
ಅದು ಎಷ್ಟೇ ಫೇಮಸ್ ಆಗಿರಲಿ, ಎಷ್ಟೇ ಹಣ ಇರ್ಲಿ, ಹೆಂಡ್ತಿ ಹತ್ತಿರ ಬೈಸಿಕೊಳ್ಳೊದು ಮಾತ್ರ ಗಂಡಂಗೆ ತಪ್ಪಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಹೆಂಡ್ತಿ ಮುಂದೆ ತಲೆ ಬಾಗ್ಲೇಬೇಕು. ಅದಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಹೊರತಾಗಿಲ್ಲ. ಕಾಫಿ ವಿತ್ ಕರಣ್ ಶೋನಲ್ಲಿ ನಡೆದ ಲೈವ್ ಕಾಲ್ ನಲ್ಲಿ ಟ್ವಿಂಕಲ್ ಖನ್ನಾ, ಪತಿ ಅಕ್ಷಯ್ ಕುಮಾರ್ ಅವ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ ಸೀಸನ್ 9ರ ಇತ್ತೀಚಿನ ಸಂಚಿಕೆಯಲ್ಲಿ ಅಕ್ಷಯ್ ಕುಮಾರ್ ಮತ್ತು ನಟ ರವಿ ಕಿಶನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಸಾಕಷ್ಟು ತಮಾಷೆ ಮಾಡಿದ್ದಾರೆ. ಆದರೆ ಕಾರ್ಯಕ್ರಮದ ಒಂದು ಹಂತದಲ್ಲಿ ಅಕ್ಷಯ್ ಕುಮಾರ್ ತಮ್ಮ ಪತ್ನಿ ಹಾಗೂ ನಟಿ ಟ್ವಿಂಕಲ್ ಖನ್ನಾಗೆ ಫೋನ್ ಮಾಡಿದ್ದಾರೆ. ಈ ವೇಳೆ ನಡೆದ ಸಂಭಾಷಣೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಲ್ ಎ ಸ್ಟಾರ್ ಎಂಬ ವಿಶೇಷ ವಿಭಾಗವಿದೆ. ಈ ವಿಭಾಗದಲ್ಲಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ತಮಗೆ ಇಷ್ಟವಾದ ಸೆಲೆಬ್ರಿಟಿಗೆ ಕರೆ ಮಾಡಬಹುದು. ಅದರಂತೆ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾಗೆ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿದ ಟ್ವಿಂಕಲ್ ಖನ್ನಾ ಪತಿಯ ಧ್ವನಿ ಕೇಳುತ್ತಿದ್ದಂತೆ ಖುಷಿಯಾಗುವ ಬದಲು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೆಳಗ್ಗೆಯೇ ಕರೆ ಮಾಡಿ ನಿದ್ದೆ ಹಾಳು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಫೋನ್ನಲ್ಲಿ ಮಾತನಾಡಿದ ಟ್ವಿಂಕಲ್, ನಿನ್ನೆ ರಾತ್ರಿ ನನಗೆ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಈಗ ಬೆಳಗ್ಗೆ ಬೇಗ ಎಬ್ಬಿಸಿ ನನ್ನ ನಿದ್ದೆಯನ್ನೂ ಹಾಳು ಮಾಡಿದ್ದೀಯ. ಬೆಳಗ್ಗೆ 6 ಗಂಟೆಗೆ ಯಾರು ಭಜನೆ ಹಾಕುತ್ತಾರೆ? ನೀನೂ ಅಷ್ಟೊಂದು ಜೋರಾಗಿ ಹಾಡುಗಳನ್ನು ಹಾಕುತ್ತೀಯ. ನೀನೇನು ಅನೂಪ್ ಜಲೋಟಾ ಎಂದುಕೊಂಡಿದ್ದೀಯಾ ಎಂದು ಪತಿಯನ್ನು ಪ್ರಶ್ನಿಸಿದ್ದಾರೆ.
ಅಷ್ಟಕ್ಕೇ ನಿಲ್ಲದ ಟ್ವಿಂಕಲ್, ಬಾತ್ರೂಮ್ ಬಾಗಿಲನ್ನು ಸರಿಯಾಗಿ ಮುಚ್ಚುವಂತೆ ಎಷ್ಟು ಬಾರಿ ಹೇಳಿದರೂ ಅಕ್ಷಯ್ ತಮ್ಮ ಮಾತು ಕೇಳುತ್ತಿಲ್ಲ ಎಂದು ದೂರಿದ್ದಾರೆ. ಪತ್ನಿಯ ಈ ಮಾತುಗಳನ್ನು ಕೇಳಿದ ಅಕ್ಷಯ್ ಕುಮಾರ್ಗೆ ಏನು ಹೇಳಬೇಕೆಂದು ತಿಳಿಯದೆ ನಕ್ಕಿದ್ದಾರೆ. ಕೂಲ್ ಅಂತ ಸಮಾಧಾನ ಮಾಡಿದ್ದಾರೆ.
ಸದ್ಯ ಈ ಫೋನ್ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಕ್ಷಯ್ ಕುಮಾರ್ ಅವರನ್ನು ಪತ್ನಿ ಟ್ವಿಂಕಲ್ ಖನ್ನಾ ತರಾಟೆಗೆ ತೆಗೆದುಕೊಂಡಿರುವುದನ್ನು ಕಂಡು ಅಭಿಮಾನಿಗಳು ಕೂಡ ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಸದಾ ಇತರರ ಕಾಲೆಳೆಯುವ ಅಕ್ಷಯ್ಗೆ ಈ ಬಾರಿ ಮನೆಯಲ್ಲೇ ಕ್ಲಾಸ್ ಸಿಕ್ಕಿದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.