ಅಲ್ಲು ಅರ್ಜುನ್ 'ಪುಷ್ಪ-2' ಆಫರ್ ರಿಜೆಕ್ಟ್ ವದಂತಿ; ಸಮಂತಾ ಟೀಂ ಸ್ಪಷ್ಟನೆ

Published : Feb 17, 2023, 04:51 PM IST
ಅಲ್ಲು ಅರ್ಜುನ್ 'ಪುಷ್ಪ-2' ಆಫರ್ ರಿಜೆಕ್ಟ್ ವದಂತಿ; ಸಮಂತಾ ಟೀಂ ಸ್ಪಷ್ಟನೆ

ಸಾರಾಂಶ

ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾದ ಆಫರ್ ಸಮಂತಾ ರಿಜೆಕ್ಟ್ ಮಾಡಿದ್ದಾರೆ ಎನ್ನುವ ವದಂತಿ ಬಗ್ಗೆ ಅವರ ತಂಡ ಸ್ಪಷ್ಟನೆ ನೀಡಿದೆ. 

ಟಾಲಿವುಡ್ ಸ್ಟಾರ್ ಸಮಂತಾ, ಬ್ಲಾಕ್ ಬಸ್ಟರ್ ಪುಷ್ಪ ಸಿನಿಮಾದಲ್ಲಿ ಹೂಂ ಅಂತೀಯಾ ಮಾವ..ಎಂದು ಕುಣಿದು ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಈ ಹಾಡು ಸಮಂತಾ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಹಾಡು ಸದ್ದು ಮಾಡಿತ್ತು. ಸಮಂತಾ ಡಾನ್ಸ್‌ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಪುಷ್ಪ ಬಳಿಕ ಪುಷ್ಪ-2ನಲ್ಲೂ ಹೆಜ್ಜೆ ಹಾಕಲು ಸಮಂತಾಗೆ ಆಫರ್ ಮಾಡಲಾಗಿತ್ತು ಆದರೆ ಸ್ಯಾಮ್ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೆಯಲ್ಲ ಸಮಂತಾ ಪುಷ್ಪ-2 ರಿಜೆಕ್ಟ್ ಮಾಡಿದ್ದಲ್ಲದೇ ತೆಲುಗು ಸಿನಿಮಾರಂಗವನ್ನು ಕಡೆಗಣಿಸುತ್ತಿದ್ದಾರೆ ಎನ್ನಲಾಗಿದೆ. ತೆಲುಗು ಸಿನಿಮಾರಂಗದಿಂದ ದೂರ ಆಗಿ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತು ತೆಲುಗು ಸಿನಿಮಾರಂಗದಲ್ಲಿ ವೈರಲ್ ಆಗಿದೆ. 

ಪುಷ್ಪ-2 ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಸಮಂತಾ ತಂಡ ಪ್ರತಿಕ್ರಿಯೆ ನೀಡಿದೆ. ಆಂಗ್ಲ ಮಾಧ್ಯಕ್ಕೆ ನೀಡಿದ ಹೇಳಿಕೆಯಲ್ಲಿ 'ಇದು ಕೇವಲ ವದಂತಿ ಅಷ್ಟೆ, ಸಮಂತಾಗೆ ಯಾವುದೇ ಆಫರ್ ಮಾಡಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ಹರಿದಾಡುತ್ತಿದ್ದ ಊಹಪೋಹಗಳಿಗೆ ತೆರೆ ಎಳಿದ್ದಾರೆ. ಸಮಂತಾ ಬಗ್ಗೆ ಹೀಗೆಲ್ಲ ಸುದ್ದಿ ಹರಿದಾಡುತ್ತಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದು ಸಮಂತಾ ಹೆಸರನ್ನು ಹಾಳು ಮಾಡಲು ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸುತ್ತಿದ್ದಾರೆ. 

ತೆಲುಗು ಸಿನಿರಂಗ ಕಡೆಗಣಿಸುತ್ತಿದ್ದಾರಾ ಸಮಂತಾ: ಪುಷ್ಪ-2 ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಸ್ಯಾಮ್?

ಈ ಮೊದಲು ಸಹ ಸಮಂತಾ ತೆಲುಗಿನ ಮತ್ತೊಂದು ಸಿನಿಮಾ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ,ಅವರಿಗೂ ಡೇಟ್ ನೀಡದೆ ಸತಾಯಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದು ಕೂಡ ಸುಳ್ಳು ಸುದ್ದಿ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಧಾನವಾಗಿ ಸಿನಿಮಾಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. 

ಸಮಂತಾ ಸದ್ಯ ಹಿಂದಿ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಸಿಟಾಡೆಲ್ ಹಿಂದಿ ವರ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸೀರಿಸ್ ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ನಾಯಕನಾಗಿ ನಟಿಸುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ ಸೀರಿಸ್ ಬಳಿಕ ಸಮಂತಾ ನಟಿಸುತ್ತಿರುವ 2ನೇ ಸೀರಿಸ್ ಇದಾಗಿದೆ.

600 ಮೆಟ್ಟಿಲು ಹತ್ತಿ, ಕರ್ಪೂರ ಹಚ್ಚಿ ಪಳನಿ ಮುರುಗನ್ ದೇವಸ್ಥಾನಕ್ಕೆ ಹರಕೆ ತೀರಿಸಿದ ಸಮಂತಾ

 ಪಳನಿ ಮುರುಗನ್ ದೇವಸ್ಥಾನಕ್ಕೆ ಹರಕೆ ತೀರಿಸಿದ ಸಮಂತಾ

ನಟಿ ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಇತ್ತೀಚಿಗೆ ಸಮಂತಾ ಆಧ್ಯಾತ್ಮಿಕ ಕಡೆ ಹೆಚ್ಚು ವಾಲುತ್ತಿದ್ದಾರೆ. ಇದೀಗ ಸಮಂತಾ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ  ತೀರಿಸಿದ್ದಾರೆ. ದೇವಸ್ಥಾನದ ಸುಮಾರು 600 ಮೆಟ್ಟಿಗಳನ್ನು ಸಮಂತಾ ಹತ್ತಿ ಕರ್ಪೂರ ಹಚ್ಚಿ  ದೇವರ ದರ್ಶನ ಪಡೆದರು. ಸಮಂತಾ ಜೊತೆಗೆ ಸ್ನೇಹಿತರು ಮತ್ತು ನಿರ್ದೇಶಕರು ಸೇರಿದಂತೆ ಸಿನಿಮಾತಂಡ ಕೂಡ ಜೊತೆಯಲ್ಲಿತ್ತು. ದೇವರ ದರ್ಶನ ಪಡೆದು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು. ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal
3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ