'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

By Shruiti G KrishnaFirst Published Apr 8, 2022, 9:53 AM IST
Highlights

ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಟಿಕೆಟ್ ಹಿಂದಿ ಭಾಗದಲ್ಲಿ ಸೋಲ್ಡ್ ಔಟ್ ಆಗಿದೆ. ಬುಕ್ಕಿಂಗ್ ಓಪನ್ ಆಗಿ 12ಗಂಟೆಗಳಲ್ಲಿ ಸುಮಾರು 1.7 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ. ಒಟ್ಟು 3.35 ಕೋಟಿ ರೂಪಾಯಿ ಗಳಿಸಿದೆ ಎಂದು ಆಂಗ್ಲ ವೆಬ್ ಪೋರ್ಟಲ್ ಪಿಂಕ್ ವಿಲ್ಲ ವರದಿ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2) ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಏಪ್ರಿಲ್ 14ರಂದು(April 14th) ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಅಲ್ಲದೆ ಈಗಾಗಲೇ ಬಿಡುಗಡೆಯಾಗಿರುವ ಎರಡೂ ಹಾಡುಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಸಿನಿಮಾತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಉತ್ತರ ಭಾರತದಲ್ಲಿ ಪ್ರಚಾರಕಾರ್ಯ ಶುರು ಮಾಡಿರುವ ಸಿನಿಮಾತಂಡ ಇನ್ನು ದಕ್ಷಿಣ ಭಾರತದ ಕಡೆ ಬಂದಿಲ್ಲ. ಈ ನಡುವೆ ಕೆಲವು ಕಡೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ.

ವಿದೇಶಗಳಲ್ಲಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು ದಾಖಲೆಯ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಈ ಬಗ್ಗೆ ಸಿನಿಮಾತಂಡ ಮಾಹಿತಿ ಹಂಚಿಕೊಂಡಿತ್ತು. ಇದೀಗ ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಟಿಕೆಟ್ ಹಿಂದಿ ಭಾಗದಲ್ಲಿ ಸೋಲ್ಡ್ ಔಟ್ ಆಗಿದೆ. ಭಾರತದಲ್ಲಿ ಕೆಲವು ಭಾಗಗಳಲ್ಲಿ ಏಪ್ರಿಲ್ 7 ಮಧ್ಯಾಹ್ನನದಿಂದ ಮುಂಗಡ ಬುಕ್ಕಿಂಗ್ ಪ್ರಾರಂಭ ಮಾಡಲಾಗಿತ್ತು. ಹಿಂದಿ ಭಾಗಗಳಲ್ಲಿ ಬುಕ್ಕಿಂಗ್ ಓಪನ್ ಆಗಿ 12ಗಂಟೆಗಳಲ್ಲಿ ಸುಮಾರು 1.7 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ. ಒಟ್ಟು 3.35 ಕೋಟಿ ರೂಪಾಯಿ ಗಳಿಸಿದೆ ಎಂದು ಆಂಗ್ಲ ವೆಬ್ ಪೋರ್ಟಲ್ ಪಿಂಕ್ ವಿಲ್ಲ ವರದಿ ಮಾಡಿದೆ.

ಮುಂಗಡ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದಾರೆ. ದೆಹಲಿಯಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ದೆಹಲಿಯಲ್ಲಿ 75 ಲಕ್ಷ ರೂ. ಗಳಿಕೆಯಾಗಿದೆ. ಇನ್ನು ಮುಂಬೈನಲ್ಲಿ 60 ಲಕ್ಷ ರೂಪಾಯಿ ಗಳಿಸಿದ್ರೆ ಉಳಿದಂತೆ ಪುಣೆ, ಸೂರತ್, ಅಹಮದಾಬಾದ್, ಕೋಲ್ಕತ್ತಾ, ಲಕ್ನೋ ಸೇರಿದಂತೆ ಅನೇಕ ಕಡೆ ಕಡಿಮೆ ಅವಧಿಯಲ್ಲಿ ಟಿಕೆಟ್ ಸೋಲ್ಡ್ ಓಟ್ ಆಗಿದ್ದು 10 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ.

KGF 2; ಗುರುವಾರದಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭ, ಎಲ್ಲೆಲ್ಲಿ? ಇಲ್ಲಿದೆ ವಿವರ

ಸದ್ಯ ಸೀಮಿತ ಪ್ರದೇಶಗಳಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 10ರಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದೆ. ಭಾನುವಾರದ ಮೇಲೆ ಎಲ್ಲಾ ಕಡೆ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದೆ. ಇನ್ನು ಅಧಿಕ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಲಿದೆ. ಅಂದಹಾಗೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮುಂಗಡ ಬುಕ್ಕಿಂಗ್ ನಲ್ಲಿ 5.08 ಕೋಟಿ ಗಳಿಸಿತ್ತು. ಕೆಜಿಎಫ್-2 ಈಗಾಗಲೇ 3.35 ಕೋಟಿ ರೂಪಾಯಿ ದಾಟಿದೆ. ಎಲ್ಲಾ ಕಡೆ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾದರೆ ಆರ್ ಆರ್ ಆರ್ ದಾಖಲೆಯನ್ನು ಧೂಳಿಪಟ ಮಾಡುವುದರಲ್ಲಿ ಅನುಮಾನವೇ ಇಲ್ಲ. ಹಿಂದಿ ಭಾಗಗಳಲ್ಲಿ ಸುಮಾರು 15ರಿಂದ 17 ಕೋಟಿ ರೂಪಾಯಿ ನಿರೀಕ್ಷೆ ಇಡಲಾಗಿದೆ.

KGF 2: ಬಿಡುಗಡೆ ಆಯ್ತು 'ಗಗನ ನೀ, ಭುವನ ನೀ..' ಹಾಡು; ಹೇಗಿದೆ ನೋಡಿ

ಸದ್ಯ ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ಮಾತ್ರ ಕೆಜಿಎಫ್-2 ಬುಕ್ಕಿಂಗ್ ಆರಂಭ ಮಾಡಲಾಗಿದೆ. ಬುಕ್ ಮೈ ಶೋ ಮತ್ತು ಪೇಟಿಎಂ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಶ್ವದಾದ್ಯಂತ ತೆರೆಗೆ ಬರುತ್ತಿರುವ ಕೆಜಿಎಫ್-2 ಸಿನಿಮಾ ನೋಡಲು ಕೋಟ್ಯಂತರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆ ಗಳಿಗೆ ತೆರೆ ಬೀಳಲಿದೆ.

click me!