ನೂಪುರ್ ಶಿಖರೆ ಮದ್ವೆಯಾಗುತ್ತಲೇ ಮಾಜಿ ಭಾವಿ ಪತಿ ರಾಹುಲ್ನನ್ನು ಪರಿಚಯಿಸಿದ್ದಾರೆ ಇರಾ ಖಾನ್! ಏನಿದು ಹೊಸ ವಿಷಯ?
ಬಾಲಿವುಡ್ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮದ್ವೆಯಾಗಿ 10 ದಿನಗಳು ಕಳೆದರೂ ಮದುವೆಯ ಕುರಿತಾಗಿ ಒಂದೊಂದೇ ಅಪ್‌ಡೇಟ್ಸ್ ಹೊರಬೀಳುತ್ತಲೇ ಇದೆ. ಮದುವೆ ಹಾಗೂ ಅದಕ್ಕೂ ಮುನ್ನ ನಡೆದ ಹಲವಾರು ಸಂಪ್ರದಾಯಗಳ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಅಂದಹಾಗೆ, ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್ ಮತ್ತು ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಕಳೆದ 3ರಂದು ಮದುವೆಯಾದರು. ಮುಂಬೈನಲ್ಲಿ ಜನವರಿ 3 ರಂದು ಖಾಸಗಿ ನೋಂದಣಿ ಸಮಾರಂಭದ ನಂತರ, ದಂಪತಿ ರಾಜಸ್ಥಾನದ ಉದಯಪುರದ ತಾಜ್ ಲೇಕ್ ಪ್ಯಾಲೇಸ್ನಲ್ಲಿ ಅದ್ದೂರಿ ಆಚರಣೆಯನ್ನು ಆಯೋಜಿಸಿದರು. 2020ರ ಇದೇ ದಿನದಂದು ಅಂದರೆ ಜನವರಿ 3ರಂದು ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್ ಮಾಡಿದ ಬಳಿಕ ಮದುವೆಯಾಗಿದೆ ಜೋಡಿ.
ಇದೀಗ ಅವರ ಒಂದೊಂದೇ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಮದುವೆಯಾಗುತ್ತಲೇ ತಮ್ಮ ಗೆಳೆಯನ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿರುವ ಇರಾ ಖಾನ್, ಈತ ನನ್ನ ಮಾಜಿ ಭಾವಿ ಪತಿ ಎಂದು ಪರಿಚಯಿಸಿದ್ದಾರೆ. ಇರಾ ಅವರು, ತಮ್ಮ ಸ್ನೇಹಿತ, ಹಾಸ್ಯನಟ ರಾಹುಲ್ ಸುಬ್ರಮಣಿಯನ್ ಅವರ ಚಿತ್ರಗಳನ್ನು ಮರು ಪೋಸ್ಟ್ ಮಾಡಿದ್ದು ಈ ರೀತಿಯ ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋದಲ್ಲಿ ರಾಹುಲ್ ಮತ್ತು ಇರಾ ನಗುತ್ತಿರುವುದನ್ನು ನೋಡಬಹುದು. ಜೊತೆಗೆ ಹಲವಾರು ನಗುವಿನ ಇಮೋಜಿಗಳನ್ನು ಅವರು ಶೇರ್ ಮಾಡಿದ್ದಾರೆ.
ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್ ಖಾನ್ ಕಣ್ಣೀರಿಂದೇ ಭಾರಿ ಚರ್ಚೆ!
ಅಷ್ಟಕ್ಕೂ ಇರಾ ಖಾನ್ ಹೀಗೆ ಮಾಡಲು ಕಾರಣವಿದೆ. ಅದೇನೆಂದರೆ, ಇವರಿಬ್ಬರು ಬಹುಕಾಲದ ಸ್ನೇಹಿತರು. ಕಳೆದ ವರ್ಷ ತಮ್ಮಿಬ್ಬರ ಇದೇ ಫೋಟೋ ಅನ್ನು ಇರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆಗ ರಾಹುಲ್ ಮತ್ತು ಇರಾ ಮದುವೆಯಾಗುತ್ತಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ವರದಿ ಬಂದಿದ್ದವು. ಇದಕ್ಕೆ ಕಾರಣವೂ ಇದೆ. ಇನ್ನೊಂದು ಚಿತ್ರದಲ್ಲಿ ರಾಹುಲ್ ಸುಬ್ರಮಣಿಯನ್ ಮತ್ತು ಇರಾ ಖಾನ್ ಅಪ್ಪಿಕೊಂಡಿದ್ದರು. ಆ ಫೋಟೋ ಕೂಡ ಈಗ ಮತ್ತೊಮ್ಮೆ ವೈರಲ್ ಆಗಿದೆ. ಇದನ್ನು ನೋಡಿದ್ದರಿಂದ ಕಳೆದ ವರ್ಷ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಸದ್ದು ಮಾಡಿತ್ತು.
ಇದೀಗ ಶಿಖರ್ ಅವರನ್ನು ಮದುವೆಯಾದ ಬೆನ್ನಲ್ಲೇ ಅದೇ ಹಳೆಯ ಫೋಟೋಗಳನ್ನು ಶೇರ್ ಮಾಡಿರುವ ಇರಾ ಖಾನ್, ತಮಾಷೆಯ ರೂಪದಲ್ಲಿ ಈತ ನನ್ನ ಮಾಜಿ ಭಾವಿ ಪತಿ ಎಂದು ಬರೆದುಕೊಂಡಿದ್ದಾರೆ.