ಜೂನ್‌ನಲ್ಲಿ ಯಶ್ ಕೆಜಿಎಫ್2 ರಿ-ರಿಲೀಸ್, ಟ್ರೇಲರ್‌ಗೆ ಹುಚ್ಚೆದ್ದು ಕುಣಿದ ಜಪಾನ್ ಸಿನಿ ವೀಕ್ಷಕರು

Published : Mar 19, 2025, 05:06 PM ISTUpdated : Mar 19, 2025, 05:14 PM IST
ಜೂನ್‌ನಲ್ಲಿ ಯಶ್ ಕೆಜಿಎಫ್2 ರಿ-ರಿಲೀಸ್, ಟ್ರೇಲರ್‌ಗೆ ಹುಚ್ಚೆದ್ದು ಕುಣಿದ ಜಪಾನ್ ಸಿನಿ ವೀಕ್ಷಕರು

ಸಾರಾಂಶ

ಇದೀಗ ಹಲವು ಸಿನಿಮಾಗಳು ಮತ್ತೊಮ್ಮೆ ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದೆ. ಚಿತ್ರಮಂದಿರದಲ್ಲೇ ಸಣ್ಣ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಜಪಾನ್ ಸಿನಿ ವೀಕ್ಷಿಕರು ಹುಚ್ಚೆದ್ದು ಕುಣಿದಿದ್ದಾರೆ.  

ಟೋಕಿಯೋ(ಮಾ.19) ಯಶ್ ಅಭಿನಯದ ಕೆಜಿಎಫ್ ಚಿತ್ರ ಮಾಡಿದ ದಾಖಲೆ ಭಾರತೀಯ ಸಿನಿಮಾದಲ್ಲೇ ಅತ್ಯಂತ ಪ್ರಮುಖವಾಗಿದೆ. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿದೆ. ಇದೀಗ ಈ ಪೈಕಿ ಕೆಜಿಎಫ್ 2 ಚಿತ್ರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೌದು ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ರಿ-ರಿಲೀಸ್ ಟ್ರೆಂಡ್ ಆಗುತ್ತಿದೆ. ಹಲವು ಚಿತ್ರಗಳು 2ನೇ ಬಾರಿಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಸಿನಿ ರಸಿಕರನ್ನು ಸೆಳೆಯುತ್ತಿದೆ. ಇದರ ನಡುವೆ ಕೆಜಿಎಫ್ 2 ಕೂಡ ರಿ-ರಿಲೀಸ್ ಆಗುತ್ತಿದೆ. ಇದು ಹಲವು ದಾಖಲೆ ಬರೆದ ಯಶ್ ಚಿತ್ರ. ವಿಶೇಷ ಅಂದರೆ ಈ ಕೆಜಿಎಫ್ 2 ಚಿತ್ರ  ರಿ ರಿಲೀಸ್ ಆಗುತ್ತಿರುವುದು ಜಪಾನ್ ಚಿತ್ರಮಂದಿರದಲ್ಲಿ. 

ಜೂನ್ ತಿಂಗಳಲ್ಲಿ ಕೆಜಿಎಫ್ 2 ಚಿತ್ರ ಜಪಾನ್ ಬಹುತೇಕ ಚಿತ್ರಮಂದಿರದಲ್ಲಿ ರಿ-ರಿಲೀಸ್ ಆಗುತ್ತಿದೆ. ಇದೀಗ ಜಪಾನ್ ಚಿತ್ರಮಂದಿರದಲ್ಲಿ ಜಪಾನ್ ಸಿನಿಮಾಗಳು, ಹಾಲಿವುಡ್ ಸಿನಿಮಾಗಳ ನಡುವೆ ಕೆಜಿಎಫ್ 2 ರಿ-ರಿಲೀಸ್ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದ್ದಂತೆ ಎಂದು ಟ್ರೇಲರ್ ಪ್ರದರ್ಶನ ಮಾಡುತ್ತಿದ್ದಾರೆ. ಕೆಜಿಎಫ್ 2 ಚಿತ್ರದ ಟ್ರೇಲರ್ ಪ್ರದರ್ಶನಗೊಳ್ಳುತ್ತಿದ್ದಂತೆ ಜಾಪನ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಚಪ್ಪಾಳೆ, ಶಿಳ್ಳೆಗಳು ಕೇಳಿಬರುತ್ತಿದೆ.

ಶಿವಣ್ಣನ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ; ಇಲ್ಲಿದೆ ಶಿವ ರಾಜ್‌ಕುಮಾರ್ ಹೆಲ್ತ್ ಅಪ್ಡೇಟ್ಸ್!

ಜಪಾನ್ ಚಿತ್ರಮಂದಿರದಲ್ಲಿ ಕೆಜಿಎಫ್ 2 ಚಿತ್ರದ ಟ್ರೇಲರ್ ಪ್ರದರ್ಶನದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಜಪಾನ್ ಜನರು ಯಶ್ ಕೆಜಿಎಫ್ 2 ಮತ್ತೊಮ್ಮೆ ತೆರೆ ಮೇಲೆ ನೋಡಲು, ಅಬ್ಬರ ಫೈಟ್, ಡೈಲಾಗ್, ಸ್ವಾಗ್, ಸ್ಟೈಲ್ ನೋಡಲು ಕಾತರಗೊಂಡಿದ್ದಾರೆ. ಜಪಾನ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಅತೀ ದೊಡ್ಡ ಮಾರುಕಟ್ಟೆಯೂ ಇದೇ. ಈ ಪೈಕಿ ಯಶ್ ಜಪಾನ್ ಸಿನಿ ಪ್ರೇಕ್ಷಕರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. 

 

 

ಕೆಜಿಎಫ್ 2 ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಭಾರತ ಮಾತ್ರವಲ್ಲ, ಹಲವು ದೇಶಗಳಲ್ಲಿ ಭಾರಿ ಮೆಚ್ಚುಗೆ ಪಡೆದ ಸಿನಿಮ ಆಗಿದೆ. 100 ಕೋಟಿ ರೂಪಾಯಿ ಬಂಡವಾಳದ ಈ ಸಿನಿಮಾ ಬರೋಬ್ಬರಿ 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ನಿರ್ಮಾಣ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿತ್ತು.

ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕಾರಣ ಟಾಕ್ಸಿಕ್ ಹಲವು ದಾಖಲೆ ಪುಡಿ ಪುಡಿ ಮಾಡುವ ಸಾಧ್ಯತೆ ಇದೆ.

Photos: ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ಮಗನ ಅದ್ದೂರಿ ನಾಮಕರಣದ ಝಲಕ್‌ ಇದು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?