ನಟಿ ಸಮಂತಾ ರುಥ್ ಪ್ರಭು ಎರಡನೇ ಮದುವೆಯಾಗುವ ಸುಳಿವು ನೀಡಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. 2025ರ ರಾಶಿ ಭವಿಷ್ಯದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಹೈದರಾಬಾದ್: ನಟಿ ಸಮಂತಾ ರುಥ್ ಪ್ರಭು ಎರಡನೇ ಮದುವೆಯಾಗುವ ಸುಳಿವು ನೀಡಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಮುನ್ನಲೆಗೆ ಬಂದಿವೆ. ಈ ಚರ್ಚೆಗೆ ಕಾರಣ ಸಮಂತಾ ಮಾಡಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೇಟಸ್. ಡಿಸೆಂಬರ್ 4ರಂದು ಸಮಂತಾ ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆಯಾಗಿದ್ದರು. ನಾಯಕಿ ಶೋಭಿತಾ ದುಳಿಪಾಲ ಜೊತೆ ನಾಗಚೈತನ್ಯ ಮದುವೆ ಹೈದರಾಬಾದ್ ನಗರದ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಬ್ಬರ ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಸಮಂತಾ ಇನ್‌ಸ್ಟಾಗ್ರಾಂ ಸ್ಟೇಟಸ್ ಚರ್ಚೆಗೆ ಗ್ರಾಸವಾಗಿದೆ.
ಹೌದು, ಸಮಂತಾ ರುಥ್ ಪ್ರಭು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 2025ರ ರಾಶಿ ಭವಿಷ್ಯ ಹೇಗಿರುತ್ತೆ ಎಂಬ ಫೋಟೋ ಹಂಚಿಕೊಂಡಿದ್ದಾರೆ. ಮಾಜಿ ಗಂಡ ಹೊಸ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ರೂ, ಮುಂದಿನ ಜೀವನ ಹೇಗಿರುತ್ತೆ ಎಂಬುದರ ಸಮಂತಾ ಚಿಂತಿತರಾದಂತೆ ಕಾಣುತ್ತಿದೆ. ಆದರೆ ಸಮಂತಾ ಹಂಚಿಕೊಂಡ ಫೋಟೋದಲ್ಲಿ ಮೂರು ರಾಶಿಗಳ ಭವಿಷ್ಯವಾಗಿದೆ. ಗೂಗಲ್ ಪ್ರಕಾರ ಸಮಂತಾ ಅವರದ್ದು ವೃಷಭ ರಾಶಿಯಾಗಿದೆ. ಆದ್ರೆ ಇನ್ನುಳಿದ ಎರಡು ರಾಶಿ ಯಾರದ್ದು ಎಂದು ಅಭಿಮಾನಿಗಳು ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.
ಸಮಂತಾ ಹಂಚಿಕೊಂಡ ಪೋಸ್ಟ್ ಪ್ರಕಾರ, 2025 ವರ್ಷ ಹೇಗಿರುತ್ತೆ?
2025 ಅತ್ಯಂತ ಬಿಡುವಿಲ್ಲದ ವರ್ಷವಾಗಿರಲಿದ್ದು, ಕರಕುಶಲತೆಯ ಪ್ರಗತಿ ಮತ್ತು ಅದಕ್ಕಾಗಿ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಈ ವರ್ಷ ಆರ್ಥಿಕ ಸ್ಥಿರವಾಗಿರುತ್ತದೆ. ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ ಸಿಗಲಿದ್ದಾರೆ. ಈ ವರ್ಷ ನಿಮ್ಮ ದೊಡ್ಡ ಗುರಿಗಳನ್ನು ತಲುಪುತ್ತೀರಿ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹೊಸ ಆಯ್ಕೆಗಳ ಅವಕಾಶ ಸಿಗಲಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಗುವಿಗಾಗಿ ಪ್ರಯತ್ನಿಸುತ್ತಿದ್ರೆ ಕನಸು ಈಡೇರಲಿದೆ. ಈ ವಿಷಯದಲ್ಲಿ ಜಾಗರೂಕರಾಗಿರಬೇಕಾಗುತ್ತದೆ.
ಇದನ್ನೂ ಓದಿ: 'ಎಕ್ಸ್'ಗೆ ಎಕ್ಸ್ಪೆನ್ಸಿವ್ ಗಿಫ್ಟ್ ಕೊಟ್ಟಿದ್ರಂತೆ ಸಮಂತಾ;ಕಿಚ್ಚು ಹಚ್ಚಿದ ಸಮಂತಾ ಬೋಲ್ಡ್ ಸ್ಟೇಟ್ಮೆಂಟ್!
undefined
ಇದರಲ್ಲಿರುವ ವಿಷಯಗಳು ತಮ್ಮ ವೃತ್ತಿ ಮತ್ತು ಖಾಸಗಿ ಜೀವನಕ್ಕೆ ಹತ್ತಿರವಾಗಿರುವ ಕಾರಣ ಸಮಂತಗಾ ಈ ಪೋಸ್ಟ್ ಮಾಡಿಕೊಂಡಿದ್ದಾರೆ ಎಂಬ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 2025ರಲ್ಲಿ ತಾಯಿಯಾಗುವ ಭಾಗ್ಯದ ಬಗ್ಗೆಯೂ ಈ ಭವಿಷ್ಯದಲ್ಲಿ ಹೇಳಲಾಗಿದೆ. ಹಾಗಾಗಿ ಸಮಂತಾ ಈ ಫೋಟೋ ಮೂಲಕ ಎರಡನೇ ಮದುವೆಯಾಗುವ ಸುಳಿವು ನೀಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿದ್ದು, ಹಾಗೆಯೇ ಇನ್ನುಳಿದ ಎರಡು ರಾಶಿಗಳು ಯಾರದ್ದು ಎಂಬುದರ ಸ್ಪಷ್ಟ ಮಾಹಿತಿ ಸಿಕಿಲ್ಲ.
ಸುಮಾರು 10 ವರ್ಷಗಳ ಕಾಲ ಪ್ರೀತಿಯ ಬಲೆಯಲ್ಲಿದ್ದ, ನಾಗಚೈತನ್ಯ ಮತ್ತು ಸಮಂತಾ 6 ಅಕ್ಟೋಬರ್ 2017ರಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ 2021ರಲ್ಲಿ ಡಿವೋರ್ಸ್ ಪಡೆದುಕೊಂಡು ದೂರವಾಗಿದ್ದಾರೆ.
ಇದನ್ನೂ ಓದಿ: ಹೊಸ ಸೊಸೆನ ಹೊಗಳ್ತಾ ಇಂಥಾ ಮಾತನ್ನೋದ ನಾಗಾರ್ಜುನ: ಸಮಂತಾ ಗ್ರೇಟ್ ಎಸ್ಕೇಪ್ ಎಂದ ನೆಟ್ಟಿಜನ್ಸ್