ಹೀರಾಮಂಡಿ ಖ್ಯಾತಿಯ ನಟಿ ಸಂಜೀದಾ ಶೇಕ್ ಇದೀಗ ನೈಟ್ ಕ್ಲಬ್‌ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನೈಟ್ ಕ್ಲಬ್ ಪಾರ್ಟಿಯಲ್ಲಿ ಹಲವರಿದ್ದರು. ಆದರೆ ಒಂದು ಕ್ಷಣದಲ್ಲಿ ನನ್ನ ಸ್ತನಕ್ಕೆ ಕೈಹಾಕಿದ್ದರು. ತಪ್ಪು ಯಾರು ಮಾಡಿದರೂ ತಪ್ಪೆ ಎಂದಿದ್ದಾರೆ. ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು?
ಮುಂಬೈ(ಜೂನ್ 02) ಹೀರಾಮಂಡಿ ಖ್ಯಾತಿಯ ನಟಿ ಸಂಜೀದಾ ಶೇಕ್ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ನೈಟ್ ಕ್ಲಬ್‌ನಲ್ಲಿ ನಡೆದ ಘಟನೆಯನ್ನು ಸಂದರ್ಶನ ಒಂದರಲ್ಲಿ ವಿವರಿಸಿದ್ದಾರೆ. ನೈಟ್ ಕ್ಲಬ್ ಪಾರ್ಟಿಯಲ್ಲಿರುವಾಗ ನನ್ನ ಸ್ತನವನ್ನು ಯಾರೋ ಹಿಡಿದಂತಾಯಿತು. ಅರೇ ಇದೇನು ಎಂದು ಆಕ್ರೋಶದಿಂದ ಪ್ರತಿಕ್ರಿಯೆ ನೀಡುವಷ್ಟರಲ್ಲೇ ಅವರು ಅಲ್ಲಿಂದ ತೆರಳಿದ್ದರು ಎಂದು ನಟಿ ಸಂಜೀದಾ ಖಾನ್ ಹೇಳಿದ್ದರೆ. ಆದರೆ ನನ್ನ ಸ್ತನಕ್ಕೆ ಕೈಹಾಕಿದ್ದು ಪುರುಷ ಅಲ್ಲ, ಓರ್ವ ಯುವತಿ ಎಂದು ಸಂಜೀದಾ ಹೇಳಿದ್ದಾರೆ.
ನಾನು ಇನ್ನೂ ಆ ಘಟನೆ ಮರೆತಿಲ್ಲ. ನೈಟ್ ಕ್ಲಬ್‌ಗೆ ತೆರಳಿದ್ದೆ. ಎಲ್ಲರೂ ಪಾರ್ಟಿಯಲ್ಲಿ ತೊಡಗಿದ್ದರು. ಹಲವರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ನಾನೂ ಕೂಡ ಈ ಪಾರ್ಟಿಯ ಖುಷಿಯಲ್ಲಿದ್ದೆ. ಆದರೆ ಒರ್ವ ಯುವತಿ ನನ್ನ ಮುಂದಿನಿಂದ ತೆರಳಿದ್ದಾಳೆ. ಈ ವೇಳೆ ಯುವತಿ ನನ್ನ ಸ್ತನಕ್ಕೆ ಕೈಹಾಕಿದ್ದರು ಎಂದು ಸಂಜೀದಾ ಹೇಳಿದ್ದಾರೆ.
ಖಾಸಗಿ ವಿಡಿಯೋ ಲೀಕ್ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಗುನ್ಗುನ್ ಗುಪ್ತಾ ಹೊಸ ವಿಡಿಯೋ!
ಯುವತಿಯಾಗಿದ್ದ ಕಾರಣ ನಾನು ಹೆಚ್ಚಿನ ಗಮನ ನೀಡಲು ಹೋಗಿರಲಿಲ್ಲ. ಆದರೆ ಆಕೆ ನನ್ನ ಸ್ತನಕ್ಕೆ ಕೈಹಾಕುತ್ತಾರೆ ಅನ್ನೋ ಕಲ್ಪನೆಯೂ ಇರಲಿಲ್ಲ. ಕೆಲ ಪಾರ್ಟಿಗಳಲ್ಲಿ ಯುವಕರು ಗುಂಪು ಎಲ್ಲೆಂದರಲ್ಲಿ ಟಚ್ ಮಾಡುವುದು, ಅಸಭ್ಯವಾಗಿ ವರ್ತಿಸುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಇದು ಯುವತಿ. ಈಗ ಯುವತಿಯರೂ ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಂಜೀದಾ ಶೇಕ್ ಹೇಳಿದ್ದಾರೆ.
ಖಾಸಗಿ ಭಾಗ ಟಚ್ ಮಾಡುವುದು ತಪ್ಪು. ಅದು ಯಾರೇ ಆಗಲಿ. ನಮ್ಮ ಖಾಸಗೀತನಕ್ಕೂ ಧಕ್ಕೆಯಾಗಬಾರದು. ಆದರೆ ನೈಟ್ ಪಾರ್ಟಿಯಲ್ಲಿ ಈಕೆಯ ನಡೆ ನನಗೆ ಅಚ್ಚರಿ ತಂದಿತ್ತು. ತಪ್ಪು ಯಾರು ಮಾಡಿದರೂ ತಪ್ಪೇ ಎಂದು ಸಂಜೀದಾ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ವಿಚ್ಚೇದನ ಕುರಿತು ಮಾತನಾಡಿದ್ದಾರೆ. ಸದ್ಯ ನನಗೆ ನನ್ನ ಬದುಕಿನ ಕುರಿತು ಸಂತೋಷವಿದೆ. ಡಿವೋರ್ಸ್ ಬಳಿಕ ನನ್ನ ಬದುಕು ಚೆನ್ನಾಗಿದೆ. ಕೆಲ ಕೆಟ್ಟ ಘಟನೆಗಳು ನಡೆದಿದೆ. ಆದರೆ ಸದ್ಯ ಎಲ್ಲವೂ ಸುಖಾಂತ್ಯವಾಗಿದೆ. ಹಲವು ಬಾರಿ ಸಂಬಂಧದ ಬಂಧನದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಇದು ನಿನ್ನಿಂದ ಸಾಧ್ಯವಿಲ್ಲ, ದೂರವಿರು, ನಿನಗೆ ಬೇಡ..ಹೀಗೆ ಹಲವು ಮಾತುಗಳು ಸಾಧನೆಗೆ, ಕನಸುಗಳಿಗೆ ಅಡ್ಡಿಯಾಗಲಿದೆ ಎಂದು ಸಂಜೀದಾ ಶೇಕ್ ಹೇಳಿದ್ದಾರೆ. ಹೀರಾಮಂಡಿಯಲ್ಲಿ ಅದ್ಭುತ ನಟನೆ ಮೂಲಕ ಸಂಜೀದಾ ಶೇಕ್ ಇದೀಗ ಭಾರಿ ಜನಪ್ರಿಯತೆ ಪಡೆದಿದ್ದಾರೆ.
ಸಮಾಜದ ಒಳಿತಿಗೆ ಲೈಂಗಿಕ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದ ನಟ ಶೇಖರ್ ಸುಮನ್