
ಐದಾರು ವರ್ಷಗಳ ಸೋಲುಂಡು ಬೆಳ್ಳಿ ಪರದೆಯಿಂದ ದೂರವೇ ಸರಿದಿದ್ದ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಈಗ ಎರಡು ಒಂದರ ಮೇಲೊಂದು ಬ್ಲಾಕ್ಬಸ್ಟರ್ ಚಿತ್ರ ಕೊಟ್ಟು ಇನ್ನೊಂದಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಹಿಟ್ ನಿರೀಕ್ಷೆಯಲ್ಲಿದ್ದಾರೆ. ಹಲವಾರು ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿದ ಪಠಾಣ್ ನಂತರ, ಪಠಾಣ್ ದಾಖಲೆಯನ್ನೂ ಹಿಮ್ಮೆಟ್ಟಿದ ಜವಾನ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ ಶಾರುಖ್ ಶಾನ್. ಇದೀಗ ಮೂರನೇ ಸಿನಿಮಾಕ್ಕೆ ರೆಡಿ ಆಗಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಸಿನಿಮಾದ ಕೆಲಸ ಕೂಡ ಮುಗಿಯುತ್ತಾ ಬಂದಿದ್ದು ಜವಾನ್ಗಿಂತಲೂ ಇದು ಒಂದು ಹೆಜ್ಜೆ ಮುಂದಕ್ಕೆ ಹೋಗಲಿದೆ ಎಂದೇ ಹೇಳಲಾಗುತ್ತಿದೆ. ಇದರ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಅಂದಹಾಗೆ, ಶಾರುಖ್ ಖಾನ್ ಹ್ಯಾಟ್ರಿಕ್ ಹೀರೋ ಆಗಹೊರಟಿರುವ ಸಿನಿಮಾದ ಹೆಸರು ಡಂಗಿ ಎನ್ನಲಾಗಿದೆ. ಇದು ಸೋಷಿಯಲ್ ಕಾಮಿಡಿ ಚಿತ್ರವಂತೆ. ಸಕತ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರದ ಬಳಿಕ ಕಾಮಿಡಿ ಚಿತ್ರಕ್ಕೆ ಶಾರುಖ್ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದು ಕೂಡ 100 ಕೋಟಿ ಸಿನಿಮಾ ಎನ್ನಲಾಗುತ್ತಿದೆ.
ಇದರ ನಡುವೆಯೇ ಶಾರುಖ್ ಅವರ ಮೈ ಪರಿಮಳದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಶಾರುಖ್ ಅವರು ಸದಾ ತಮ್ಮ ಸಹೊದ್ಯೋಗಿಗಳನ್ನು ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ ಎನ್ನುವ ಮಾತಿದೆ. ಶೂಟಿಂಗ್ ಸಮಯದಲ್ಲಿಯೂ ಸಂಯಮದಿಂದ ವರ್ತಿಸುತ್ತಾರೆ. ತಮ್ಮ ಹಿರಿ-ಕಿರಿ ಸಹೊದ್ಯೋಗಿಗಳೊಂದು ಉಚಿತವಾಗಿ ವರ್ತಿಸುತ್ತಾರೆ ಎಂದೇ ಹೇಳಲಾಗುತ್ತದೆ. ಇದೇ ಸಂದರ್ಭದಲ್ಲಿ ಶಾರುಖ್ ಅವರ ಮೈಯಿಂದ ಹೊರಹೊಮ್ಮುವ ಪರಿಮಳಕ್ಕೆ ಎಲ್ಲರೂ ವಿಶೇಷವಾಗಿ ಮಹಿಳೆಯರು ಮನಸೋಲುತ್ತಾರಂತೆ! ಹೌದು. ಈ ಕುರಿತು ಖುದ್ದು ಶಾರುಖ್ ಕೆಲ ದಿನಗಳ ಹಿಂದೆ ನೀಡಿರುವ ಸಂದರ್ಶನ ವೈರಲ್ ಆಗುತ್ತಿದೆ. ತಮ್ಮ ಮೈ ಸುಗಂಧಕ್ಕೆ ಮಹಿಳೆಯರು ಮನಸೋಲುತ್ತಾರೆ ಎಂದು ಸಂದರ್ಶನದಲ್ಲಿ ಶಾರುಖ್ ಹೇಳಿದ್ದಾರೆ. ಇದಕ್ಕೆ ಸರಿಯಾಗಿ ಕೆಲ ನಟಿಯರಿಗೆ ಶಾರುಖ್ ಅವರ ಬಗ್ಗೆ ಕೇಳಿದಾಗ ಕೂಡ ಅವರು ಶಾರುಖ್ ಮೈಯಿಂದ ಹೊರಹೊಮ್ಮುವ ಸುಗಂಧಕ್ಕೆ ಮನಸೋಲುವುದಾಗಿ ಹೇಳಿದ್ದಾರೆ.
ರಣವೀರ್ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!
ಅಷ್ಟಕ್ಕೂ ಶಾರುಖ್ ಅವರು ತಮ್ಮ ಮೈಗೆ ಯಾವ ಸುಗಂಧ ಹಚ್ಚುತ್ತಾರೆ ಎಂದು ಇಲ್ಲಿ ಹೇಳಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟ ಈ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟಿದ್ದರು. GQ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಶಾರುಖ್ ಖಾನ್ ತಮ್ಮ ನೆಚ್ಚಿನ ಸುಗಂಧ ದ್ರವ್ಯಗಳನ್ನು ಬಹಿರಂಗಪಡಿಸಿದ್ದರು. ನಾನು ಸುಗಂಧ ದ್ರವ್ಯ ಅದರಲ್ಲಿಯೂ ವಿಶೇಷವಾದುದ್ದನ್ನು ಇಷ್ಟಪಡುತ್ತೇನೆ ಎಂದಿದ್ದ ನಟ, ತಾವು ಉಪಯೋಗಿಸುವುದು ಅಂತಿಂಥ ಸುಗಂಧ ದ್ರವ್ಯವಲ್ಲ, ಬದಲಿಗೆ ನಾನು ಎರಡು ಸುಗಂಧಗಳನ್ನು ಮಿಶ್ರಣ ಮಾಡುತ್ತೇನೆ ಎಂದಿದ್ದರು. ಒಂದರ ಹೆಸರು ಡನ್‌ಹಿಲ್ ಎಂದು ಹೇಳಿದ್ದ ಅವರು, ಇದು ಲಂಡನ್ ಅಂಗಡಿಯಲ್ಲಿ ಮಾತ್ರ ಲಭ್ಯವಿದೆ ಎಂದಿದ್ದರು ಹಾಗೂ ಮತ್ತೊಂದು ಡಿಪ್ಟಿ ಕ್ಯೂ ಒನ್ ಎಂದು ಹೇಳಿದ್ದರು. ಇವೆರಡನ್ನೂ ಮಿಕ್ಸ್ ಮಾಡಿ ಶರೀರಕ್ಕೆ ಲೇಪಿಸಿಕೊಳ್ಳುವುದಾಗಿ ಶಾರುಖ್ ನುಡಿದಿದ್ದು, ಇದು ಸಿಗ್ನೇಚರ್ ಪರಿಮಳ ನೀಡುವುದಾಗಿ ಹೇಳಿದ್ದರು.
ಇನ್ನು ಶಾರುಖ್ ಅವರ ಹ್ಯಾಟ್ರಿಕ್ ಚಿತ್ರ ಡಂಗಿ ಕುರಿತು ಹೇಳುವುದಾದರೆ, ಸಿನಿಮಾದಲ್ಲಿ ಶಾರುಖ್ ಖಾನ್‌ಗ ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ದಿಯಾ ಮಿರ್ಜಾ ಕೂಡ ಇದ್ದಾರೆ. ಹಿರಾಣಿ ಸಿನಿಮಾಗಳಲ್ಲಿ ಖಾಯಂ ಆಗಿರೋ ನಟ ಬೊಮನ್ ಇರಾನಿ ಇಲ್ಲೂ ಇದ್ದಾರೆ. ಇನ್ನುಳಿದಂತೆ ಪ್ರೀತಂ ಸಂಗಿತ ಕೊಟ್ಟಿದ್ದಾರೆ. ಸ್ವತಃ ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಒಟ್ಟಾರೆ ಡಂಕಿ ಮತ್ತೊಂದು ಹಿಟ್ ಸಿನಿಮಾ ಆಗೋ ಟಾಕ್ ಈಗಲೇ ಶುರು ಆಗಿದೆ.
ಜವಾನ್ನಲ್ಲಿ ನಯನತಾರಾಗೆ ಮೋಸ? ಟ್ವೀಟ್ನಲ್ಲಿ ಬೆಣ್ಣೆ ಸವರಿ ನಟಿಯನ್ನು ಸಮಾಧಾನಪಡಿಸಿದ ಶಾರುಖ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.