Kohli Controversy;ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ, ಸಾಮಾಜಿಕ ಜಾಲತಾಣದಲ್ಲಿ ಟೀಕೆ!

By Suvarna NewsFirst Published Nov 16, 2021, 1:34 AM IST
Highlights
  • ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ
  • ಮಂಗಳಮುಖಿ, ಗೇ, ಲೆಸ್ಬಿಯನ್ಸ್‌ಗೆ ಪ್ರವೇಶ ನಿರಾಕರಣೆ
  • ಕೊಹ್ಲಿ ರೆಸ್ಟೋರೆಂಟ್ ಮೇಲೆ ಆರೋಪ ಮಾಡಿದ ವಕೀಲರ ಗುಂಪು
     

ನವದೆಹಲಿ(ನ.15): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಟೀಕೆಗಳು ಕೇಳಿಬಂದಿದೆ. ಇದೀಗ ಕೊಹ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ತಾರತಮ್ಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಮಂಗಳಮುಖಿ, ಗೇ, ಲೆಸ್ಬಿಯನ್ಸ್‌ ಸೇರಿದಂತೆ ಕೆಲವರಿಗೆ ಪ್ರವೇಶ ನಿರಾಕರಿಸುವ ಮೂಲಕ ತಾರತಮ್ಯ ಎಸಗಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಟೀಂ ಇಂಡಿಯಾದ ಯಶಸ್ವಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹತ್ತು ಹಲವು ಉದ್ಯಮಗಳಲ್ಲಿ ಸಕ್ರೀಯರಾಗಿದ್ದಾರೆ. ಇದರಲ್ಲಿ ರೆಸ್ಟೋರೆಂಟ್ ಉದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕೊಹ್ಲಿ ಮಾಲೀಕತ್ವದ ne8 ಕಮ್ಯೂನ್ ರೆಸ್ಟೋರೆಂಟ್ ಚೈನ್ ಬ್ಯುಸಿನೆಸ್ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೊಹ್ಲಿಯ ನ್ಯುಯೆವಾ ರೆಸ್ಟೋರೆಂಟ್‌ ಮಂಗಳಮುಖಿ, ಗೇ, ಲೆಸ್ಬಿಯನ್ಸ್, ಬೈಸೆಕ್ಷುವಲ್ ಸೇರಿದ ವರ್ಗಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈ ಮೂಲಕ ತಾರಮ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ರೆಸ್ಟೋರೆಂಟ್‌ಗೆ ಕಂಟಕ: ಉದ್ಯಮವೇ ಬಂದ್!

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸತತ ಪೋಸ್ಟ್ ಹಾಕಲಾಗಿದೆ. ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ವಕೀಲರ ಸಂಘ, ನೇರವಾಗಿ ಕೊಹ್ಲಿಗೆ ಸಂದೇಶ ಕಳುಹಿಸಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ವಕೀಲರ ಸಂಘ ಪುಣೆಯ ಶಾಖೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇವೆ. ಅವರು ನೀಡಿದ ಮಾಹಿತಿ ಪ್ರಕಾರ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ಭಿನ್ನಲಿಂಗಿಯ ಜೋಡಿ, ಸಿಸ್‌ಜೆಂಡರ್, ಸಿಸ್‌ಜೆಂಡರ್ ಮಹಿಳೆ, ಸಲಿಂಗಕಾಮಿ ದಂಪತಿ, ಸಲಿಂಗಕಾಮಿ ಪುರುಷರ ಗುಂಪು ಕೊಹ್ಲಿ ರೆಸ್ಟೋರೆಂಟ್ ಪ್ರವೇಶಿಸುವುದು ನಿಷೇಧಿಸಲಾಗಿದೆ. ಇನ್ನು ಮಂಗಳಮುಖಿಯರಿಗೆ ಪ್ರವೇಶ ನೀಡಲಾಗಿದೆ. ಆದರೆ ಅವರ ಉಡುಗೆ ತೊಡುಗೆ ಆಧಾರದಲ್ಲಿ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ವಕೀಲರ ಗುಂಪು ಹೇಳಿದೆ.

ತಾರತಮ್ಯ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಆದರೆ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಮಾಲೀಕತ್ವದ ರೆಸ್ಟೋರೆಂಟ್ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ. ತಾರತಮ್ಮ ಮಾಡಿದರೆ ಯಾರನ್ನೂ ಸಹಿಸುವುದಿಲ್ಲ. ಇದಕ್ಕೆ ವಿರಾಟ್ ಕೊಹ್ಲಿ ಕೂಡ ಹೊರತಲ್ಲ ಎಂದು ತೃತೀಯಲಿಂಗಿ ಒಕ್ಕೂಟ ಹೇಳಿದೆ.

2,800 ಬಿಲ್‌ಗೆ 11 ಲಕ್ಷ ಟಿಪ್ಸ್ ಕೊಟ್ಟ ಗ್ರಾಹಕ..!

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ವಿರುದ್ಧ ಟೀಕೆಗಳು ಕೇಳಿಬಂದಿದೆ. ಈ ಕುರಿತು ತಕ್ಷಣವೇ ಗಮನಹರಿಸಬೇಕು ಎಂದು ವಿರಾಟ್ ಕೊಹ್ಲಿಗೆ ಅಗ್ರಹಿಸಲಾಗಿದೆ.  ಆಕ್ರೋಶ ಟೀಕೆಗಳು ಹೆಚ್ಚಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮಾಲೀಕತ್ವದ ರೆಸ್ಟೋರೆಂಟ್ ಪ್ರಕಟಣೆ ಹೊರಡಿಸಿದೆ.  ನಮ್ಮ ರೆಸ್ಟೋರೆಂಟ್ ಎಲ್ಲಾ ಜನರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಇಲ್ಲಿ ಲಿಂಗ, ಧರ್ಮ, ಜಾತಿ, ಆದ್ಯತೆ ಗಣನೆಗೆ ಬರುವುದಿಲ್ಲ ಎಂದಿದೆ.  ನಾವು ಎಲ್ಲಾ ಸಮುದಾಯಕ್ಕೆ ಸೇವೆ ನೀಡಿದ್ದೇವೆ. ಮುಂದೆಯೂ ಅದೇ ಗೌರವ ಹಾಗೂ ಪ್ರೀತಿಯಿಂದ ಸೇವೆ ನೀಡುತ್ತೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಣೆ:
ಇತ್ತೀಚೆಗೆ ದೆಹಲಿಯಲ್ಲಿ ಭಾರಿ ಸದ್ದು ಮಾಡಿದ ಪ್ರಕರಣ ಇದಾಗಿದೆ. ಸೀರೆಯುಟ್ಟು ಬಂದ ಮಹಿಳೆಗೆ ರೆಸ್ಟೋರೆಂಟ್ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಪಾಶ್ಚಿಮಾತ್ಯ ಉಡುಗೆ ತೊಟ್ಟಿಲ್ಲ, ಸೀರೆ ತೊಟ್ಟ ಕಾರಣ ಮಹಿಳೆಯನ್ನು ಒಳ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಧಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇತ್ತ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಉದ್ಯಮ ಬಂದ್ ಮಾಡಲು ನೊಟೀಸ್ ನೀಡಿತ್ತು. ಸೆಪ್ಟೆಂಬರ್ 19 ರಂದು ಈ ಘಟನೆ ನಡೆದಿತ್ತು. ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.
 

click me!