ಯಾಮಿ ಗೌತಮ್ ಹುಟ್ಟುಹಬ್ಬಕ್ಕೆ ಪತಿಯ ರೊಮ್ಯಾಂಟಿಕ್ ಪೋಸ್ಟ್! ‘ಮತ್ತೆ ಮದುವೆಯಾಗೋಣ' ಎಂದ ನಟಿ, ಮುದ್ದಾದ ರಿಪ್ಲೈ ವೈರಲ್

Published : Nov 28, 2026, 04:21 PM IST
Yami Gautam

ಸಾರಾಂಶ

Yami Gautam Birthday: ಬಾಲಿವುಡ್ ನಟಿ ಯಾಮಿ ಗೌತಮ್ ಅವರ 38ನೇ ಹುಟ್ಟುಹಬ್ಬದಂದು ಪತಿ, ಖ್ಯಾತ ನಿರ್ದೇಶಕ ಆದಿತ್ಯ ಧರ್ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಯಾಗಿ ಕಳೆದ ರಜಾದಿನಗಳ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಯಾಮಿ ಕೊಟ್ಟ ರಿಪ್ಲೈ ಇದೀಗ ವೈರಲ್ ಆಗುತ್ತಿದೆ.

ಯಾಮಿ ಗೌತಮ್ ಹುಟ್ಟುಹಬ್ಬಕ್ಕೆ ಆದಿತ್ಯ ಧರ್ ರೊಮ್ಯಾಂಟಿಕ್ ಪೋಸ್ಟ್

ಚಿತ್ರ ನಿರ್ದೇಶಕ ಆದಿತ್ಯ ಧರ್ (Aditya Dhar) ತಮ್ಮ ಪತ್ನಿ, ನಟಿ ಯಾಮಿ ಗೌತಮ್ (Yami Gautam) ಅವರಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 'ವಿಕ್ಕಿ ಡೋನರ್' ಮತ್ತು 'ಹಕ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿರುವ ಯಾಮಿ ಗೌತಮ್ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನವನ್ನು ಪತಿ ಆದಿತ್ಯ ಧರ್ ತಮ್ಮ ಪ್ರೀತಿಯ ಸಂದೇಶದ ಮೂಲಕ ಮತ್ತಷ್ಟು ಸುಂದರವಾಗಿಸಿದ್ದಾರೆ.

ಯಾಮಿಗಾಗಿ ಆದಿತ್ಯ ಧರ್ ಪ್ರೀತಿಯ ಪೋಸ್ಟ್

ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆದಿತ್ಯ ಧರ್, ಇಬ್ಬರೂ ಜೊತೆಯಾಗಿ ಕಳೆದ ರಜಾದಿನಗಳ ಕೆಲವು ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾಮಿಗಾಗಿ ಪ್ರೀತಿಯಿಂದ ತುಂಬಿದ ಸಂದೇಶವನ್ನೂ ಬರೆದಿದ್ದಾರೆ. ಪೋಸ್ಟ್‌ನಲ್ಲಿ ಆದಿತ್ಯ, "ಹುಟ್ಟುಹಬ್ಬದ ಶುಭಾಶಯಗಳು ಯಾಮಿ. ನೀನು ಅತ್ಯಂತ ಸುಂದರ ಮಹಿಳೆ. ನಿನ್ನ ನಗುವಿನಲ್ಲಿ ಏನೋ ಮಾಂತ್ರಿಕ ಶಕ್ತಿಯಿದೆ. ಅದು ಕೇವಲ ಕೋಣೆಯನ್ನು ಮಾತ್ರವಲ್ಲ, ನನ್ನ ಇಡೀ ಜಗತ್ತನ್ನೇ ಬೆಳಗಿಸುತ್ತದೆ" ಎಂದ ಆದಿತ್ಯ ಧರ್, "ನೀನು ನನ್ನ ಮನೆ, ನನ್ನ ಅತಿದೊಡ್ಡ ಶಕ್ತಿ ಮತ್ತು ನನ್ನ ದೊಡ್ಡ ಬೆಂಬಲ. ನಾನು ಇಂದು ಏನಾಗಿದ್ದೇನೋ ಅದಕ್ಕೆ ಪ್ರೇರಣೆಯಾದ ವ್ಯಕ್ತಿ ನೀನು. ನಮ್ಮ ಕುಟುಂಬದ ಮೇಲೆ ನೀನು ತೋರುವ ಪ್ರೀತಿ ಮತ್ತು ನೀನು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ರೀತಿ ಕಂಡು ಪ್ರತಿದಿನವೂ ನನಗೆ ಅಚ್ಚರಿಯಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.

"ನೀನು ಇದೆಲ್ಲವನ್ನೂ ಹೇಗೆ ನಿಭಾಯಿಸುತ್ತೀಯೋ, ಜೊತೆಗೆ ನನ್ನನ್ನೂ ಹೇಗೆ ಸಹಿಸಿಕೊಳ್ಳುತ್ತೀಯೋ ಎಂಬುದೇ ನನಗೆ ಅರ್ಥವಾಗುವುದಿಲ್ಲ" ಎಂದು ಪತ್ನಿಯ ಬಗ್ಗೆ ತಮಾಷೆಯಾಗಿಯೂ ಪ್ರೀತಿ ತುಂಬಿದ ಮಾತುಗಳನ್ನೂ ಹಂಚಿಕೊಂಡಿದ್ದಾರೆ. ಯಾಮಿ ಗೌತಮ್ ತಮ್ಮ ಜೀವನಕ್ಕೆ ತರುವ ಸಂತೋಷ, ಪ್ರೀತಿ ಮತ್ತು ಆಶೀರ್ವಾದಗಳು ಸಾವಿರ ಪಟ್ಟು ಹೆಚ್ಚಾಗಿ ಅವರಿಗೆ ಮರಳಿ ಸಿಗಲಿ ಎಂದು ಆದಿತ್ಯ ಧರ್ ಹಾರೈಸಿದ್ದಾರೆ.

"ನೀನು ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡ. ಸದಾ ಹೀಗೆ ಹೊಳೆಯುತ್ತಿರು. ನೀನು ಎಷ್ಟು ಅದ್ಭುತ ವ್ಯಕ್ತಿ ಎಂಬುದನ್ನು ಎಂದಿಗೂ ಮರೆಯಬೇಡ. ಜೀವನದುದ್ದಕ್ಕೂ ನಿನ್ನ ಕೈ ಹಿಡಿದು ನಡೆಯುತ್ತೇನೆ, ನಿನಗೆ ಪ್ರೋತ್ಸಾಹ ನೀಡುತ್ತೇನೆ ಮತ್ತು ಮತ್ತೆ ಮತ್ತೆ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ" ಎಂದು ಭಾವುಕ ಸಂದೇಶ ಬರೆದಿದ್ದಾರೆ. ಇದರ ಜೊತೆಗೆ ಆದಿತ್ಯ ತಮ್ಮನ್ನು ತಾವು 'ಯಾಮಿ ಪಾಗ್ಲು' ಎಂದು ಕರೆದುಕೊಂಡಿದ್ದಾರೆ. ಪತ್ನಿಯ ಮೇಲಿನ ಅವರ ಪ್ರೀತಿ ಮತ್ತು ತಮಾಷೆ ಅಭಿಮಾನಿಗಳಿಗೆ ಇಷ್ಟವಾಗಿದೆ.

ಆದಿತ್ಯಗೆ ಮತ್ತೆ ಮದುವೆಯಾಗುವಂತೆ ಕೇಳಿದ ಯಾಮಿ ಗೌತಮ್!

ಪತಿ ಆದಿತ್ಯ ಧರ್ ಅವರ ಪ್ರೀತಿಯ ಪೋಸ್ಟ್‌ಗೆ ಯಾಮಿ ಗೌತಮ್ ಕೂಡ ಅಷ್ಟೇ ಮುದ್ದಾಗಿ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್‌ನಲ್ಲಿ, "ದಯವಿಟ್ಟು ನನ್ನನ್ನು ಮತ್ತೆ ಮದುವೆಯಾಗುತ್ತೀರಾ? ಎಲ್ಲದಕ್ಕೂ ತುಂಬಾ ಧನ್ಯವಾದಗಳು, ಮೈ ಲವ್" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮನ್ನು ತಾವು 'ಆದಿತ್ಯ ಪಾಗ್ಲು' ಎಂದು ಕರೆದುಕೊಂಡಿದ್ದಾರೆ. ಪತಿ-ಪತ್ನಿಯ ಈ ಮುದ್ದಾದ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ಈ ಜೋಡಿಯ ಪ್ರೀತಿ ಮತ್ತು ಬಾಂಧವ್ಯವನ್ನು ಮೆಚ್ಚಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್​ ಖಾನ್ ಗುಣಗಾನ ಮಾಡಿದ ಆರ್ಯನ್ ಖಾನ್ ಗರ್ಲ್​ಫ್ರೆಂಡ್; ಓಹೋ 'ಭಾವಿ ಮಾವನ ಪಕ್ಷ' ಎಂದ ನೆಟ್ಟಿಗರು!
ತಲೈವರ್ ರಜನಿಕಾಂತ್ ಅವರ ಈ ಆಸೆ ಈಡೇರಲಿದೆಯೇ? ಅಭಿಮಾನಿಗಳಲ್ಲಿ ಶುರುವಾಯ್ತು ಕುತೂಹಲ