ಎಲ್ಲಿದ್ದೇವೆ ಅನ್ನೋದನ್ನೂ ಮರೆತು ದೀಪಿಕಾಗೆ ರಣವೀರ್ ಕಿಸ್ ಕೊಟ್ಟಿದ್ದಾರೆ. ಇದಕ್ಕೆ ಸಕತ್ ಟ್ರೋಲ್ ಆಗುತ್ತಿದ್ದು, ಎಲ್ಲವೂ ಪಬ್ಲಿಸಿಟಿ ಹುಚ್ಚಿಗಾಗಿ ಅಂತಿದ್ದಾರೆ ನೆಟ್ಟಿಗರು.
ಸದ್ಯ ಬಾಲಿವುಡ್ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಹಳ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಕಾಫಿ ವಿತ್ ಕರಣ್ ಷೋನಲ್ಲಿ ಕಾಣಿಸಿಕೊಂಡಿದ್ದು. ಈ ಸಮಯದಲ್ಲಿ ದೀಪಿಕಾ ತೀರಾ ವೈಯಕ್ತಿಕ ವಿಷಯ ಮಾತನಾಡಿದ್ದು, ಅದು ರಣವೀರ್ ಅವರಿಗೆ ಸಿಟ್ಟು ತರಿಸಿದ ಬಳಿಕ ಈ ಜೋಡಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್ 14ಕ್ಕೆ ಐದು ವರ್ಷಗಳು ಕಳೆಯಲಿವೆ. ಮೊನ್ನೆ ಕಾಫಿ ವಿತ್ ಕರಣ್ ಷೋನಲ್ಲಿ ಇದೇ ಮೊದಲ ಬಾರಿಗೆ, ಮದುವೆಯಾಗಿ ಐದು ವರ್ಷಗಳ ಬಳಿಕ ಮದುವೆಯ ವಿಡಿಯೋ ರಿಲೀಸ್ ಮಾಡಿದ್ದರು. ಈ ಸಮಯದಲ್ಲಿ ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿತ್ತು. ಪತಿ ರಣವೀರ್ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್ ಕುರಿತು ಪ್ರಿಯಾಂಕಾ ಮಾತನಾಡಿದ್ದು, ಇದು ಸಕತ್ ಟ್ರೋಲ್ಗೂ ಕಾರಣವಾಯಿತು ಮಾತ್ರವಲ್ಲದೇ ಹಲವರು ಹಲವು ವಿಧದಲ್ಲಿ ದೀಪಿಕಾ ಮಾತನ್ನು ಅರ್ಥೈಸತೊಡಗಿದ್ದಾರೆ.
ಇದರ ನಡುವೆಯೇ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರಣವೀರ್ ಅವರು ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎನ್ನುವುದನ್ನೂ ಮರೆತು ಎಲ್ಲರ ಎದುರೇ ಪತ್ನಿ ದೀಪಿಕಾಗೆ ಮುತ್ತು ಕೊಟ್ಟಿದ್ದು, ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಇದನ್ನೆಲ್ಲಾ ಮನೆಯಲ್ಲಿ ಇಟ್ಟುಕೊಳ್ಳಿ, ಈ ಪರಿ ನಿಮ್ಮ ಪ್ರೀತಿಯನ್ನು ಸಾರ್ವಜನಿಕಗೊಳಿಸಬೇಡಿ ಎಂದು ಹಲವರು ಹೇಳುತ್ತಿದ್ದಾರೆ. ನೀವು ಪತ್ನಿಯನ್ನು ಪ್ರೀತಿಸುತ್ತೀರಿ ಎಂದು ಪಬ್ಲಿಸಿಟಿಗೋಸ್ಕರ ಇದೆಲ್ಲಾ ಮಾಡುವುದು ಬೇಕಿಲ್ಲ ಎನ್ನುತ್ತಿದ್ದಾರೆ ಇನ್ನು ಕೆಲವರು. ಅಷ್ಟಕ್ಕೂ ಈ ರೀತಿ ರಣವೀರ್ ನಡೆದುಕೊಂಡದ್ದು, ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನಾ ಕಾರ್ಯಕ್ರಮದಲ್ಲಿ. ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡ ಬಂದಿದ್ದರು. ರಿಲಯೆನ್ಸ್ ಫೌಂಡೇಷನ್ ಸ್ಥಾಪಕಿ ಮತ್ತು ಮುಖ್ಯಸ್ಥೆ ನೀತಾ ಅಂಬಾನಿಯವರು ಈ ಈವೆಂಟ್ ಆಯೋಜಿಸಿದ್ದರು. ಎಲ್ಲರೂ ಇರುವಾಗಲೇ ಏನೂ ಕಾರಣವಿಲ್ಲದೇ, ತಾನು ಎಲ್ಲಿದ್ದೇನೆ ಎನ್ನುವುದನ್ನೂ ಮರೆತು ರಣವೀರ್ ಪಕ್ಕದಲ್ಲಿದ್ದ ಪತ್ನಿಗೆ ಕಿಸ್ ಕೊಟ್ಟಿದ್ದು, ಅದು ವಿಡಿಯೋದಲ್ಲಿ ದಾಖಲಾಗಿದೆ. ವಿಡಿಯೋ ಇದೀಗ ವೈರಲ್ ಆಗಿದೆ. ಇವರಿಬ್ಬರು ನೀತಾ ಅಂಬಾನಿ ಜತೆ ಮಾತನಾಡುತ್ತಿದ್ದರು. ಜಿಯೋ ವರ್ಲ್ಡ್ ಪ್ಲಾಜಾದ ಹೊರಗಡೆ ತಮ್ಮ ಕಾರಿಗಾಗಿ ಕಾಯುತ್ತ ಇದ್ದರು. ಆ ಸಂದರ್ಭದಲ್ಲಿ ಇವರು ಇಶಾ ಅಂಬಾನಿ ಜತೆಯೂ ಮಾತನಾಡುತ್ತಿದ್ದರು. ಆಗ ರಣವೀರ್ ಹಿಂದೆ ಮುಂದೆ ನೋಡದೆ ಎಲ್ಲರೆದುರೂ ಕಿಸ್ ಮಾಡಿದ್ದಾರೆ.
undefined
ಅಷ್ಟಕ್ಕೂ ಕಾಫಿ ವಿತ್ ಕರಣ್ ಷೋನಲ್ಲಿ ದೀಪಿಕಾ ಮೇಲೆ ರಣವೀರ್ ಮುನಿಸಿಕೊಂಡಿದ್ದು, ಅದು ಇಂದಿಗೂ ಸಕತ್ ಸದ್ದು ಮಾಡುತ್ತಿದೆ. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ರು. ಇದಕ್ಕೆ ದೀಪಿಕಾ ಉತ್ತರಿಸುತ್ತಾ, ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.
ಇದಕ್ಕೆ ಹಲವಾರು ಅರ್ಥ ಕಲ್ಪಿಸಲಾಗುತ್ತಿದೆ. ಕೆಲವರಂತೂ ದೀಪಿಕಾ ದೈಹಿಕ ಸುಖಕ್ಕೆ ಪರಪುರಷರ ಬಳಿ ಹೋಗುತ್ತಾರೆ, ಮಾನಸಿಕವಾಗಿ ಮಾತ್ರ ಪತಿ ರಣವೀರ್ ಬಳಿ ಇದ್ದಾರೆ ಎನ್ನುವಂಥ ಕೀಳು ಮಟ್ಟದ ಅರ್ಥವನ್ನೂ ಕಲ್ಪಿಸುತ್ತಿದ್ದಾರೆ. ಇಂಥ ಅಸಂಬಂಧ ಮಾತುಗಳನ್ನಾಡಬೇಡಿ ಎಂದು ಖುದ್ದು ಕರಣ್ ಜೋಹರ್ ಅವರು ಜನರ ವಿರುದ್ಧ ಕಿಡಿ ಕಾರಿದ್ದೂ ಆಗಿದೆ. ಇದೀಗ ರಣವೀರ್ ಹೀಗೆ ಮಾಡಿದ್ದು, ಎಲ್ಲವೂ ಪಬ್ಲಿಸಿಟಿಗಾಗಿ ಎನ್ನುತ್ತಿದ್ದಾರೆ ನೆಟ್ಟಿಗರು. ಪತ್ನಿಯನ್ನು ಪ್ರೀತಿಸಿದರೆ ಹೀಗೆ ಎಲ್ಲರ ಎದುರು ಪ್ರದರ್ಶನ ಮಾಡುವುದು ಬೇಕಿರಲಿಲ್ಲ ಎನ್ನುತ್ತಿದ್ದಾರೆ.
baibes🥹❤️ pic.twitter.com/OSDiKQ1WNO
— . (@Dprsfan_)