ಶೆಹಜಾದಾ ಚಿತ್ರ ಬಿಡುಗಡೆಯ ದಿನವೇ ಪಠಾಣ್ ತಂಡವೊಂದು ತಂತ್ರ ರೂಪಿಸಿ ಸಾಮಾಜಿ ಜಾಲತಾಣದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಏನದು?
ಕಳೆದ ಜನ.25ರಂದು ಬಿಡುಗಡೆಯಾಗಿರುವ ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಚಿತ್ರ ಹಲವಾರು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಲೇ ಸಾಗಿದೆ. ಒಂದು ಸಾವಿರ ಕೋಟಿ ಕಲೆಕ್ಷನ್ ಸಮೀಪಕ್ಕೆ ಬಂದು ನಿಂತಿದೆ. ದೇಶದಾದ್ಯಂತ ಇದರ ಹವಾ ಜೋರಾಗಿದೆ. ಬೇಷರಂ ರಂಗ್ ಹಾಡಿನಿಂದ ಅನುಭವಿಸಿದ್ದ ಬೈಕಾಟ್ ಬಿಸಿಯ ಪ್ರತಿಭಟನೆಯೂ ಪ್ಲಸ್ ಪಾಯಿಂಟ್ ಆಗಿದ್ದು, ಇದರಿಂದ ಮತ್ತಷ್ಟು ಪ್ರಚಾರ ಹೆಚ್ಚಿಗೆ ಗಳಿಸಿಕೊಂಡು ದಿನದಿಂದ ದಿನಕ್ಕೆ ಬಾಲಿವುಡ್ನ ಹಲವು ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಲಿವುಡ್ಗೂ ಮರುಜೀವ ನೀಡಿದೆ. ಇಷ್ಟೆಲ್ಲಾ ಯಶಸ್ಸು ಬೆನ್ನಹಿಂದೆ ಇರುವಾಗ ಕಂತ್ರಿಬುದ್ಧಿಯೊಂದನ್ನು ಪಠಾಣ್ (Pathaan) ತೋರಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ! ಅದಕ್ಕೆ ಕಾರಣ, ಇಂದು ಅಂದರೆ ಫೆಬ್ರುವರಿ 17ರಂದು ಪಠಾಣ್ ಡೇ (Pathaan Day) ಎಂದು ಆಚರಿಸಲಾಗುತ್ತಿದೆ.
ಅಷ್ಟಕ್ಕೂ ಪಠಾಣ್ ಡೇ ಎಂದು ಆಚರಿಸುವುದರಲ್ಲಿ ತಪ್ಪೇನಿದೆ ಎಂದು ಕೇಳಬಹುದು. ತಪ್ಪು ಏನೂ ಇಲ್ಲ, ಈ ಡೇ ಆಚರಿಸುವ ಮೂಲಕ ಚಿತ್ರತಂಡ ಪಠಾಣ್ ಸಿನಿಮಾ ಟಿಕೆಟ್ಗೆ ಭರ್ಜರಿ ಆಫರ್ (Offer) ಅನ್ನೂ ಘೋಷಿಸಿದೆ. ಕೇವಲ 110 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡುತ್ತಿದೆ. ಇದರಲ್ಲಿ ಯಾರಿಗೆ ಏನು ಸಮಸ್ಯೆ ಎಂದು ಕೇಳಬಹುದು. ಅಲ್ಲಿಯೇ ಇರುವುದು ಚಿತ್ರತಂಡದ ಮಾಸ್ಟರ್ ಪ್ಲ್ಯಾನ್ (Master plan). ಅದೇನಪ್ಪಾ ಎಂದರೆ, ಇಂದು ಕಾರ್ತಿಕ್ ಆರ್ಯನ್ (Karthi Aryan) ಹಾಗೂ ಕೃತಿ ಸೆನನ್ ನಟನೆಯ ಶೆಹಜಾದಾ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಮೇಲೆ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಾಗಲೇ ಪಠಾಣ್ ಹೊಡೆತಕ್ಕೆ ಸಿಕ್ಕು ಹಲವಾರು ಚಿತ್ರಗಳು ಆದಾಯ ಕಾಣದೇ ಸುಸ್ತಾಗಿರುವ ನಡುವೆಯೇ ಅಲ್ಪ ಸ್ವಲ್ಪ ಉಸಿರು ಇಟ್ಟುಕೊಂಡಿರುವ ಶೆಹಜಾದಾ (Shehazada- Prince) ಬಿಡುಗಡೆಯಾಗಿದೆ. ಆದರೆ ಇಲ್ಲೊಂದು ಕುತಂತ್ರ ಬುದ್ಧಿಯನ್ನು ಪಠಾಣ್ ತಂಡ ತೋರಿದೆ ಎಂದು ಸಿನಿಪ್ರಿಯರು ಆಡಿಕೊಳ್ಳುತ್ತಿದ್ದಾರೆ.
ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
ಶೆಹಜಾದಾ ಚಿತ್ರದ ಬದಲು ಪಠಾಣ್ ಚಿತ್ರವನ್ನೇ ನೋಡಲಿ ಎಂಬ ಆಸೆಯಿಂದ ಇವತ್ತಿನ ದಿನವೇ ಕಡಿಮೆ ಟಿಕೆಟ್ ಬೆಲೆಯನ್ನು ಪಠಾಣ್ ತಂಡ ನಿಗದಿ ಮಾಡಿದೆ. ಈ ಮೂಲಕ ತನ್ನತ್ತ ಸೆಳೆಯುವ ಕೆಲಸಕ್ಕೆ ಕೈ ಹಾಕಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಚೀಪ್ ಗಿಮಿಕ್ ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಏಟಿಗೆ ಪ್ರತಿಏಟು ನೀಡಲು ಶೆಹಜಾದಾ ತಂಡವೂ ಅನಿವಾರ್ಯವಾಗಿ ಹೊಸ ಯೋಜನೆ ರೂಪಿಸಿದೆ. ಅದೇನೆಂದರೆ ಶೆಹಜಾದಾ ಚಿತ್ರತಂಡ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ (Ticket) ಅನ್ನು ಉಚಿತವಾಗಿ (Free) ನೀಡುತ್ತೇವೆ ಎಂದು ಘೋಷಿಸಿದೆ. ದೇಶದ ಯಾವುದೇ ಚಿತ್ರಮಂದಿರದಲ್ಲಿ ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸಿದರೂ ಈ ಆಫರ್ (Offer) ಇದೆ.
ಅಂದಹಾಗೆ, ಶೆಹಜಾದಾ ಚಿತ್ರ ತೆಲುಗಿನ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟನೆಯ ಅಲಾ ವೈಕುಂಟಪುರಮುಲೋ ರಿಮೇಕ್ ಆಗಿದೆ. ಸದ್ಯ ರಿಮೇಕ್ ಚಿತ್ರಗಳೆಲ್ಲಾ ಯಾವುದೇ ಯಶಸ್ಸು ಕಾಣುತ್ತಿಲ್ಲ. ಇದರ ನಡುವೆ ಪಠಾಣ್ ಚಿತ್ರದ ಯಶಸ್ಸಿನಿಂದ ಮತ್ತೊಂದು ಹಿನ್ನಡೆಯನ್ನು ಬೇರೆ ಚಿತ್ರ ಎದುರಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸುಮ್ಮನೆ ಚಿತ್ರವನ್ನು ಅದರ ಪಾಡಿಗೆ ಬಿಟ್ಟುಬಿಡುವ ಬದಲು ಪಠಾಣ್ ಚಿತ್ರತಂಡ ಇಂಥದ್ದೊಂದು ಗಿಮಿಕ್ ಮಾಡಿರುವ ಕಾರಣ, ಅನಿವಾರ್ಯವಾಗಿ ಶೆಹಜಾದಾ ತಂಡ ಉಚಿತ ಟಿಕೆಟ್ ಘೋಷಣೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ (social media) ಭಾರಿ ಚರ್ಚೆಗೆ ಗ್ರಾಸವಾಗಿದೆ. ದೊಡ್ಡವರಾಗುವುದು ನಟನೆಯಿಂದ ಮಾತ್ರವಲ್ಲ, ಚೀಪ್ ಗಿಮಿಕ್ಗಳನ್ನು ಬಿಟ್ಟು ಸರಿಮಾರ್ಗದಲ್ಲಿ ಹೋಗಬೇಕಿದೆ ಎಂದು ಹಲವರು ಕಮೆಂಟ್ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಏಕೆ ಬಿಡುತ್ತಿದ್ದೀರಿ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.
ಈ ಬಾಲಿವುಡ್ ನಟಿಯರ ಬೋಲ್ಡ್ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!