ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ

Published : Apr 08, 2022, 10:34 AM IST
ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ

ಸಾರಾಂಶ

ಬಾಲಿವುಡ್ ಸ್ಟಾರ್ ಗಳಾದ ಶಾರುಖ್​ ಖಾನ್ ಹಾಗೂ ಸಲ್ಮಾನ್​ ಖಾನ್ ಅವರಿಗೆ ಯಶ್​ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್ 'ನಾನು ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಲ್ಲಿ ಯಾವುದೂ ಶಾಶ್ವತವಲ್ಲ. ಅವರು ಸೂಪರ್‌ ಸ್ಟಾರ್‌ ಗಳು'ಎಂದು ಹೇಳಿದ್ದಾರೆ. 

ಪ್ಯಾನ್ ಇಂಡಿಯಾ ಸ್ಟಾರ್ ಯಶ್(Yash) ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ (KGF 2) ಬಿಡುಗಡೆ ತಯಾರಿಯಲ್ಲಿದ್ದಾರೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಯಶ್ ಮತ್ತು ತಂಡ ಬ್ಯುಸಿಯಾಗಿದೆ. ಉತ್ತರ ಭಾರತದಲ್ಲಿ ಪ್ರಚಾರ ನಡೆಯುತ್ತಿರುವ ಯಶ್ ಗೆ ಅನೇಕ ಪ್ರಶ್ನೆಗಳು ಎದುರಾಗುತ್ತಿವೆ. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರದಲ್ಲೂ ಭರ್ಜರಿ ಹವಾ ಸೃಷ್ಟಿಸಿರುವ ಯಶ್ ನೋಡಿ ಬಾಲಿವುಡ್ ಕೂಡ ದಂಗ್ ಆಗಿದೆ. ಬಾಲಿವುಡ್ ಸ್ಟಾರ್ ನಟರೇ ಸಿನಿಮಾ ಬಿಡುಗಡೆ ಮಾಡಲು ಭಯಪಡುವಷ್ಟು ಮಟ್ಟಕ್ಕೆ ಕೆಜಿಎಫ್-2 ಕ್ರೇಸ್ ಸೃಷ್ಟಿಯಾಗಿದೆ. ಕೆಜಿಎಫ್ ಬಿಡುಗಡೆಯಾದ ದಿನವೇ ಶಾರುಖ್ ಖಾನ್​ ನಟನೆಯ ಝೀರೋ ಚಿತ್ರ ರಿಲೀಸ್ ಆಗಿತ್ತು. ಆದರೆ ಯಶ್ ಕೆಜಿಎಫ್ ಮುಂದೆ ಶಾರುಖ್​ ಚಿತ್ರ ಹೀನಾಯ ಸೋಲು ಕಂಡಿತ್ತು. ದಕ್ಷಿಣ ಭಾರತದ ಸಿನಿಮಾ ಮುಂದೆ ಶಾರುಖ್ ಮಂಡಿಯೂರಿದ್ದರು.

ಹಿಂದಿಯಲ್ಲೂ ಯಶ್​ ಕೆಜಿಎಫ್ ಸಿನಿಮಾ ಗೆದ್ದು ಬೀಗಿತ್ತು. ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಸೂಪರ್ ಸ್ಟಾರ್ ಶಾರುಖ್ (Shah Rukh Khan) ಸಿನಿಮಾವನ್ನು ಸೋಲಿಸಿರುವುದರಿಂದ ಯಶ್​ ಗ್ರೇಟ್​ ಎನ್ನುವ ಮಾತು ಕೇಳಿ ಬಂತು. ಇದೀಗ ಕೆಜಿಎಫ್-2 ಕೂಡ ಅಷ್ಟೆ ದೊಡ್ಡ ಮಟ್ಟದಲ್ಲಿ ತೆರೆಗೆ ಬರ್ತಿದೆ. ಬಾಲಿವುಡ್ ನಲ್ಲೂ ಕೆಜಿಎಫ್-2 ಹವಾ ಜೋರಾಗಿದೆ. ಈ ವೇಳೆ ಬಾಲಿವುಡ್ ಸ್ಟಾರ್ ಗಳಾದ ಶಾರುಖ್​ ಖಾನ್ ಹಾಗೂ ಸಲ್ಮಾನ್​ ಖಾನ್ (Salman Khan)​ ಅವರಿಗೆ ಯಶ್​ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಈ ಬಗ್ಗೆ ಹೋಲಿಕೆ ಮಾಡಿ ಪ್ರಶ್ನೆ ಕೇಳಿದಾಗ ಯಶ್ ಇಲ್ಲಿ ಯಾರು ಶಾಶ್ವತ ಅಲ್ಲ, ಹೋಲಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಯಶ್ ಸಿನಿಮಾ ರಂಗಕ್ಕೆ ಬರುವ ಸಂದರ್ಭದಲ್ಲಿ ಸಲ್ಮಾನ್​ ಹಾಗೂ ಶಾರುಖ್​ ಖಾನ್ ಇಬ್ಬರೂ ಸ್ಟಾರ್ ಆಗಿದ್ದರು. ಹಾಗಾಗಿ ಈಗ ಯಶ್ ಗೆ ಅವರ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ ಎನ್ನುವುದು ಯಶ್ ಅಭಿಪ್ರಾಯ. ಈ ಬಗ್ಗೆ ಪ್ರಶ್ನೆ ಎದುರಾದಾಗ ಯಶ್ ಪ್ರತಿಕ್ರಿಯೆ ಹೀಗಿತ್ತು.
 

'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

'ನಾನಿನ್ನೂ ಸಿನಿಮಾ ಮಗು. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವುದು ನಿಮಗೂ ತಿಳಿದಿದೆ. ಅವರು ಸೂಪರ್‌ ಸ್ಟಾರ್‌ ಗಳು. ಅವರನ್ನು ಅಗೌರವಿಸುವುದು ಅಥವಾ ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ. ನಾನು ನಟನಾಗಲು ಅವರೆಲ್ಲರೂ ಸ್ಫೂರ್ತಿ. ಅವರು ಸಿನಿಮಾರಂಗದ ಆಧಾರ ಸ್ತಂಭಗಳು' ಎಂದು ಹೇಳಿದ್ದಾರೆ.

ಅಂದಹಾಗೆ ಕೆಜಿಎಫ್ ಮೊದಲ ಭಾಗ ಬಿಡುಗಡೆ ಸಮಯದಲ್ಲಿ ಶಾರುಖ್ ನಟನೆಯ ಝೀರೋ ಸಿನಿಮಾ ಬಿಡುಗಡೆಯಾಗಿತ್ತು. ಕೆಜಿಎಫ್ 2 ಬಿಡುಗಡೆ ಸಮಯದಲ್ಲಿ ಶಾಹಿದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ರಿಲೀಸ್ ಆಗುತ್ತಿದೆ. ಕೆಜಿಎಫ್-2 ಹವಾದ ಮುಂದೆ ಜೆರ್ಸಿ ಸಿನಿಮಾ ಧೂಳಿಪಟವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಒಬ್ಬ ರಾಖಿ, ನೂರಾರು ಅವತಾರ; ಈ ವಿಡಿಯೋದಲ್ಲಿ ಕೆಜಿಎಫ್ ಫುಲ್ ಲುಕ್!

ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆ ಗಳಿಗೆ ತೆರೆ ಬೀಳಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?