ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

By Shruthi Krishna  |  First Published Nov 30, 2022, 11:19 AM IST

ಇಸ್ರೇಲಿ ಸಿನಿಮಾ ನಿರ್ದೇಶಕ ನದಾಲ್ ಹೇಳಿಕೆಗೆ ತಿರುಗೇಟು ನೀಡಿರುವ ನಿರ್ದೇಶಕ ಅಗ್ನಿಹೋತ್ರಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಹೇಳಿದ್ದೆಲ್ಲಾ ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡುವುದನ್ನೇ ಬಿಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ. 


'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ, ತಪ್ಪು ಪ್ರಚಾರ ಉದ್ದೇಶ ಹೊಂದಿದ ಸಿನಿಮಾ ಎಂದು  IFFI 2022(International Film Festival of India) ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಹೇಳಿಕೆ ಭಾರಿ ಚರ್ಚೆಕೆ ಗ್ರಾಸವಾಗಿದೆ. ನದಾಲ್ ಹೇಳಿಕೆಗೆ ಪರ-ವಿರೋಧ ಮಾತುಗಳು ಕೇಳಿ ಬರುತ್ತಿದೆ. ಇದೀಗ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿಡಿಯೋ ಮೂಲಕ ಪತಿರುಗೇಟು ನೀಡಿದ್ದಾರೆ. ಸಿನಿಮಾದಲ್ಲಿ ತಾನು ಹೇಳಿರುವುದು ಸುಳ್ಳು ಎಂದು ಸಾಬೀತು ಪಡಿಸಿದ್ರೆ ಖಂಡಿತ ಸಿನಿಮಾ ಮಾಡುವುದನ್ನೇ ಬಿಡುತ್ತೇನೆ ಎಂದು ಹೇಳಿದ್ದಾರೆ. 

ವಿವೇಕ ಅಗ್ನಿಹೋತ್ರಿ ಇಸ್ರೇಲಿ ನಿರ್ದೇಶಕ ನದಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸೇರ್ಮಾಡಿದ್ದಾರೆ. 'ಇದಲ್ಲ ನನಗೆ ಹೊಸದೇನಲ್ಲ. ಏಕೆಂದರೆ ಇಂತಹ ವಿಷಯಗಳನ್ನು ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು ಮತ್ತು ದೇಶವನ್ನು ವಿಭಜಿಸಲು ಬಯಸುವವರು ಇದನ್ನೆಲ್ಲಾ ಹೆಚ್ಚಾಗಿ ಹೇಳುತ್ತಾರೆ. ನನಗೆ ಆಘಾತಕಾರಿ ವಿಷಯವೆಂದರೆ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಬಯಸುವವರ ನಿರೂಪಣೆ ಭಾರತದ ಕುರಿತು ಸರ್ಕಾರ ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಧ್ವನಿಸಲಾಯಿತು. ಭಾರತದಲ್ಲಿ ವಾಸಿಸುವ ಕೆಲವರು ಅದನ್ನು ದೇಶದ ವಿರುದ್ಧ ಬಳಸಿದರು. ಯಾರು ಅವರೆಲ್ಲ' ಎಂದು ವಿವೇಕ್ ಕೇಳಿದರು. 

Tap to resize

Latest Videos

ನಾಲ್ಕು ವರ್ಷಗಳ ಹಿಂದೆ ಈ ವಿಷಯದ ಕುರಿತು ಸಂಶೋಧನೆ ಆರಂಭಿಸಿದಾಗಿನಿಂದಲೂ ಜನರು ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ಭಯೋತ್ಪಾದಕರಿಂದ ಸಮುದಾಯದ ಜನರ ಹತ್ಯೆಯ ನಂತರ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ವಲಸೆ ಹೋಗಿರುವ ಬಗ್ಗೆ ಕಾಶ್ಮೀರ ಫೈಲ್ಸ್ ಚಿತ್ರಿಸಲಾಗಿದೆ. ಮಾರ್ಚ್ 11 ರಂದು ಬಿಡುಗಡೆಯಾದ ನಂತರ ಕಾಶ್ಮೀರ್ ಫೈಲ್ಸ್ ಬಹು ಚರ್ಚಿತ ಸಿನಿಮಾವಾಗಿದ್ದು ವರ್ಷದ ಅತ್ಯಂತ ಯಶಸ್ವಿ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ.

Kashmir Files Controversy; ಅಶ್ಲೀಲ ಚಿತ್ರವೆಂದ ಇಸ್ರೇಲಿ ನಿರ್ದೇಶಕನಿಗೆ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಬೆಂಬಲ

ಸಿನಿಮಾ ಮಾಡುವ ಮುನ್ನ 700 ಜನರನ್ನು ಸಂದರ್ಶಿಸಿದ್ದೇನೆ ಎಂದು ವಿವೇಕ್ ಹೇಳಿದ್ದಾರೆ. 'ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಸಿನಿಮಾ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಕಣಿವೆಯಲ್ಲಿ ಹಿಂದೂಗಳನ್ನು ಎಂದಿಗೂ ಕೊಲ್ಲಲಾಗಿಲ್ಲ. ಹಾಗಾಗಿ ಇಂದು ನಾನು ಎಲ್ಲಾ ಬುದ್ಧಿಜೀವಿಗಳಿಗೆ, ಅರ್ಬನ್ ನಕ್ಸಲರಿಗೆ ಮತ್ತು ಇಸ್ರೇಲ್‌ನ ಈ ಮಹಾನ್ ಸಿನಿಮಾ ನಿರ್ದೇಶಕನಿಗೆ ಸವಾಲು ಹಾಕುತ್ತೇನೆ, ಅವರು ಕಾಶ್ಮೀರ ಫೈಲ್ಸ್‌ನ ಒಂದೇ ಒಂದು ಶಾಟ್, ಸಂಭಾಷಣೆ, ಘಟನೆಯನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ' ಹೇಳಿದ್ದಾರೆ.

Terror supporters and Genocide deniers can never silence me.
Jai Hind. pic.twitter.com/jMYyyenflc

— Vivek Ranjan Agnihotri (@vivekagnihotri)

'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನದಾವ್; ತಿರುಗೇಟು ನೀಡಿದ ಅಗ್ನಿಹೋತ್ರಿ


ಇಸ್ರೇಲಿ ನಿರ್ದೇಶಕ ನದಾಲ್ ಹೇಳಿದ್ದೇನು?

 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಈ ವರ್ಷದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ  ನದಾವ್ ಲಾಪಿಡ್,  'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ, ತಪ್ಪು ಪ್ರಚಾರದ ಉದ್ದೇಶ ಹೊಂದಿದ ಸಿನಿಮಾ' ಎಂದು ಅಸಮಾಧಾನ ಹೊರಹಾಕಿದರು. 'ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ  ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು. ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಕ್ಕೆ ನಾನು ಆರಾಮಾಗಿ ಇದ್ದೀನಿ. ಈ ಉತ್ಸಾಹದಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು' ಎಂದು ಹೇಳಿದರು. 
 

click me!