ನಾವು ಎಲ್ಲರಂತಲ್ಲ..ಫೋಟೋ ಹಾಕಲ್ಲ: ಧರ್ಮೇಂದರ್ ಗಂಡು ಮಕ್ಕಳ ಬಗ್ಗೆ ಹೇಮಾ ಮಾಲಿನಿ ಸ್ಪಷ್ಟನೆ

Published : Aug 26, 2023, 11:26 AM IST
ನಾವು ಎಲ್ಲರಂತಲ್ಲ..ಫೋಟೋ ಹಾಕಲ್ಲ: ಧರ್ಮೇಂದರ್ ಗಂಡು ಮಕ್ಕಳ ಬಗ್ಗೆ ಹೇಮಾ ಮಾಲಿನಿ ಸ್ಪಷ್ಟನೆ

ಸಾರಾಂಶ

ಈಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಜೊತೆ ಸನ್ನಿ ಮತ್ತು ಬಾಬಿ ಡಿಯೋಲ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಬಗ್ಗೆ ಸ್ಪಷ್ಟನೆ.... 

ಬಾಲಿವುಡ್ ಅಂಗಳದಲ್ಲಿ ಬ್ಲಾಕ್ ಬಸ್ಟರ್ ಗದರ್ 2 ಸಿನಿಮಾ ಎಲ್ಲರ ಮನೆ ಮಾತಾಗಿದೆ. ಈ ಸಿನಿಮಾ ನೋಡಲು ಹೇಮಾ ಮಾಲಿನಿ ಪುತ್ರಿ ಈಶಾ ಡಿಯೋಲ್ ಸ್ಪೇಷಲ್ ಸ್ಕ್ರೀನಿಂಗ್ ಮಾಡಿಸಿದ್ದರು. ನಿಜ ಹೇಳಬೇಕು ಅಂದ್ರೆ ಧರ್ಮೇಂದರ್ ನಾಲ್ಕು ಮಕ್ಕಳು ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ಮೊದಲು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಈಶಾ ಡಿಯೋಲ್, ಅಹಾನಾ ಡಿಯೋಲ್, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಒಟ್ಟಿಗೆ ನಿಂತು ಪೋಸ್ ಕೊಟ್ಟಿದ್ದಾರೆ. ಎಲ್ಲೂ ಕಾಣಿಸಿಕೊಳ್ಳದ ಈ ನಾಲ್ಕು ಮಂದಿ ಇದ್ದಕ್ಕಿದ್ದಂತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಡಿಯೋಲ್ ಕುಟುಂಬದ ಅಭಿಮಾನಿಗಳಿಗೆ ಸಂತಸದ ವಿಚಾರ.

ಕೆಲವು ದಿನಗಳಿಂದ ಹೇಮಾ ಮಾಲಿನಿಗೆ ಕುಟುಂಬದ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶ್ನೆ ಕೇಳುತ್ತಿದ್ದರು. ಸ್ಪೆಷಲ್ ಸ್ಕ್ರೀನಿಂಗ್ ಮುಗಿಸಿಕೊಂಡು ಎಂಟ್ರಿ ಕೊಟ್ಟ ಹೇಮಾ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ತುಂಬಾ ಖುಷಿಯಾಗಿರುವೆ. ನನಗೆ ಇದರಲ್ಲಿ ಏನೂ ವಿಶೇಷತೆ ಇಲ್ಲ ಅಥವಾ ಹೊಸತನ ಕಾಣಿಸುತ್ತಿಲ್ಲ ಏಕೆಂದರೆ ನಮಗೆ ಇದು ತುಂಬಾ ನಾರ್ಮಲ್. ಹಲವು ಸಲ ನಮ್ಮ ಮನೆಗೆ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಆಗಮಿಸಿದ್ದರು ಆದರೆ ನಾವು ಎಲ್ಲೂ ಪಬ್ಲಿಶ್ ಮಾಡಿರಲಿಲ್ಲ ನಾವು ಎಲ್ಲರಂತೆ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂಗೆ ಅಪ್ಲೋಡ್ ಮಾಡುವ ಮಂದಿ ಅಲ್ಲ. ನಾವು ಆ ರೀತಿ ಫ್ಯಾಮಿಲಿ ಅಲ್ಲ..' ಎಂದು ಹೇಮಾ ಮಾಲಿನಿ ಸ್ಪಷ್ಟನೆ ಕೊಟ್ಟಿದ್ದಾರೆ. 

ಚಿಕ್ಕಮ್ಮ ಹೇಮಾ ಮೇಲೆ ಹಲ್ಲೆ ಮಾಡಿದ್ರ ಸನ್ನಿ: ಗದರ್ 2 ಯಶಸ್ಸಿನ ನಡುವೆ ಆ ದಿನಗಳ ನೆನೆದ ಡ್ರೀಮ್‌ಗರ್ಲ್‌

'ನಾವೆಲ್ಲರೂ ಒಟ್ಟಿಗೆ ಇದ್ದೀವೆ ಸದಾ ಒಟ್ಟಿಗೆ ಇರುತ್ತೀವಿ. ಯಾವುದೇ ಸಮಸ್ಯೆ ಎದುರಾಗಿ ನಾವು ಒಟ್ಟಿಗೆ ಎದರಿಸುತ್ತೀವಿ. ಮಾಧ್ಯಮಗಳು ಸರಿಯಾಗಿ ಅರ್ಥ ಮಾಡಿಕೊಳ್ಳಿ ....ನಾವು ಖುಷಿಯಾಗಿದ್ದೀವಿ ಈ ಖುಷಿ ನಮ್ಮಲ್ಲಿ ಸದಾ ಇರಲಿದೆ' ಎಂದಿದ್ದಾರೆ ಹೇಮಾ ಮಾಲಿನಿ. 

ಸನ್ನಿ ಡಿಯೋಲ್ ಗದರ್ 2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆಗಸ್ಟ್‌ 11ರಂದು ಬಿಡುಗಡೆಯಾಗಿ 40.1 ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯ- ದೇಶ- ವಿದೇಶ ಲೆಕ್ಕ ಮಾಡಿದರೆ ಅನ್ನಿ ಸಿನಮಾ ಇದುವರೆಗೂ ಒಟ್ಟು 418.90 ಕೋಟಿ ಕಲೆಕ್ಷನ್ ಮಾಡಿದೆ. 

RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

ಸಣ್ಣ ಲವ್ ಸ್ಟೋರಿ:

ಬಾಲಿವುಡ್‌ನ ಜನಪ್ರಿಯ ಜೋಡಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಎಲ್ಲಾ ಸಂಪ್ರದಾಯಗಳನ್ನು ಧಿಕ್ಕರಿಸುತ್ತದೆ. ಆದರೆ, ಆಗಲೇ ಮದುವೆಯಾಗಿದ್ದರಿಂದ ಧರ್ಮೇಂದ್ರರ ಸಂಬಂಧವನ್ನು ಹೇಮಾ ಪೋಷಕರು ಆರಂಭದಲ್ಲಿ ಒಪ್ಪಿರಲಿಲ್ಲ. 1980 ರಲ್ಲಿ ವಿವಾಹವಾದ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ 43 ವರ್ಷಗಳ ನಂತರವೂ ಸಂತೋಷವಾಗಿದ್ದಾರೆ.  'ಯಾರು ಇದನ್ನು ಬಯಸುವುದ್ದಿಲ್ಲ ಆದರೆ. ಆದಾಗಿಯೇ ಅದು  ಸಂಭವಿಸುತ್ತದೆ ಮತ್ತು ಏನಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ, ಯಾರೂ ತಮ್ಮ ಜೀವನವನ್ನು ಹೀಗೆ ಬದುಕಲು ಬಯಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ  ಸಾಮಾನ್ಯ ಕುಟುಂಬದಂತೆ ಗಂಡ ಮತ್ತು ಮಕ್ಕಳನ್ನು ಬಯಸುತ್ತಾರೆ, ಆದರೆ ಎಲ್ಲೋ, ನೀವು ಅಂದುಕೊಂಡಂತೆ ಆಗುವುದಿಲ್ಲ. ಅದರ ಬಗ್ಗೆ ನನಗೆ ಬೇಸರವಿಲ್ಲ. ನಾನು ಸಂತೋಷವಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದು, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ' ಎಂದು ಧರ್ಮೇಂದ್ರ ಜತೆಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್