ಪಕ್ಕದಲ್ಲಿ ರಶ್ಮಿಕಾ ಇರುವಾಗ್ಲೇ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 'ಅನಿಮಲ್'​ ರಿವೇಂಜಾ ಕೇಳ್ತಿದ್ದಾರೆ ನೆಟ್ಟಿಗರು!

By Suvarna News  |  First Published Jan 12, 2024, 4:45 PM IST

ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್​ ವೇದಿಕೆಯ ಮೇಲೆ ಡ್ಯಾನ್ಸ್​ ಮಾಡ್ತಿರುವಾಗ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 
 


 ಅನಿಮಲ್​ ಚಿತ್ರದ ಬಳಿಕ ಭಾರಿ ಪ್ರಚಾರದಲ್ಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಹಸಿಬಿಸಿ ದೃಶ್ಯಕ್ಕೆ ರಶ್ಮಿಕಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದೇ ಇನ್ನೊಂದೆಡೆ,  ನಟಿ ತೃಪ್ತಿ ಡಿಮ್ರಿ ಅವರು ಸಂಪೂರ್ಣ ಬೆತ್ತಲಾಗಿ ರಾತ್ರೋರಾತ್ರಿ ಸೂಪರ್​ಸ್ಟಾರ್​ ಆದರು.  ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಇವೆಲ್ಲ ಇದ್ದಕ್ಕೂ ಅನಿಮಲ್​ ಚಿತ್ರ ಭಾರಿ ಕಲೆಕ್ಷನ್​ ಮಾಡಿದ್ದು, ಸಿನಿಮಾ ಪ್ರೇಮಿಗಳು ಈ ಚಿತ್ರವನ್ನು ಯಶಸ್ವಿಗೊಳಿಸಿದ್ದಾರೆ.  ಈ ಚಿತ್ರದಲ್ಲಿ  ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ,  ಎಲ್ಲವೂ ಇದೆ ಎಂದು ಕೆಲವರು ಕಿಡಿ ಕಾರುತ್ತಲೇ  ಇದ್ದಾರೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ ಎನ್ನತ್ತಲೇ ಇದ್ದಾರೆ.  ಚಿತ್ರದಲ್ಲಿ ರಣಬೀರ್‌ ಕಪೂರ್‌   ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್‌ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ.  ಇವೆಲ್ಲ ಸರಿಯಲ್ಲ ಎನ್ನುವ ಆರೋಪ ಮಾಡುತ್ತಲೇ ವೀಕ್ಷಕರು ಈ ಚಿತ್ರವನ್ನು ಭರ್ಜರಿಯಾಗಿ ಯಶಸ್ವಿ ಮಾಡಿದ್ದಾರೆ.

ರಣವೀರ್​ ಕಪೂರ್​ ಅವರ ರಶ್ಮಿಕಾ ಮತ್ತು ತೃಪ್ತಿ ಜೊತೆಗಿನ ನಟನೆ  ಅಶ್ಲೀಲತೆಯ ಪರಮಾವಧಿ ಎಂದು ಒಂದು ವರ್ಗ ಟ್ರೋಲ್​ ಮಾಡುತ್ತಲೇ ಇದೆ. ಅದೇ ಇನ್ನೊಂದು ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ದೀಪಿಕಾ ಪಡುಕೋಣೆ ಪತಿ ರಣವೀರ್​ ಸಿಂಗ್​ ಲಿಪ್​ಲಾಕ್​ ಮಾಡಿದಾಗಲೂ ಇದೇ ರೀತಿ ಮಾತು ಕೇಳಿಬಂದಿತ್ತು.  ಅದೇನೇ ಇದ್ದರೂ ಆಲಿಯಾ ಭಟ್​, ಅನಿಮಲ್​ನಲ್ಲಿ ಹೆಣ್ಣುಮಕ್ಕಳ ಮೇಲೆ ಕ್ರೌರ್ಯ ಮೆರೆದ ತಮ್ಮ ಪತಿಯ ಪಾತ್ರವನ್ನು ಮನಸಾರೆ ಹೊಗಳಿದ್ದರು. ನಟಿ ತೃಪ್ತಿ ಡಿಮ್ರಿಯ ಜೊತೆ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರೂ ಪತಿಯ ನಟನೆಯನ್ನು ಶ್ಲಾಘಿಸಿದ್ದರು. 

Tap to resize

Latest Videos

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ


 ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕೆಲ ದಿನಗಳ ಹಿಂದೆ ಅನಿಮಲ್​ ಸಕ್ಸಸ್​ ಪಾರ್ಟಿ ಅರೇಂಜ್ ಮಾಡಲಾಗಿತ್ತು.  ಅನಿಮಲ್ ನಂತರ ರಶ್ಮಿಕಾ  ಪುಷ್ಪ 2 ಸಿನಿಮಾದ ಶೂಟಿಂಗ್​ನಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಬೇಗ ಮುಗಿಸಲು ಚಿತ್ರತಂಡ ಭಾರೀ ಶ್ರಮ ವಹಿಸುತ್ತಿದ್ದು ತ್ವರಿತವಾಗಿ ಶೂಟಿಂಗ್ ಕಂಪ್ಲೀಟ್ ಮಾಡುತ್ತಿದೆ. ಇದರ ನಡುವೆಯೇ ಅನಿಮಲ್​ ಯಶಸ್ಸಿನ ಪಾರ್ಟಿಗಾಗಿ ರಶ್ಮಿಕಾ  ಹೈದರಾಬಾದ್​ನಿಂದ ಮುಂಬೈಗೆ ಹೋಗಿದ್ದರು.  ಕಾರ್ಯಕ್ರಮದಲ್ಲಿ ರಶ್ಮಿಕಾರನ್ನು ನೋಡುತ್ತಿದ್ದಂತೆಯೇ ರಣಬೀರ್​ ಅವರಿಗೆ ಪ್ರೀತಿ ಉಕ್ಕಿ ಹರಿದಿದೆ. ಅನಿಮಲ್​ ತಂಡದ ಈಕೆಯ ನಟನೆಯ ಕುರಿತು ಶ್ಲಾಘನೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಣಬೀರ್​ ಪ್ರೀತಿಯಲ್ಲಿ ಆಲಿಯಾ ಎದುರೇ ರಶ್ಮಿಕಾ ಕೆನ್ನೆಗೆ ಮುತ್ತಿಕ್ಕಿದ್ದರು. ಇದರಿಂದ ಸಕತ್​ ಟ್ರೋಲ್​ ಆಗುತ್ತಲೇ ಇದೆ ಜೋಡಿ. 

ಇದೀಗ ಇದರ ಬೆನ್ನಲ್ಲೇ ಆಲಿಯಾ ಭಟ್​ ಮತ್ತು ರಶ್ಮಿಕಾ ನಾಟು ನಾಟು ಹಾಡಿಗೆ ವೇದಿಕೆಯ ಮೇಲೆ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಆಲಿಯಾ ಅವರು,  ರಶ್ಮಿಕಾ ಪಕ್ಕದಲ್ಲಿ ಇರುವಾಗಲೇ ತಮ್ಮ ಹೈಹೀಲ್ಸ್​ ಚಪ್ಪಲಿಯನ್ನು ಕೈಯಿಂದ ತೆಗೆದು ಎಸೆದಿದ್ದಾರೆ. ಆದರೆ ರಶ್ಮಿಕಾ ಹೈಹೀಲ್ಸ್​ನಲ್ಲಿಯೇ ಸ್ಟೆಪ್​ ಹಾಕಿದ್ದಾರೆ. ಅಷ್ಟಕ್ಕೂ ಚಪ್ಪಲಿ ಧರಿಸಿ ಯಾವುದೇ ಹಾಡಿಗೆ ಡ್ಯಾನ್ಸ್​  ಮಾಡುವುದು ಆಲಿಯಾ ಭಟ್​ಗೆ ಹೊಸದೇನಲ್ಲ. ಆದರೆ ಅವರು ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ, ಒಟ್ಟಿನಲ್ಲಿ ರಶ್ಮಿಕಾ ಮತ್ತು ಅನಿಮಲ್​ ಚಿತ್ರದಲ್ಲಿ ರಣವೀರ್ ಕಪೂರ್​ ಜೊತೆಗಿನ ಅವರ ದೃಶ್ಯವನ್ನು ಎಳೆದು ತಂದಿರುವ ಟ್ರೋಲಿಗರು, ಆಲಿಯಾ ರಶ್ಮಿಕಾ ಎದುರು ಚಪ್ಪಲಿ ತೆಗೆದು ಅನಿಮಲ್​ ರಿವೇಂಜ್​ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. ಈ ವಿಡಿಯೋಗೆ ಸಕತ್​ ಕಮೆಂಟ್​ಗಳು ಬರುತ್ತಿವೆ. 

ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್​ ಕೊಟ್ಟ ರಣಬೀರ್​- ವಿಡಿಯೋ ವೈರಲ್

click me!