ಸಮಂತಾ, ರಶ್ಮಿಕಾ ಚಿತ್ರಕ್ಕೆಲ್ಲ ಹೀರೋ ಆಗಿರೋ ಈ ಹ್ಯಾಂಡ್‌ಸಮ್‌ ಹುಡ್ಗ ಯಾರು ಗೊತ್ತಾ?

By Suvarna News  |  First Published Apr 6, 2023, 3:08 PM IST

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೀರೋ ಸ್ಕ್ರೀನ್ ಸ್ಪೇಸ್ ಅಂಥಾ ಮಹತ್ವ ಇರೋದಿಲ್ಲ. ಆದ್ರೆ ಈ ಮಲಯಾಳಿ ನಟ ಅಂಥ ಅವಕಾಶ ಬಳಸಿಕೊಂಡೇ ಇಂಡಸ್ಟ್ರಿಯಲ್ಲಿ ಎತ್ತರೆತ್ತರಕ್ಕೆ ಹೋಗ್ತಿದ್ದಾರೆ. ಅಷ್ಟಕ್ಕೂ ಹುಡುಗೀರ ಕನಸಲ್ಲಿ ಬರೋವಷ್ಟು ಹ್ಯಾಂಡ್‌ಸಮ್ ಆಗಿರೋ ಈ ನಟ ಯಾರು?


ಮಲಯಾಳ ಸಿನಿಮಾ ಇಂಡಸ್ಟ್ರಿ ಕಳೆದೊಂದು ದಶಕದಲ್ಲಿ ಅನೇಕ ಪ್ರತಿಭಾವಂತ ನಟರನ್ನು ಕಂಡಿದೆ. ಅವರು ಮಲಯಾಳಂ ಸಿನಿಮಾಗಳಲ್ಲಿ ಪಾಪ್ಯುಲರ್‌ ಆಗುತ್ತಾ ಆಗುತ್ತಲೇ ತಮ್ಮ ಬೌಂಡರಿ ವಿಸ್ತರಿಸಿಕೊಂಡವರು. ಫಹಾದ್‌ ಫಾಸಿಲ್‌, ದುಲ್ಖರ್ ಸಲ್ಮಾನ್ ಸೇರಿ ಅನೇಕರನ್ನು ಹೆಸರಿಸಬಹುದು. ತಮಿಳಿನಲ್ಲಿ ವಿಜಯ್ ಸೇತುಪತಿಯಂಥಾ ದೈತ್ಯ ನಟ ಆ ಸಾಲಿಗೆ ಸೇರ್ತಾರೆ. ಆದರೆ ಇವರಷ್ಟೆಲ್ಲ ಸೌಂಡ್ ಮಾಡದೇ ತನ್ನ ಸೌಂದರ್ಯದಿಂದಲೇ ಗಮನ ಸೆಳೆದಿರೋ ನಟ ಒಬ್ಬನಿದ್ದಾನೆ. ಆತನದೂ ಮಲಯಾಳಂ ಹಿನ್ನೆಲೆ. ಮಲಯಾಳಂ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಲೇ ಬೇರೆ ಬೇರೆ ಭಾಷೆಗಳಲ್ಲಿ ಈತ ಅವಕಾಶ ಗಿಟ್ಟಿಸಿಕೊಳ್ತಿದ್ದಾನೆ.

ಈ ನಟನ ವಿಶೇಷತೆ ಅಂದರೆ ಹೀರೋಯಿನ್ ಪ್ರಧಾನ ಸಿನಿಮಾಗಳಲ್ಲಿ ಈತ ಹೀರೋ. ಸಾಮಾನ್ಯ ಇಂಥಾ ಸಿನಿಮಾ ಬಂದಾಗ ಅದರಲ್ಲಿ ಹೀರೋಯಿನ್ ಪಾತ್ರದಷ್ಟು ಹೀರೋ ಪಾತ್ರಕ್ಕೆ ಸ್ಕ್ರೀನ್ ಸ್ಪೇಸ್ ಇರೋದಿಲ್ಲ. ಆದರೆ ತನ್ನ ಪ್ರತಿಭೆ ಮೆರೆಯೋದಕ್ಕೆ ಆ ಜಾಗವೂ ಸಾಕಯ ಅಂದುಕೊಂಡಿರೋದು ಈತನ ವಿಶೇಷತೆ. ಅಷ್ಟು ಮಾತ್ರ ಅಲ್ಲ, ಅಂಥಾ ಪಾತ್ರಗಳಲ್ಲಿ ನಟಿಸೋ ಮೂಲಕವೇ ಹುಡುಗೀರ ಮನಸ್ಸು ಕದ್ದ ಹುಡುಗನೀತ.

Tap to resize

Latest Videos

'ಸೂಫಿಯುಂ ಸುಜಾತನುಂ' ಅನ್ನೋ ಮಲಯಾಳಂ ಸಿನಿಮಾ ಮೂರು ವರ್ಷಗಳ ಕೆಳಗೆ ಸ್ವಲ್ಪ ಸೌಂಡ್ ಮಾಡಿತು. ಇದರಲ್ಲಿ ಅದಿತಿ ರಾವ್ ಹೈದರಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವೇ ಈ ನಟನ ಎಂಟ್ರಿಗೂ ಕಾರಣವಾಯ್ತು. ಮೊದಲ ಸಿನಿಮಾದಲ್ಲೇ ತನ್ನ ನಟನೆಯ ಮೂಲಕ ಸಿಕ್ಸರ್ ಬಾರಿಸಿರೋ ಈ ನಟನ ಹೆಸರು ದೇವ್ ಮೋಹನ್. 'ಸೂಫಿಯುಂ ಸುಜಾತನುಂ' ಸಿನಿಮಾದಲ್ಲಿ ಈತನದು ಸೂಫಿಯ ಪಾತ್ರ. ಈ ಸಿನಿಮಾದಲ್ಲಿ ಈತನನ್ನು ನೋಡಿದವರೆಲ್ಲ ಇಷ್ಟು ದಿನ ಈ ನಟ ಎಲ್ಲಿದ್ದ ಅಂತಲೇ ಮಾತನಾಡಿಕೊಂಡರು. ನೇರ ನೋಟ, ಮೋಹಕ ನಗು, ಚೆಂದದ ನಟನೆಯ ಮೂಲಕವೇ ಹುಡುಗೀರ ವಲಯದಲ್ಲಿ ಸಖತ್ ಹವಾ ಕ್ರಿಯೇಟ್ ಕ್ರಿಯೇಟ್ ಮಾಡಿದ. ಸಿನಿಮಾ ಕೆರಿಯರ್‌ನಲ್ಲಿ ಇಂಥಾ ಪಾತ್ರದ ಮೂಲಕ ಎಂಟ್ರಿಕೊಟ್ಟು ನೆಕ್ಸ್ಟ್ ಲೆವೆಲ್‌ಗೆ ಏರಬೇಕಾದ ಈತನಿಗೆ ಕೋವಿಡ್ ಶತ್ರುವಾಯ್ತು. ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ ಬಂದ ಅವಕಾಶವನ್ನೇ ಗಟ್ಟಿಯಾಗಿ ಹಿಡಿದುಕೊಂಡು ಆ ಮೂಲಕವೇ ನನ್ನ ಪ್ರತಿಭೆ ತೋರಿಸುತ್ತೇನೆ ಅಂತ ಸದ್ಯಕ್ಕೆ ಹೊರಟಿರೋ ಹಾಗಿದೆ.

Rashmika Mandanna Birthday : ಕೊಡಗಿನ ಸುಂದರಿ ಈ ಚಿತ್ರಗಳಲ್ಲಿ ಬ್ಯುಸಿಯೋ ಬ್ಯುಸಿ!

ನಿನ್ನೆಯಷ್ಟೇ ಘೋಷಣೆಯಾದ ರಶ್ಮಿಕಾ ಲೀಡ್ ಪಾತ್ರದಲ್ಲಿರೋ ರೈನ್ ಬೋ(Rain bow) ಸಿನಿಮಾಕ್ಕೆ ಈತನೇ ಹೀರೋ. ರಶ್ಮಿಕಾಳನ್ನ ಎತ್ತಿ ಮೆರೆಸೋ ಗಡಿಬಿಡಿಯಲ್ಲಿ ಈತನ ಹೆಸರು ಮೆನ್ಶನ್ ಮಾಡೋದನ್ನೂ ಹೆಚ್ಚಿನ ಮೀಡಿಯಾಗಳು ಮರೆತವು. ಆದರೆ ಪ್ರತಿಭೆಯನ್ನಷ್ಟೇ ನಂಬಿಕೊಂಡಿರುವ ಈ ನಟ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡ ಹಾಗೆ ಕಾಣಲಿಲ್ಲ. ಇದೀಗ ತಾನೇ ಟ್ರೇಲರ್ ರಿಲೀಸ್ ಮಾಡಿಕೊಂಡಿರೋ ಸಮಂತಾ ನಟನೆಯ 'ಶಕುಂತಲಂ'ನಲ್ಲಿ ಈತ ಹೀರೋ. ಇಲ್ಲೂ ಈತನ ಲುಕ್, ನಟನೆ ಟ್ರೇಲರ್(Trailer) ನಲ್ಲಿ ಗಮನ ಸೆಳೆದರೂ ಈತನ ಹೆಸರು ಕಾಣಿಸಿಕೊಂಡದ್ದು ಕಡಿಮೆ.

ಪೀಟರ್ ಇಂಗ್ಲೆಂಡ್‌ನ ಮಿ.ಇಂಡಿಯಾ ಶೋನಲ್ಲಿ ಫೈನಲ್(Final) ವರೆಗೂ ಹೋಗಿದ್ದ ಈ ದೇವ್ ಬೆಂಗಳೂರಿನಲ್ಲೂ ಕೆಲವು ಕಾಲ ಕಂಪನಿಯೊಂದರಲ್ಲಿ ಟೀಮ್ ಲೀಡರ್‌(Leader) ಆಗಿ ಕೆಲಸ ಮಾಡಿದ್ದ. ಸದ್ಯಕ್ಕೆ ಭಾಷೆಯ ಲಿಮಿಟ್ ಹಾಕಿಕೊಳ್ಳದೇ, ಪಾತ್ರಕ್ಕೂ ಲಿಮಿಟ್ ಹಾಕ್ಕೊಳ್ಳದೇ ಸಿಕ್ಕ ಅವಕಾಶವನ್ನೇ ಗಬಕ್ಕನೆ ಬಾಚಿಕೊಂಡು ಆಕಾಶದತ್ತ ದೃಷ್ಟಿನೆಟ್ಟಿರೋ ದೇವ್ ಗೆ ಆಲ್ ದಿ ಬೆಸ್ಟ್.

ಕೆಜಿಎಫ್ ಸ್ಟಾರ್ ಯಶ್ ಹಾಗೆ 'ರೈಸ್ ಅಪ್ ಬೇಬಿ...' ಅಂತಿರೋದೇಕೆ ಸಮಂತಾ: ಸ್ಯಾಮ್ ಹೊಸ ಪೋಸ್ಟ್ ವೈರಲ್

click me!