ಬಿ ಗ್ರೇಡ್ ನಟಿ ಎಂದು ಕುಟುಕಿದ್ದ ಸ್ವರಾ ಭಾಸ್ಕರ್‌ಗೆ ವಿಶ್ ಮಾಡಿದ ಕಂಗನಾ ರಣಾವತ್

Published : Feb 17, 2023, 03:37 PM IST
ಬಿ ಗ್ರೇಡ್ ನಟಿ ಎಂದು ಕುಟುಕಿದ್ದ ಸ್ವರಾ ಭಾಸ್ಕರ್‌ಗೆ ವಿಶ್ ಮಾಡಿದ ಕಂಗನಾ ರಣಾವತ್

ಸಾರಾಂಶ

ಫಹಾದ್ ಅಹ್ಮದ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಅವರಿಗೆ ನಟಿ ಕಂಗನಾ ರಣಾವತ್ ವಿಶ್ ಮಾಡಿದ್ದಾರೆ.  

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿಢೀರ್ ಮದುವೆಯಾಗುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ಶಾಕ್ ನೀಡಿದರು. ನಿನ್ನೆ (ಫೆಬ್ರವರಿ 17)  ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸ್ವರಾ ಜನವರಿ 6ರಂದು ದಾಂಪತ್ಯಕ್ಕೆ ಕಾಲಿಟ್ಟರು. ಸರಳವಾಗಿ ವಿವಾಹವಾಗಿರುವ ಸ್ವರಾ ಮತ್ತು ಫಹಾದ್ ಅಹ್ಮದ್ 1 ತಿಂಗಳ ಬಳಿಕ ಫೋಟೋಗಳನ್ನು ಶೇರ್ ಮಾಡಿ ಮದುವೆ ವಿಚಾರ ಬಹಿರಂಗ ಪಡಿಸಿದರು. 2023 ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸ್ವರಾ ಮತ್ತು ಫಹಾದ್ ನ್ಯಾಯಾಲಯದಲ್ಲಿ ವಿವಾಹ ನೋಂದಾಯಿಸಿದ್ದರು

ಸ್ವರಾಗೆ ಅನೇಕರು ವಿಶ್ ಮಾಡುತ್ತಿದ್ದಾರೆ. ಸಿನಿಮಾ ಗಣ್ಯರು, ಅಭಿಮಾನಿಗಳು ಮತ್ತು ಆಪ್ತರು ಶುಭಹಾರೈಸುತ್ತಿದ್ದಾರೆ. ವಿಶೇಷ ಎಂದರೆ ನಟಿ ಕಂಗನಾ ಕೂಡ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮುಂದಿನ ತಿಂಗಳು ಸಂಪ್ರದಾಯಿಕವಾಗಿ ಮದುವೆಯಾಗಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸ್ವರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸ್ವರಾ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ವಿಶ್ ಮಾಡಿದ್ದಾರೆ. ನೀವಿಬ್ಬರೂ ಸಂತೋಷವಾಗಿ ಕಾಣುತ್ತೀರಿ ಅದು ದೇವರ ಅನುಗ್ರಹ. ಮದುವೆ ಹೃದಯದಲ್ಲಿ ಸಂಭವಿಸುತ್ತದೆ. ಉಳಿದವು ಔಪಚಾರಿಕತೆಗಳು' ಎಂದು ಹೇಳಿದ್ದಾರೆ. 

ಕಂಗನಾ ಟ್ವೀಟ್ ಮಾಡುತ್ತಿದ್ದ ಹಾಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಕಂಗನಾ ಅವರ ಜೀವನದಲ್ಲೇ ಮೊದಲ ಪಾಸಿಟಿವ್ ಟ್ವೀಟ್ ಎಂದು ಹೇಳಿದ್ದಾರೆ. 

ಹೊಗಳಿದ್ರೂ ಬಿಡಲ್ಲ; 'ನನ್ನ ಬಳಿ 4 ರಾಷ್ಟ್ರ ಪ್ರಶಸ್ತಿಗಳಿವೆ' ಎಂದು ಆಮೀರ್ ಖಾನ್‌ ಕಾಲೆಳೆದ ಕಂಗನಾ

ಬಿ ಗ್ರೇಡ್ ನಟಿ ಎಂದು ಜರಿದಿದ್ದ ಕಂಗನಾ 

ಕಂಗನಾ ಮತ್ತು ಸ್ವರಾ ಸದಾ ಕಿತ್ತಾಡುತಲೇ ಇರುತ್ತಾರೆ. ಬಾಲಿವುಡ್ ನಲ್ಲಿ ಇಬ್ಬರೂ ಹಾವು ಮುಂಗುಸಿ ಹಾಗೆ. ಇಬ್ಬರೂ 2011ರಲ್ಲಿ ತನು ವೆಡ್ಸ್ ಮನು ಮತ್ತು   2015 ರಲ್ಲಿ ತನು ವೆಡ್ಸ್ ಮನು ರಿಟರ್ನ್ಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2020ರಲ್ಲಿ ಕಂಗನಾ ರಣಾವತ್, ಸ್ವರಾ ಮತ್ತು ತಾಪ್ಸಿ ಪನ್ನು ಅವರನ್ನು ಬಿ ಗ್ರೇಡ್ ನಟಿ ಎಂದು ಜರಿದಿದ್ದರು. ಇಬ್ಬರೂ ಟ್ವಿಟ್ಟರ್ ನಲ್ಲೇ ಕಿತ್ತಾಡಿದ್ದರು. ಚಿತ್ರರಂಗದಲ್ಲಿ 'ಹೊರಗಿನವರು' ಆಗಿರುವ ಸ್ವರಾ ಮತ್ತು ತಾಪ್ಸಿ, ನಿರ್ಮಾಪಕ ಕರಣ್ ಜೋಹರ್ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.  ಇಬ್ಬರ ಕಿತ್ತಾಟ ತಾರಕಕ್ಕೇರಿತ್ತು. ಇದೀಗ ವಿಶ್ ಮಾಡಿರುವುದು ಅಚ್ಚರಿ ಮೂಡಿಸಿದೆ. 

ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ; ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

ಸ್ವರಾ ಭಾಸ್ಕರ್ ಟ್ರೋಲ್ 

ಸ್ವರಾ ಪತಿಯನ್ನು ಕಳೆದ ಕೆಲವು ದಿನಗಳ ಹಿಂದೆ ಅಣ್ಣ ಎಂದು ಕರೆದಿದ್ದರು.  ಅಣ್ಣ ಎಂದು  ಕರೆದಿದ್ದ  ಹಳೆಯ ಟ್ವೀಟ್ ವೈರಲ್ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ' ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದರು. ಈ ಹಳೆಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!