ಬೇರೆಯವ್ರ ಜೊತೆ ಲಿಪ್​ಲಾಕ್​ ಸೀನ್​ಗೆ ಹೇಮಾ ಮಾಲಿನಿ ರೆಡಿ ಇದ್ದಾರಾ? ನಟಿ ಹೇಳಿದ್ದೇನು?

Published : Aug 26, 2023, 11:33 AM ISTUpdated : Nov 02, 2023, 07:34 PM IST
ಬೇರೆಯವ್ರ ಜೊತೆ ಲಿಪ್​ಲಾಕ್​ ಸೀನ್​ಗೆ ಹೇಮಾ ಮಾಲಿನಿ ರೆಡಿ ಇದ್ದಾರಾ? ನಟಿ ಹೇಳಿದ್ದೇನು?

ಸಾರಾಂಶ

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಧರ್ಮೇಂದ್ರ ಅವರು ಶಬನಾ ಅಜ್ಮಿಗೆ ಕಿಸ್​ ಮಾಡಿದಂತೆ ನೀವು ಬೇರೆಯವರ ಜೊತೆ ಮಾಡಲು ರೆಡಿ ಇದ್ದೀರಾ ಎನ್ನುವ ಪ್ರಶ್ನೆಗೆ ನಟಿ ಹೇಮಾ ಮಾಲಿನಿ ಹೇಳಿದ್ದೇನು?   

ಈಚೆಗೆ ತೆರೆಕಂಡ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಇಂದಿಗೂ  ಸಕತ್​ ಸದ್ದು ಮಾಡುತ್ತಿದೆ. ಇದು ಚಿತ್ರಕ್ಕಿಂತಲೂ ಹೆಚ್ಚು ಸದ್ದು ಮಾಡಲು ಕಾರಣ,  ಪ್ರೇಕ್ಷಕರನ್ನು ಆಶ್ಚರ್ಯಕ್ಕೆ ತಳ್ಳಿದ್ದ ದೃಶ್ಯ... ಅದೇ  ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಈ ಇಬ್ಬರು ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು 'ಅಭಿ ನ ಜಾವೋ ಛೋಡ್ ಕರ್' ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ.  87 ವರ್ಷದ ಧರ್ಮೇಂದ್ರ ಹಾಗೂ 72 ವರ್ಷದ ಶಬನಾ ಅಜ್ಮಿ ಈ ರೀತಿಯ ದೃಶ್ಯದಲ್ಲಿ ನಿರಾತಂಕವಾಗಿ ತೊಡಗಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಧರ್ಮೇಂದ್ರ ಮತ್ತು  ಶಬನಾ ಅಜ್ಮಿ ಜೋಡಿಯ ಕೆಮೆಸ್ಟ್ರಿಯನ್ನೂ (Chemistry) ಜನ ಮೆಚ್ಚಿಕೊಂಡರೂ ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​.

 ಧರ್ಮೇಂದ್ರ ಕೂಡ ಈ ಸೀನ್​ ಬಗ್ಗೆ ಪ್ರತಿಕ್ರಿಯಿಸಿದ್ದು,  ಇಷ್ಟೊಂದು ಪ್ರೀತಿ ಜನರಿಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ಲೈಫ್ ಇನ್ ಎ ಮೆಟ್ರೋದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಜನರು ಅದನ್ನು ಮೆಚ್ಚಿದ್ದರು. ಈಗ ಇದನ್ನು ಕೂಡ ಜನ ಮೆಚ್ಚಿಕೊಂಡಿರುವುದು ಅಚ್ಚರಿಯಾಗುತ್ತಿದೆ, ಎಂದು  ಧರ್ಮೇಂದ್ರ ಹೇಳಿದ್ದರು. ನಂತರ ಪತಿಯ ಲಿಪ್​ಲಾಕ್​ ಕುರಿತು ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿಗೂ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ   ಹೇಮಾ ಮಾಲಿನಿ,  ಇನ್ನೂ ನಾನು ಸಿನಿಮಾ ನೋಡಿಲ್ಲ. ಆದರೆ ಶಬನಾ ಅಜ್ಮಿ ಮತ್ತು  ಧರ್ಮೇಂದ್ರ ಅವರ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡಿರುವಂತೆ ತೋರುತ್ತದೆ. ಲಿಪ್​ಲಾಕ್​ ಕುರಿತು ಪ್ರತಿಕ್ರಿಯಿಸಲು ಸಿನಿಮಾ  ನೋಡದ್ದರಿಂದ ಸಾಧ್ಯವಾಗುತ್ತಿಲ್ಲ. ಆದರೆ ಧರ್ಮೇಂದ್ರ ಅವರ ನಟನೆಯನ್ನು ಇಂದಿಗೂ ಜನರು ಇಷ್ಟಪಡುವುದು ಹಾಗೂ  ಧರ್ಮೇಂದ್ರ  (Dharmendra) ಅವರಿಗೆ ಜನ ಪ್ರೀತಿ ತೋರಿಸುತ್ತಿರುವುದು ಸಂತಸ ತಂದಿದೆ ಎಂದಿದ್ದರು.

RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

ಇದೀಗ ಹೇಮಾ ಮಾಲಿನಿಯವರಿಗೆ ಇನ್ನೊಂದು ಪ್ರಶ್ನೆ ಎದುರಾಗಿದೆ. ಅದೇನೆಂದರೆ, ಇದೇ ರೀತಿ ಬೇರೆಯವರ ಜೊತೆ ಕಿಸ್ಸಿಂಗ್ ಸೀನ್​ ಮಾಡುವ ಪರಿಸ್ಥಿತಿ ಬಂದರೆ ಅದಕ್ಕೆ ನೀವು ತಯಾರಿದ್ದೀರಾ ಎಂದು ಹೇಮಾ ಮಾಲಿನಿಯವರಿಗೆ ಕೇಳಲಾಗಿದೆ. ಈ ವಿಷಯದ ಬಗ್ಗೆ ಸ್ವಲ್ಪವೂ ಹಿಂಜರಿಯದ ನಟಿ ನೇರವಾಗಿ ಉತ್ತರಿಸಿದ್ದು ಏನು ಗೊತ್ತಾ? ಯಾಕಾಗಬಾರದು? ಸಂಬಂಧಿತ ಚಿತ್ರಕ್ಕೆ, ಆ ಸೀನ್​ಗೆ ಅಗತ್ಯ ಬಿದ್ದರೆ ಖಂಡಿತಾ ಮಾಡುತ್ತೇನೆ ಎಂದಿದ್ದಾರೆ. 
 
ಚಲ್ ಮನ್ ವೃಂದಾವನದ ಪುಸ್ತಕ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿರುವ  ಸಂದರ್ಶನದಲ್ಲಿ, ಹೇಮಾ ಮಾಲಿನಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky aur Rani ki Prem Kahani) ಬಗ್ಗೆ ಹೇಳಿದ್ದಾರೆ. ಆದರೆ ಇದುವರೆಗೂ ತಾವು ಈ ಚಿತ್ರವನ್ನಾಗಲೀ, ಪತಿ ಧಮೇಂದ್ರ ಅವರ ಲಿಪ್​ಲಾಕ್​ ನೋಡಿಲ್ಲ ಎಂದಿರುವ ಹೇಮಾ ಮಾಲಿನಿ,  ಚುಂಬನದ ದೃಶ್ಯ ಬಂದರೆ ಅದನ್ನು ಮಾಡಲು ತಮಗೇನೂ ಮುಜುಗರ ಇಲ್ಲ ಎಂದಿದ್ದಾರೆ. ಈ ದೃಶ್ಯ ಅವಶ್ಯಕವಾಗಿದ್ದರೆ, ಚಿತ್ರಕ್ಕೆ ಬೇಕು ಎಂದಾದರೆ  ಬಹುಶಃ ನಾನು ಮಾಡುತ್ತೇನೆ ಎಂದಿದ್ದಾರೆ.

RRPK: 72 ವರ್ಷದ ಶಬನಾ ಜೊತೆ ಲಿಪ್​ಲಾಕ್​ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!