ಯೋಗಿ ಆದಿತ್ಯನಾಥ ಅವರಿಗೆ ನಟಿ ಕಂಗನಾ ರಣಾವತ್ ಅವರು ತಮ್ಮ 'ತೇಜಸ್' ಚಿತ್ರದ ವೀಕ್ಷಣೆಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಸಿನಿಮಾ ನೋಡಿ ಭಾವುಕರಾಗಿದ್ದಾರೆ ಮುಖ್ಯಮಂತ್ರಿ
ಸೈನಿಕ ಹಾಗೂ ಹುತಾತ್ಮರ ಜೀವನವನ್ನು ಆಧರಿಸಿದ ತೇಜಸ್ ಚಲನಚಿತ್ರವನ್ನು ಮೊನ್ನೆ ಬಿಡುಗಡೆಯಾಗಿದೆ. ನಟಿ ಕಂಗನಾ ರಣಾವತ್ ಅವರು ಅಭಿನಯಿಸಿರುವ ಈ ಚಿತ್ರವನ್ನು ವೀಕ್ಷಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವಿಶೇಷ ಪ್ರದರ್ಶನವನ್ನು ನಟಿ ಏರ್ಪಡಿಸಿದ್ದರು. ಲಖನೌದ ಲೋಕಭವನ ಸಭಾಂಗಣದಲ್ಲಿ ಚಿತ್ರವನ್ನು ಯೋಗಿ ಆದಿತ್ಯನಾಥ ಅವರು ವೀಕ್ಷಿಸಿದರು. ಇದನ್ನು ನೋಡಿದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾವುಕರಾದರಂತೆ. ಈ ಕುರಿತು ಕಂಗನಾ ತಿಳಿಸಿದ್ದಾರೆ. ಈ ಚಿತ್ರವು ವಾಯುಪಡೆಯ ಪೈಲಟ್ ತೇಜಸ್ ಗಿಲ್ ಅವರ ಅಸಾಮಾನ್ಯ ಪ್ರಯಾಣ ಬಗ್ಗೆ ತಿಳಿಸುತ್ತದೆ. ಭಾರತೀಯ ವಾಯುಪಡೆಯ ಪೈಲಟ್‌ಗಳು ನಮ್ಮ ದೇಶವನ್ನು ರಕ್ಷಿಸಲು ಹೇಗೆ ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ, ದಾರಿಯುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸುತ್ತದೆ ಎನ್ನುವುದು ಈ ಚಿತ್ರದ ಹುರುಳು.
undefined
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ಹಂಚಿಕೊಂಡ ನಟಿ ಕಂಗನಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ಹುತಾತ್ಮರ ಜೀವನ ಆಧರಿತ ತೇಜಸ್ ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಚಿತ್ರವನ್ನು ನೋಡಿ ಮುಖ್ಯಮಂತ್ರಿಗಳು ಕಣ್ಣೀರು ಹಾಕಿದರು. ಅವರಿಗೆ ಕಣ್ಣೀರು ತಡೆಯೋಕೆ ಆಗಲಿಲ್ಲ ಎಂದು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಫೋಟೋ ಕೂಡ ವೈರಲ್ ಆಗಿದೆ. ಇದರಲ್ಲಿ ಯೋಗಿ ಆದಿತ್ಯನಾಥ ಅವರು ಭಾವುಕರಾಗಿರೋದನ್ನು ನೋಡಬಹುದು.
ಒಬ್ಬ ಸೈನಿಕನಿಗೆ ಇದಕ್ಕಿಂತ ಇನ್ನೇನು ಬೇಕು…? ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ಕಂಡು ಮಹಾರಾಜ್ ಜೀ ಎಷ್ಟು ಭಾವುಕರಾದರು ಎಂದರೆ ಅವರ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಮಹಾರಾಜ್ ಜೀ, ನಿಮ್ಮ ಪ್ರಶಂಸೆ ಮತ್ತು ಆಶೀರ್ವಾದದಿಂದ ನಾವು ಕೃತಜ್ಞರಾಗಿರುತ್ತೇವೆ ಎಂದು ಕಂಗನಾ ಹೇಳಿದ್ದಾರೆ. ಜೊತೆಗೆ ದೇಶದ್ರೋಹಿಗಳನ್ನು ಮಟ್ಟ ಹಾಕಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದಾಗಿ ನಟಿ ಮಾಧ್ಯಮಗಳಿಗೆ ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿಗಳು ಕಂಗನಾ ಅವರಿಗೆ ವಿಶೇಷ ಮೆಚ್ಚುಗೆಯ ಉಡುಗೊರೆ ನೀಡಿದ್ದಾರೆ. ಇದಕ್ಕೂ ಮುನ್ನ ನಟಿ ದೆಹಲಿಯ ಭಾರತೀಯ ವಾಯುಪಡೆಯ ಆಡಿಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಲವಾರು ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಈ ಚಿತ್ರಕ್ಕಾಗಿ ನಟಿ ಸಾಕಷ್ಟು ಶ್ರಮ ವಹಿಸಿದ್ದರೂ ಯಾಕೋ ಪ್ರದರ್ಶನ ಅಷ್ಟು ಚೆನ್ನಾಗಿ ಕಾಣುತ್ತಿಲ್ಲ. ಚಿತ್ರ ಸದ್ಯ 4.5ಕೋಟಿ ರೂಪಾಯಿಗಳನ್ನಷ್ಟೇ ಗಳಿಸಲು ಶಕ್ಯವಾಗಿದೆ.
| Lucknow, UP: On special screening of film 'Tejas', Actress Kangana Ranaut says, "CM Yogi Adityanath got emotional while watching the movie. He has assured us that he will support us and will motivate the nationalists to connect with the film...It is not a film on women… pic.twitter.com/8SiQFHDlz7
— ANI (@ANI)