ಟಾಕ್ಸಿಕ್ ಸಿನಿಮಾ 'ಧುರಂಧರ್-2' ಸಿನಿಮಾವನ್ನು ನುಂಗಿ ಹಾಕಿದೆ.. ಹೀಗಂತ ಮುಂಬೈ ಮುಂದಿ ಹೇಳ್ತಿರೋದು ಯಾಕೆ?

Published : Feb 04, 2026, 05:08 PM IST
Yash Ranveer Singh

ಸಾರಾಂಶ

‘ಟಾಕ್ಸಿಕ್’ ಸಿನಿಮಾ ಈಗಾಗಲೇ ‘ಧುರಂಧರ್ 2’ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ' ಎಂದು ಹಿಂದಿಯ ಕೆಲವು ಫ್ಯಾನ್ಸ್ ಹೇಳಿಕೊಂಡಿದ್ದಾರೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ.

ಟಾಕ್ಸಿಕ್-ಧುರಂಧರ್ 2 ಫೈಟ್

ರಣವೀರ್ ಸಿಂಗ್ (Ranveer Singh) ಅಭಿನಯದ 'ಧುರಂಧರ್' ಸಿನಿಮಾ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿರೋದು ಗೊತ್ತೇ ಇದೆ. ಈ ಸಿನಿಮಾದ ಸೀಕ್ವೆಲ್, 'ಧುರಂಧರ್-2' ಸಿನಿಮಾ ಮುಂದಿನ ತಿಂಗಳು 19ಕ್ಕೆ, ಅಂದರೆ 19 ಮಾರ್ಚ್ 2026ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗೆ 'ಧುರಂಧರ್-2' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಹಲವರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಕಾರಣ, 'ಈ ಟೀಸರ್‌ನಲ್ಲಿ ಟೀಮ್‌ ಅದೇನು ಮಾಡಿದೆ ಎಂದರೆ, ಈ ಮೊದಲು ತೆರೆಗೆ ಬಂದಿದ್ದ ಧುರಂಧರ್ ಸಿನಿಮಾದ ಎಂಡ್‌ ಕಾರ್ಡ್ ಬಳಸಿಕೊಂಡು ಟೀಸರ್ ಮಾಡಿದೆ'. ಇದು ಅನೇಕರಿಗೆ ಇಷ್ಟವಾಗಿಲ್ಲ.

ಯಶ್ (Yash) ನಟನೆಯ ಟಾಕ್ಸಿಕ್ (Toxic) ಹಾಗೂ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' (Dhurandher 2) ಸಿನಿಮಾಗಳು ಒಟ್ಟಿಗೇ ಅಂದರೆ, 19 ಮಾರ್ಚ್‌ 2026ರಂದು ಬಿಡುಗಡೆ ಆಗುತ್ತಿವೆ. ಈ ಮಧ್ಯೆ ರಣವೀರ್ ಚಿತ್ರಕ್ಕಿಂತ ಯಶ್ ನಟನೆಯ 'ಟಾಕ್ಸಿಕ್' ಮೇಲು ಎಂದು ಹಿಂದಿ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣ, ಟೀಸರ್ ಇಫೆಕ್ಟ್.. ಟಾಕ್ಸಿಕ್ ಚಿತ್ರದ ಟೀಸರ್ ಭಾರೀ ಹವಾ ಸೃಷ್ಟಿಸಿದ್ರೆ ಧುರಂಧರ್ ಹಳಸಲು ಐಟಂ ಎನ್ನಲಾಗುತ್ತಿದೆ.

ಮಾರ್ಚ್ 19ರಂದು 'ಧುರಂಧರ್ 2' ಹಾಗೂ 'ಟಾಕ್ಸಿಕ್' ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡೂ ಸಿನಿಮಾಗಳೂ ಮುಖಾಮುಖಿಯಾಗುತ್ತಿವೆ. ರಣವೀರ್ ಸಿಂಗ್ 'ಧುರಂಧರ್' ಚಿತ್ರ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ. ಇದೇ ಕಾರಣಕ್ಕೆ ಈ ಚಿತ್ರದ ಸೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಬಿಡುಗಡೆ ಆಗಿರೋ ಟೀಸರ್ ನಿರಾಸೆ ಮೂಡಿಸಿದೆ. ಆದರೆ, 'ಟಾಕ್ಸಿಕ್' ಟೀಸರ್ ಸೃಷ್ಟಿಸಿದ್ದ ಹವಾ ಬೇರೆಯದೇ ರೀತಿಯಲ್ಲಿ ಇದೆ. ಹೀಗಾಗಿ ರೇಸ್‌ನಲ್ಲಿ 'ಟಾಕ್ಸಿಕ್' ಮುಂದಿದೆ ಎನ್ನಲಾಗುತ್ತಿದೆ.

ಟಾಕ್ಸಿಕ್‌ ಸಿನಿಮಾಗೆ ಹೆಚ್ಚಿನ ನಿರೀಕ್ಷೆ?

ಹಿಂದಿ ಯೂಟೂಬರ್‌ಗಳು ಅಲ್ಲಿನ ಪ್ರೇಕ್ಷಕರ ಬಳಿ 'ಧುರಂಧರ್ 2' ಬೆಸ್ಟ್ ಅಥವಾ 'ಟಾಕ್ಸಿಕ್' ಬೆಸ್ಟ್ ಎಂದು ಕೇಳಿದ್ದಾರೆ. ಇದಕ್ಕೆ 'ಟಾಕ್ಸಿಕ್' ಎಂಬ ಉತ್ತರವನ್ನು ಹಲಚು ಪ್ರೇಕ್ಷಕರು ನೀಡಿದ್ದಾರೆ. 'ಧುರಂಧರ್ ಸೀಕ್ವೆಲ್‌ನ ಟೀಸರ್ ನೋಡಿದೆ. ಮತ್ತೆ ಮತ್ತೆ ಅದನ್ನೇ ತೋರಿಸಿದರೆ ಯಾರಿಗೆ ಇಷ್ಟ ಆಗುತ್ತದೆ ಹೇಳಿ? ಧುರಂಧರ್ ಎಂಡ್ ಕಾರ್ಡ್ ದೃಶ್ಯಗಳನ್ನು ಟೀಸರ್ ಎಂದು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಟಾಕ್ಸಿಕ್ ಸಿನಿಮಾ ಗೆಲ್ಲಬಹುದು ಎಂದು ಅನಿಸುತ್ತಿದೆ' ಎಂದು ಕೆಲವರು ಹೇಳಿದ್ದಾರೆ. 'ಮೊದಲ ದಿನ ಟಾಕ್ಸಿಕ್ ಸಿನಿಮಾ ನೋಡೋದು' ಎಂದಿದ್ದಾರೆ ಹಲವರು.

ಇನ್ನೂ ಕೆಲವರು ‘ಟಾಕ್ಸಿಕ್’ ಸಿನಿಮಾ ಈಗಾಗಲೇ ‘ಧುರಂಧರ್ 2’ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ' ಎಂದು ಹಿಂದಿಯ ಕೆಲವು ಫ್ಯಾನ್ಸ್ ಹೇಳಿಕೊಂಡಿದ್ದಾರೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಾಣಲಿವೆ. ಭವಿಷ್ಯವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೆ, ಸದ್ಯಕ್ಕಂತೂ ಈ ಎರಡೂ ಚಿತ್ರಗಳ ಮೇಲೆ ನಿರೀಕ್ಷೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಆದ್ಮೇಲೆ ಒಂದು ದಿನವೂ ಅಡುಗೆ ಮಾಡಿಲ್ಲ ಶೋಭಿತಾ, ಪ್ರತಿ ದಿನ ಹೊಟೇಲ್ ತಿಂಡಿ ತಿಂತಾರೆ ಅಕ್ಕಿನೇನಿ ಸೊಸೆ
ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ: ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌