ಪಠಾಣ್ ಭರ್ಜರಿ ಯಶಸ್ಸಿನ ಬಳಿಕ ಜವಾನ್ನತ್ತ ಚಿತ್ತ ನೆಟ್ಟಿದ್ದಾರೆ ಶಾರುಖ್ ಫ್ಯಾನ್ಸ್. ಇದರ ನಡುವೆಯೇ ಮಹಿಳೆಯೊಬ್ಬರು ತಮ್ಮ ಮಕ್ಕಳ ಹೆಸರಿನ ಬಗ್ಗೆ ಶಾರುಖ್ಗೆ ಪ್ರಶ್ನಿಸಿದ್ದು, ಅದೀಗ ಸಕತ್ ಸೌಂಡ್ ಮಾಡುತ್ತಿದೆ.
‘ಪಠಾಣ್’ ಚಿತ್ರದ ಮೂಲಕ ಶಾರುಖ್ ಖಾನ್ (Shah Rukh Khan) ಅದ್ದೂರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ. ಭಾರತ ಮಾತ್ರವಲ್ಲದೇ, ಹಲವಾರು ದೇಶಗಳಲ್ಲಿಯೂ ಈ ಚಿತ್ರ ಇದಾಗಲೇ ಅಬ್ಬರಿಸಿದೆ. ಕಳೆದ ಏಪ್ರಿಲ್ 6ರ ಅಂಕಿಅಂಶದ ಪ್ರಕಾರ, ಪಠಾಣ್ ಚಲನಚಿತ್ರವು ಭಾರತದಲ್ಲಿ 82 ಮಿಲಿಯನ್ ಡಾಲರ್ ಅರ್ಥಾತ್ ಸುಮಾರು 654 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, ಸಾಗರೋತ್ತರ ದೇಶಗಳಲ್ಲಿ 50 ಮಿಲಿಯನ್ ಡಾಲರ್ ಅರ್ಥಾತ್ ಸುಮಾರು 396 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ ಒಟ್ಟು 130 ಮಿಲಿಯನ್ ಡಾಲರ್ ಅರ್ಥಾತ್ 1,050 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರ ಖುಷಿಯಲ್ಲಿಯೇ ಜವಾನ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಶಾರುಖ್ ಖಾನ್ ಅಭಿನಯದ ‘ಜವಾನ್’ (Jawan) ಚಿತ್ರದ ಪ್ರಿವ್ಯೂ ಇಂದು ಬಿಡುಗಡೆಯಾಗಿದ್ದು, ಇದಾಗಲೇ ಲಕ್ಷಾಂತರ ವ್ಯೂಸ್ ಕಂಡಿದೆ. ಶಾರುಖ್ ಅಭಿಮಾನಿಗಳು ಪ್ರಿವ್ಯೂ ನೋಡಿ ಸಿಕ್ಕಾಪಟ್ಟೆ ಖುಷಿಪಡುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಅಟ್ಲಿ ನಿರ್ದೇಶನದ ಜವಾನ್ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುವುದಾಗಿ ಇದಾಗಲೇ ಘೋಷಿಸಲಾಗಿದೆ. ಈ ಸಿನಿಮಾ ಕೂಡ ಪಠಾಣ್ನಷ್ಟೇ ಯಶಸ್ಸು ಕಾಣುವ ಭರವಸೆಯಲ್ಲಿದ್ದಾರೆ ಕಿಂಗ್ ಖಾನ್ ಫ್ಯಾನ್ಸ್.
ರಿಲೀಸ್‌ಗೂ ಮುನ್ನ 36 ಕೋಟಿ ಗಳಿಸಿದ ಶಾರುಖ್ ಖಾನ್ ನಟನೆಯ ಜವಾನ್!
ಇದರ ಬೆನ್ನಲ್ಲೇ ಇದೀಗ ಕುತೂಹಲದ ಚರ್ಚೆಯೊಂದು ಶಾರುಖ್ ಮತ್ತು ಅವರ ಅಭಿಮಾನಿಯ ನಡುವೆ ನಡೆದಿದೆ. ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್ ಕೆಲ ತಿಂಗಳಿನಿಂದ ತಮ್ಮ ಟ್ವಿಟರ್ ಖಾತೆಯಲ್ಲಿ ಫ್ಯಾನ್ಸ್ ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳ ಪೈಕಿ ಹಲವಕ್ಕೆ ಉತ್ತರ ಕೊಡುತ್ತಿದ್ದಾರೆ. #AskSRK ಎಂಬ ಪ್ರಶ್ನೋತ್ತರ ಸೆಷನ್ ಇದಾಗಿದೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿರುವ ಸಂಭ್ರಮದಲ್ಲಿ ಈ ಒಂದು ಸೆಷನ್ ಶುರು ಮಾಡಿದ್ದು, ಇದಾಗಲೇ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವುಗಳ ಪೈಕಿ ಹಲವು ಹಾಸ್ಯಭರಿತ ಉತ್ತರಗಳಿಂದ ಕೂಡಿದ್ದರೆ, ಕೆಲವು ಮಾತ್ರ ಸ್ವಲ್ಪ ಗರಂ ಆಗಿದೆ ಉತ್ತರಿಸುತ್ತಿದ್ದಾರೆ.
ಇದೀಗ ಪಠಾಣ್ ಯಶಸ್ಸು ಹಾಗೂ ಜವಾನ್ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿರುವ ಮಹಿಳೆಯೊಬ್ಬರು ಶಾರುಖ್ಗೆ ಪ್ರಶ್ನೆಯೊಂದನ್ನು ಕೇಳಿದ್ದು, ಅದೀಗ ಸಕತ್ ಸುದ್ದಿಯಾಗುತ್ತಿದೆ. ಅದೇನೆಂದರೆ, ಸದ್ಯದಲ್ಲೇ ಹುಟ್ಟಲಿರುವ ತಮ್ಮ ಅವಳಿ ಗಂಡು ಮಕ್ಕಳಿಗೆ ‘ಪಠಾಣ್ ಮತ್ತು ‘ಜವಾನ್’ ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ. ಇದಕ್ಕೆ ನೀವೇನೆನ್ನುತ್ತೀರಾ ಎಂದು ಮಹಿಳೆಯೊಬರಬು ಕೇಳಿದ್ದಾರೆ. ಅದಕ್ಕೆ ನಟ ಶಾರುಖ್, ‘ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಟ್ಟರೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ಶಾರುಖ್ ತಮಾಷೆಯ ಉತ್ತರ ಕೊಡಬಹುದಿತ್ತು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಆದರೆ ಉತ್ತರ ಸಿಂಪಲ್ ಆಗಿದ್ದರೂ ಮಹಿಳೆ ಕೇಳಿದ ತಮಾಷೆಯ ಪ್ರಶ್ನೆ ಮಾತ್ರ ಸಕತ್ ಸೌಂಡ್ ಮಾಡುತ್ತಿದೆ.
ಅಬ್ಬಬ್ಬಾ! ಪಠಾಣ್ ಚಿತ್ರದಲ್ಲಿಯೂ ಇಷ್ಟೊಂದು ತಪ್ಪಾ? ಐದು ಮೇಜರ್ ಮಿಸ್ಟೆಕ್ಸ್ ಇವು