
ಬೀಜಿಂಗ್(ಜು.09): ಲವ್ ಅಂದ್ರೆ ಸುಮ್ನೇನಾ ? ಪ್ರೀತಿ ಎಷ್ಟು ಆಳವೋ ಅದರ ದ್ವೇಷವೂ ಅಷ್ಟೇ.. ಕೈಕೊಟ್ಟು ಹೋದ ಹುಡುಗನ ಮೇಲಿನ ಕೋಪ ಆಕೆಗೆ ತಂದು ಕೊಟ್ಟ ಐಡಿಯಾ ನೋಡಿ..
ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನ ಕಾರನ್ನು ಬಾಡಿಗೆಗೆ ತೆಗೆದುಕೊಂಡು 49 ಸಲ ರೆಡ್ ಸಿಗ್ನಲ್‌ನಲ್ಲಿ ಓಡಿಸಿ ಅವನ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ. ಮಹಿಳೆ ಮತ್ತು ಆಕೆಗೆ ಸಹಾಯ ಮಾಡಿದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದ ಶಾಕ್ಸಿಂಗ್‌ನಿಂದ ಈ ಘಟನೆ ವರದಿಯಾಗಿದೆ.
ಕೇವಲ ಎರಡು ದಿನಗಳಲ್ಲಿ 50 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ನಂತರ ಸ್ಥಳೀಯ ಪೊಲೀಸರು ಕಾರನ್ನು ಗುರುತಿಸಿದ್ದಾರೆ. ಕಾರು ರೆಡ್ ಸಿಗ್ನಲ್ ದಾಟಿ 49 ಬಾರಿ ಹೋಗಿತ್ತು.
ಬಾಯ್‌ಫ್ರೆಂಡ್‌ಗೆ ತಾನೇ ಗಿಫ್ಟ್ ಮಾಡಿದ 23 ಲಕ್ಷದ ಬೈಕ್‌ಗೆ ಬೆಂಕಿ ಇಟ್ಟ ಯುವತಿ
ಸಂಚಾರ ನಿಯಮಗಳ ಉಲ್ಲಂಘನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಚೆನ್ ಎಂಬ ಉಪನಾಮ ಹೊಂದಿರುವ ವ್ಯಕ್ತಿಯು ಕಾರಿನ ಮಾಲೀಕ ಕಿಯಾನ್ ಅವರಿಂದ ಬಾಡಿಗೆಗೆ ಕಾರನ್ನು ತೆಗೆದುಕೊಂಡಿದ್ದಾನೆ ಎಂದು ಅವರು ಕಂಡುಕೊಂಡರು. ಪರಿಚಯಸ್ಥರಾಗಿ ಮಾತ್ರ ತಾನು ಕಾರನ್ನು ಬಾಡಿಗೆಗೆ ಪಡೆದಿದ್ದೇನೆ ಎಂದು ಚೆನ್ ಪೊಲೀಸರಿಗೆ ತಿಳಿಸಿದ್ದಾನೆ.
ನಂತರ ಪೊಲೀಸರು ವಿಚಾರಿಸಿದರು, ಅವರು ತಮ್ಮ ವರ್ತನೆಯ ಹಿಂದಿನ ಕಾರಣವನ್ನು ಒಪ್ಪಿಕೊಂಡರು. ಅವರು ಲೌ ಎಂಬ ಯುವತಿಯನ್ನು ಬಹಳ ಸಮಯದಿಂದ ಫಾಲೋ ಮಾಡುತ್ತಿದ್ದರು.ಈ ರೀತಿ ಸೇಡು ತೀರಿಸಿಕೊಳ್ಳಲು ಸಹಾಯ ಮಾಡಿದರೆ ಮಾತ್ರ ಅವನೊಂದಿಗೆ ಹೊರಗೆ ಹೋಗಲು ಲೌ ಒಪ್ಪಿಕೊಂಡಿದ್ದಳು. ಕೈಕೊಟ್ಟವನಿಗೆ ರಿವೆಂಜ್ ಕೊಡೋ ಐಡಿಯಾ ಎಲ್ಲಿ ಸಿಕ್ತೋ...!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.