ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೆಲ್‌ಕಮ್, ಸ್ತ್ರೀ 2 ಖ್ಯಾತಿಯ ಬಾಲಿವುಡ್‌ ನಟನ ಅಪಹರಣ

By Mahmad Rafik  |  First Published Dec 11, 2024, 10:49 AM IST

ಹಾಸ್ಯ ಕಲಾವಿದ ಸುನಿಲ್ ಪಾಲ್ ಬಳಿಕ ಬಾಲಿವುಡ್ ಪೋಷಕ ನಟ ಮುಷ್ತಾಖ್ ಖಾನ್ ಅವರ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ನವೆಂಬರ್ 20ರಂದು ದೆಹಲಿ-ಮೀರತ್ ಹೆದ್ದಾರಿಯಲ್ಲಿ ಮುಷ್ತಾಖ್ ಖಾನ್ ಅವರನ್ನು ಅಪಹರಿಸಲಾಗಿತ್ತು.


ಲಕ್ನೋ: ಹಾಸ್ಯ ಕಲಾವಿದ ಸುನಿಲ್ ಪಾಲ್ ಬಳಿಕ ಬಾಲಿವುಡ್ ಪೋಷಕ ನಟ ಮುಷ್ತಾಖ್ ಖಾನ್ ಅವರ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ  ಉತ್ತರ ಪ್ರದೇಶದ ಬಿಜ್ನೊರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಎಫ್‌ಐಆರ್ ನಲ್ಲಿರುವ ಮಾಹಿತಿ ಪ್ರಕಾರ, ನವೆಂಬರ್ 20ರಂದು ದೆಹಲಿ-ಮೀರತ್ ಹೆದ್ದಾರಿಯಲ್ಲಿ ಮುಷ್ತಾಖ್ ಖಾನ್ ಅವರನ್ನು ಅಪಹರಿಸಲಾಗಿತ್ತು. ಮುಷ್ತಾಖ್ ಖಾನ್ ಅವರು ಮೀರತ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಗಲು ತೆರಳುತ್ತಿದ್ದರು. ಈ ವೇಳೆ ಅಪಹರಣ ನಡೆಸಲಾಗಿತ್ತು. 

ಮುಷ್ತಾಖ್ ಖಾನ್ ಅವರ ಇವೆಂಟ್ ಮ್ಯಾನೇಜರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ರಾಹುಲ್ ಸೈನಿ ಎಂಬವರು ಹಿರಿಯ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿ, ಮುಷ್ತಾಖ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕಾಗಿ ಮುಂಗಡವಾಗಿ 50,000 ರೂಪಾಯಿ ಹಣ ಸಹ ನೀಡಿದ್ದರು. ಇದೀಗ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tap to resize

Latest Videos

ಹಾಸ್ಯ ಕಲಾವಿದ ಸುನಿಲ್ ಪಾಲ್ ಸಹ ಕೆಲ ದಿನಗಳಿಂದ ಕಾಣೆಯಾಗಿದ್ದರು. ನಂತರ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ಸುನಿಲ್ ಪಾಲ್, ನಾನು ಸುರಕ್ಷಿತವಾಗಿದ್ದೇನೆ. ಮನೆಗೆ ಹಿಂದಿರುಗಿದ್ದೇನೆ. ಡಿಸೆಂಬರ್ 2ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳಿದ್ದೆ. ಅಲ್ಲಿಗೆ ಹೋದ್ಮೇಲೆ ಅದು ಸುಳ್ಳು ಮತ್ತು ನನ್ನನ್ನುಅಪಹರಣ ಮಾಡಲಾಗಿದೆ ಎಂಬ ವಿಷಯ ಗೊತ್ತಾಯ್ತು ಎಂದು ಹೇಳಿದ್ದಾರೆ. 

ಇದನ್ನೂ ಓದಿ:  ನಟನೆ, ನಿರ್ದೇಶನವೂ ಅಲ್ಲ, ವಿಶೇಷ ಕೆಲಸಕ್ಕಾಗಿ ಪ್ರಭಾಸ್ ಜೊತೆ ಕೈ ಜೋಡಿಸಿದ ರಿಷಬ್ ಶೆಟ್ಟಿ?

ನನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿ, ಅಲ್ಲಿಂದ ದೂರ ಕರೆದುಕೊಂಡು ಹೋಗಲಾಯ್ತು. ಅಪಹರಣಾಕಾರರು ನನ್ನೊಂದಿಗೆ ಆರಂಭದಲ್ಲಿ ಚೆನ್ನಾಗಿಯೇ ನಡೆದುಕೊಂಡರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಪ್ರಯಾಣ ಮಾಡಲಾಯ್ತು. ಆಗ ನನ್ನನ್ನು ಕಿಡ್ನ್ಯಾಪ್ ಮಾಡಿದ್ದೀರಾ ಎಂದು ಕೇಳಿದೆ. ಅದಕ್ಕೆ ನಾವು ನಿಮಗೆ ಯಾವುದೇ ಅಪಾಯ ಮಾಡಲ್ಲ. ನಮಗೆ ಹಣ ನೀಡಿದ್ರೆ ನಿಮ್ಮನ್ನು ಕಳುಹಿಸುತ್ತೇವೆ ಎಂದು ಹೇಳಿದರು. 

ಆರಂಭದಲ್ಲಿ ಅಪಹರಣಕಾರರು 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದರು. ಆಗ ನನಗೆ ಇವರು ತುಂಬಾ ಅಪಾಯಕಾರಿ ಜನರು. ನನ್ನನ್ನು ಅಷ್ಟು ಸುಲಭವಾಗಿ ಬಿಡಲ್ಲ ಎಂದು ಅರ್ಥ ಆಯ್ತು. ನಂತರ 20ರ ಬದಲಾಗಿ 10 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದರು. ನಂತರ ಕೊನೆಗೆ ತುಂಬಾ ಸಮಯದವರೆಗೆ ಚೌಕಾಸಿ ನಡೆಸಿದ ಬಳಿಕ ಸ್ನೇಹಿತರ ಮೂಲಕ ಅವರು ಹೇಳಿದ ಖಾತೆಗೆ 7.5 ಲಕ್ಷ ರೂಪಾಯಿ ವರ್ಗಾಯಿಸಲಾಯ್ತು. ಹಣ ಜಮೆ ಆಗ್ತಿದ್ದಂತೆ ನನ್ನನ್ನು ಕಳುಹಿಸಲಾಯ್ತು ಎಂದು ಸುನಿಲ್ ಪಾಲ್ ಹೇಳಿದ್ದಾರೆ.
 
ನನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿದ್ದರಿಂದ ಅವರನ್ನು ಗುರುತಿಸಲು ನನ್ನಿಂದ ಸಾಧ್ಯವಾಗಿಲ್ಲ. ಇದೆಲ್ಲವೂ ಕೇವಲ 24 ಗಂಟೆಯಲ್ಲಿ ನಡೆದು ಹೋಯ್ತು. ಭಯ ಮತ್ತು ಒತ್ತಡದಲ್ಲಿದ್ದರಿಂದ ಆ ಸಮಯದಲ್ಲಿ ಅಲ್ಲಿಂದ ಹೇಗೆ ಪಾರಾಗೋದು ಅಂತ ಮಾತ್ರ ಯೋಚಿಸುತ್ತಿದ್ದೆ. ಹಾಗಾಗಿ ಯಾವುದನ್ನು ಸಹ ಹೆಚ್ಚು ಗಮನಿಸಲು ಆಗಲಿಲ್ಲ. ನಂತರ ಅಜ್ಞಾತ ಸ್ಥಳದಿಂದ ಕರೆದುಕೊಂಡು ಬಂದು ಮೀರತ್ ಹೆದ್ದಾರಿ ಬಳಿ ಇಳಿಸಿ ಪರಾರಿಯಾದರು ಎಂದು ನಡೆದ ಘಟನೆಯನ್ನು ಸುನಿಲ್ ಪಾಲ್ ವಿವರಿಸಿದ್ದಾರೆ.

ಇದನ್ನೂ ಓದಿ:  1979ರಲ್ಲಿ ಕನ್ನಡ ಸಿನಿಮಾ ನಟನ ಜೊತೆ ಹೋಟೆಲ್‌ನಲ್ಲಿದ್ದಾಗಲೇ ತಗ್ಲಾಕೊಂಡಿದ್ರಾ ನಟಿ ರೇಖಾ?

பிரபல நடிகர் கடத்தல்; பணப்பறிப்பு கும்பலிடம் இருந்து சினிமா பாணியில் எஸ்கேப் ஆன ஷாக்கிங் சம்பவம்

https://t.co/5935ogAKzz

— Asianetnews Tamil (@AsianetNewsTM)
click me!