ ಈ ಜೋಡಿ ಕಾರ್ವಾಚೌತ್ ದಿನವಾದ ನಿನ್ನೆ ಮುಂಬೈನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಕಾರ್ವಾಚೌತ್ ಭಾಗವಾಗಿ ಆಯೋಜಿಸಿದ್ದ ಕೃಷ್ಣ ಕೀರ್ತನೆಯಲ್ಲಿ ಭಾಗಿಯಾದ ವಿರುಷ್ಕಾ ಜೋಡಿ ಕಾರ್ಯ್ರಕ್ರಮದಲ್ಲಿ ಕೀರ್ತನೆಗಳಿಗೆ ತಲೆದೂಗುತ್ತಿರುವ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃಷ್ಣದಾಸ್ ಅವರು ನಡೆಸಿಕೊಟ್ಟ ಈ ಕೃಷ್ಣ ಕೀರ್ತನೆಯನ್ನು ಈ ಜೋಡಿ ಆನಂದಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕೀರ್ತನೆಕಾರ ಕೃಷ್ಣದಾಸ ಅವರು ಯೋಗದ ರಾಕ್‌ಸ್ಟಾರ್‌ ಎಂದೇ ಹೆಸರಾಗಿದ್ದು, ಇವರು ಸಂಪ್ರದಾಯಿಕ ಭಾರತೀಯ ಭಜನೆಗಳಿಗೆ ಅಧುನಿಕ ಸಂಗೀತದ ಟಚ್‌ ನೀಡಿ ಹಾಡುತ್ತಾರೆ. 

ಈ ಕಾರ್ಯಕ್ರಮಕ್ಕೆ ಅನುಷ್ಕಾ ಬಿಳಿ ಕೋಆರ್ಡ್ ಸೆಟ್ ಡ್ರೆಸ್ ಧರಿಸಿ ಆಗಮಿಸಿದ್ದರೆ ವಿರಾಟ್ ಕೊಹ್ಲಿ ಹಸಿರು ಬಣ್ಣದ ಸ್ವೀಟ್‌ಶರ್ಟ್‌ ಹಾಗೂ ಬ್ಲೂ ಡೆನಿಮ್ ಜೀನ್ಸ್ ಧರಿಸಿದ್ದಾರೆ. ಈ ಕೀರ್ತನೆ ನಡೆಸಿಕೊಟ್ಟ ಕೃಷ್ಣದಾಸ ಅವರ ಮೂಲ ಹೆಸರು ಜೆಫ್ರಿ ಕಾಗೆಲ್, 1960ರಲ್ಲಿ ಭಾರತೀಯ ಆಧ್ಮಾತ್ಮದ ಪ್ರಭಾವಕ್ಕೆ ಒಳಗಾಗಿ ತಮ್ಮ ಪಯಣ ಆರಂಭಿಸಿಸ ಅವರು ನಂತರ ನೀಮ್ ಕರೋಲಿ ಬಾಬಾ ಅವರ ಶಿಷ್ಯರಾದರು. ಈ ನೀಮ್ ಕರೋಲಿ ಬಾಬಾ ಅವರಿಗೆ ಪ್ರಪಂಚದೆಲ್ಲೆಡೆ ಹಲವು ಸೆಲಬ್ರಿಟಿಗಳು ಭಕ್ತರಾಗಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಈ ಬಾಬಾ ಅನುಯಾಯಿಗಳಾಗಿದ್ದಾರೆ. ಅಲ್ಲದೇ ಫೇಸ್‌ಬುಕ್ ಸಂಸ್ಕಾಪಕ ಮಾರ್ಕ್‌ ಜುಕರ್‌ಬರ್ಗ್ ಕೂಡ ಇವರಿಂದ ಪ್ರಭಾವಕ್ಕೊಳಗಾಗಿ ಫೇಸ್‌ಬುಕ್ ಸ್ಥಾಪನೆಗ ಮೊದಲು ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

Latest Videos

ಪತ್ನಿಗಾಗಿಯೇ ಬದಲಾದ ವಿರಾಟ್ ಕೊಹ್ಲಿ: ಇಶಾಂತ್ ಹಿಂಗದಿದ್ಯಾಕೆ?

ಲಂಡನ್‌ನಲ್ಲಿ ನೆಲೆ ಕಂಡಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರು ಆಗಾಗ ತಮ್ಮ ಕೆಲಸಗಳಿಗಾಗಿ ಭಾರತಕ್ಕೆ ಆಗಮಿಸುತ್ತಿರುತ್ತಾರೆ. ಕಳೆದ ತಿಂಗಳು ಇವರು ಕಾರ್ಯಕ್ರಮವೊಂದಕ್ಕೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದರು.  ಅಲ್ಲದೇ ತಮಾಷೆಯ ವೀಡಿಯೋವೊಂದನ್ನು ಮಾಡಿದ್ದರು. ಬೌಲಿಂಗ್ ಮಾಡಿದ ಅನುಷ್ಕಾ ಗಂಡನ ಜೊತೆಗಿನ ಕ್ರಿಕೆಟ್‌ಗೆ ತಮ್ಮದೇ ನಿಯಮ ಹೇರಿದರು.  ಬಾಲ್ ಮೂರು ಬಾರಿ ಮಿಸ್ ಮಾಡಿದ್ರೆ ಔಟ್, ಕೋಪಗೊಂಡ್ರೆ ನೀವು ಔಟ್, ಯಾರು ಬ್ಯಾಟಿಂಗ್ ಮಾಡುತ್ತಾರೋ ಅವರೇ ದೂರ ಬಾಲ್ ತರಬೇಕು ಎಂಬ ಅನಿರೀಕ್ಷಿತ ನಿಯಮಗಳು ಅದಾಗಿತ್ತು. ಈ ತಮಾಷೆಯ ವೀಡಿಯೋಗಳು ಅನೇಕರಿಗೆ ತಮ್ಮ ಬಾಲ್ಯ ನೆನಪಿಸಿದವು. 

ವಿಶ್ವಕಪ್ ಗೆದ್ದುಕೊಟ್ಟ ವಿರಾಟ್ ಕೊಹ್ಲಿ ಮೊಬೈಲ್‌ನಲ್ಲಿ ನೀಮ್ ಕರೋಲಿ ಬಾಬಾ ವಾಲ್‌ಪೇಪರ್‌; ಯಾರೀ ಬಾಬಾ?

 

click me!