ಮಾಜಿ ವಿಶ್ವ ಸುಂದರಿಗೆ ಹೀಗಾಗೋದಾ? ಗಣೇಶನ ದರ್ಶನಕ್ಕಾಗಿ ನೂಕಾಡಿ ಕೊನೆಗೂ ವಾಪಸಾದ ನಟಿ!

By Suvarna News  |  First Published Sep 26, 2023, 10:02 PM IST

ಮಾಜಿ ವಿಶ್ವ ಸುಂದರಿಗೆ ಮಾನುಷಿ ಚಿಲ್ಲರ್​ ಅವರು ಮುಂಬೈನ ಪ್ರತಿಷ್ಠಿತ ಲಾಲ್​ಬಗೀಚಾರಾಜಾ ಗಣೇಶನ ದರ್ಶನಕ್ಕೆ ಹೋಗಿ ದರ್ಶನ ಸಿಗದೇ ಪೇಚಿಗೆ ಸಿಲುಕಿದ್ದಾರೆ. 
 


2017ರ ಮಿಸ್‌ ವರ್ಡ್‌ ಕಿರೀಟ ಗೆದ್ದ ಮಾನುಷಿ ಚಿಲ್ಲರ್ ಈಗ ಸಿನಿ ತಾರೆ ಕೂಡ ಹೌದು. ಐತಿಹಾಸಿಕ ಸಿನಿಮಾ ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರದ ಮೂಲಕ ಬಿ-ಟೌನ್‌ಗೆ ಕಾಲಿಟ್ಟಿದ್ದ ನಟಿ,  ಸದ್ಯ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. 20 ವರ್ಷದಲ್ಲಿ   ಮಿಸ್ ವರ್ಲ್ಡ್‌ ಕಿರೀಟ ಪಡೆದುಕೊಂಡ ಕ್ಷಣದಿಂದ ನನ್ನ ಜೀವನ ಬದಲಾಗಿದೆ ಎಂದಿದ್ದರು ನಟಿ.  ವಿದ್ಯಾಭ್ಯಾಸ ಮುಗಿಸಿ ಡಾಕ್ಟರ್ ಅಥವಾ ಲಾಯರ್ ಆಗಬೇಕು ಎಂದುಕೊಂಡಿದ್ದ ಮಾನುಷಿ ನಂತರ ವಿಶ್ವ ಸುಂದರಿಯಾದದ್ದೇ ರೋಚಕ.  ಭಾರತದಿಂದ ಸ್ಪರ್ಧಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಬಹುತೇಕರು ಸಿನಿಮಾದಲ್ಲಿ ಮಿಂಚಿದ್ದಾರೆ. ಅದರಂತೆಯೇ ಮಾನುಷಿಗೂ ಬಾಲಿವುಡ್​ನಲ್ಲಿ ಆಫರ್​ ಬಂದಿತ್ತು. ಅದೃಷ್ಟ ಅವರ ಕೈಹಿಡಿದಿರಲಿಲ್ಲ. ಮೊದಲ ಸಿನಿಮಾದಲ್ಲಿಯೇ ಪ್ಲಾಫ್‌ ಆದರು. ಈಗ 2ನೇ ಸಿನಿಮಾ 'ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಬಾಲಿವುಡ್‌ ಮಂದಿ ಕೈ ಹಿಡಿಯುವರೇ ಎಂಬುದು ಚಿಂತನೆಯಾಗಿದೆ. ಇನ್ನು ಈಗಾಗಲೇ ಬಾಲಿವುಡ್‌ನಿಂದ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿರುವ ಮಾನುಷಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇದರ ನಡುವೆಯೇ ಮುಂಬೈನ ಪ್ರತಿಷ್ಠಿತ ಲಾಲ್​ಬಗೀಚಾರಾಜಾ ಗಣೇಶನ ದರ್ಶನಕ್ಕೆ ನಟಿ ಹೋಗಿ ನಿರಾಸೆಯಿಂದ ಮರಳಿದ್ದಾರೆ. ಸಾಮಾನ್ಯವಾಗಿ ಯಾವುದೇ ನಟ-ನಟಿ ಎಲ್ಲಿಗೆ ಹೋಗುವುದಿದ್ದರೂ ಭದ್ರತಾ ಸಿಬ್ಬಂದಿ ಇದ್ದೇ ಇರುತ್ತಾರೆ. ಆದರೆ ಮಾನುಷಿ ಯಾರ ನೆರವೂ ಇಲ್ಲದೇ ಹೋಗಿದ್ದಾರೆ. ಜನರು ಕೂಡ ಅವರನ್ನು ಗುರುತಿಸಿಯೇ ಇಲ್ಲವೆನ್ನುವಂತೆ ತಳ್ಳಾಡಿದ್ದಾರೆ. ಇದರ ನಡುವೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ನಟಿ ಸೆರೆಯಾಗಿದ್ದಾರೆ. ಅವರನ್ನೇ ಫೋಕಸ್​ ಮಾಡಿ ವಿಡಿಯೋ ತೆಗೆಯಲಾಗಿದ್ದು, ಅದೀಗ ವೈರಲ್​ ಆಗಿದೆ. ನೂಕು ನುಗ್ಗಾಟದ ನಡುವೆ ನಟಿಗೆ  ಗಣೇಶನ ದರ್ಶನ ಆಗಲೇ ಇಲ್ಲ. 

Tap to resize

Latest Videos

ಕಾವೇರಿ ನೀರಿಗೂ, ನಿವೇದಿತಾ ಡ್ಯಾನ್ಸ್​ಗೂ ಏನಪ್ಪಾ ಸಂಬಂಧ? ಚೆಡ್ಡಿ ತೋರಿಸಿದ್ದು ಸಾಕು ಅಂತ ಬಯ್ಯೋದಾ?

ಅಂದಹಾಗೆ ಮಾನುಷಿ ಅವರ ಸಿನಿ ಪಯಣ ಹಾಗೂ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ತಮ್ಮ ಕುಟುಂಬದ ಆಸೆಯ ಕುರಿತು ಅವರೇ ಒಮ್ಮೆ ಮಾಹಿತಿ ನೀಡಿದ್ದರು. 'ನಾನು ಡಾಕ್ಟರ್ ಆಗಬೇಕು ಎನ್ನುವುದು ನನ್ನ ಕುಟುಂಬದ ಆಸೆ. ಕಾಲೇಜ್‌ ದಿನಗಳನ್ನು ನಾನು ಎಂಜಾಯ್ ಮಾಡಿರುವೆ. ಆದರೆ ಮಿಸ್ ವರ್ಲ್ಡ್‌ ಕಿರೀಟ ಪಡೆದುಕೊಂಡ ನಂತರ ಹೇಗೆಲ್ಲಾ ಬದಲಾವಣೆಗಳು ಆಗುತ್ತದೆ ಎಂಬ ಕಲ್ಪನೆ ಮಾಡಿಕೊಳ್ಳುವುದು ಹೇಗೆ? ಆರಂಭದಲ್ಲಿ ಎರಡು ಮನಸ್ಸು ಇತ್ತು, ಒಂದು ನಾನು ವಿದ್ಯಾಭ್ಯಾಸ ಸೆಟಲ್ ಆಗುವ ಜೀವನ ಮತ್ತೊಂದು ಏನೇಲ್ಲಾ ಅಗುತ್ತೆ ಹೇಗೆಲ್ಲಾ ಬದಲಾಣೆ ಒಪ್ಪಿಕೊಳ್ಳಬೇಕು ಎನ್ನುವ ಕನ್ಫ್ಯೂಸ್‌ ಲೈಫ್. ಪ್ರತಿಯೊಂದು ವಿಚಾರಗಳನ್ನು ಕುಟುಂಬದ ಜೊತೆ ಹಂಚಿಕೊಳ್ಳುತ್ತಿದ್ದೆ. ನನ್ನ ಮಾರ್ಕ್ಸ್‌ ಶೀಟ್‌ ಇಂಟರ್‌ನೆಟ್‌ನಲ್ಲಿ ಇರುತ್ತಿತ್ತು. ಹೀಗಾಗಿ ಬಾಲ್ಯದಿಂದ ನನಗೆ ಪ್ರೈವಸಿ ಇರಲಿಲ್ಲ. ವಿದ್ಯಾಭ್ಯಾಸಕ್ಕೆ ಪ್ರಮುಖ್ಯತೆ ನೀಡಿದ್ದೆ, ಮುಂಬೈನಲ್ಲಿ ಓದಬೇಕು ಇಲ್ಲವಾದರೆ ವಿದೇಶ ಪ್ರಯಾಣ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದೆ. ಆದರೆ ಆಗಿದ್ದೇ ಬೇರೆ ಎಂದಿದ್ದಾರೆ.
 
ಇನ್ನು, ಸಿನಿ ಜರ್ನಿ ಕುರಿತು ಹೇಳುವುದಾದರೆ,  ನಟಿ ಮಾನುಷಿ ಚಿಲ್ಲರ್ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ಬಳಿಕ ಮಾನುಷಿ ಮತ್ತೆ ತೆರೆಮೇಲೆ ಬಂದಿರಲಿಲ್ಲ. ಈಗ ಬಾಲಿವುಡ್‌ನ ಧೂಮ್ 3ಖ್ಯಾತಿಯ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ ಕೌಟುಂಬಿಕ ಮತ್ತು ಹಾಸ್ಯಭರಿತ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಚಿತ್ರದಲ್ಲಿ ವಿಕ್ಕಿ ಕೌಶಲ್‌ಗೆ ಮಾನುಷಿ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 22ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ರಾಜ್ ಫಿಲ್ಮ್ಸ್ ಸೆಪ್ಟೆಂಬರ್ 15 ರಂದು ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ 'ಸಾಹಿಬಾ' ಹೊಸ ಹಾಡನ್ನು ಅನಾವರಣಗೊಳಿಸಿತ್ತು. 

Viral Video: ಕಾವಾಲಯ್ಯ ಹಾಡಿಗೆ ಸೊಂಟ ಬಳುಕಿಸಿದ ಗೋರಿಲ್ಲಾ- ನಟಿಯರಿಗಿಂತ್ಲೂ ಇದೇ ಸೂಪರ್‌ ಎಂದ ನೆಟ್ಟಿಗರು!

 

click me!