RRR ತಂಡದಲ್ಲಿ ಎಲ್ಲವೂ ಸರಿಯಿಲ್ಲ; ನಿರ್ಮಾಪಕರನ್ನು ದೂರ ಇಟ್ಟಿದ್ದೇಕೆ ರಾಜಮೌಳಿ ಮತ್ತು ತಂಡ?

By Suvarna News  |  First Published Jan 14, 2023, 3:59 PM IST

RRR ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ ಯಾವುದೇ ಕಾರ್ಯಕ್ರಮ, ಸಂಭ್ರಮದಲ್ಲಿ ಭಾಗಿಯಾಗುತ್ತಿಲ್ಲ. ಆರ್ ಆರ್ ಆರ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. 


ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಪ್ರತಿಷ್ಠಿತ ಗೋಲ್ಡನ್ ಬ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ 'ಗೋಲ್ಡನ್ ಗ್ಲೋಬ್ಸ್' ಪ್ರಶಸ್ತಿ ಬಂದಿದ್ದು ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇತ್ತೀಚಿಗಷ್ಟೆ ಈ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು ಇಡೀ ಆರ್ ಆರ್ ಆರ್ ಸಿನಿಮಾತಂಡ ಅಮೆರಿಕಾದಲ್ಲಿ ಬೀಡು ಬಿಟ್ಟಿದೆ. ಪ್ರಶಸ್ತಿ ಸಮಾರಂಭದ ಒಂದಿಷ್ಟು ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಮೌಳಿ ಅವರ ಸಾಧನೆಗೆ ಇಡೀ ಭಾರತೀಯ ಸಿನಿಮಾರಂಗ ಹೆಮ್ಮೆ ಪಡುತ್ತಿದೆ. ಆದರೆ ಈ ಎಲ್ಲಾ ಸಂಭ್ರಮದಿಂದ ಆರ್ ಆರ್ ಆರ್ ಸಿನಿಮಾದ ನಿರ್ಮಾಪಕ DVV ದಾನಯ್ಯ ದೂರ ಇದ್ದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. 

ನಿರ್ಮಾಪಕ ದಾನಯ್ಯ ಯಾವುದೇ ಸಂಭ್ರಮ, ಪ್ರಮೋಷನ್ ನಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ರಾಜಮೌಳಿ ಮತ್ತು ತಂಡ ಕೂಡ ನಿರ್ಮಾಪಕರ ಹೆಸರನ್ನು ಎಲ್ಲೂ ಹೇಳುತ್ತಿಲ್ಲ. ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಎಂ ಎಂ ಕೀರವಾಣಿ ಸಿನಿಮಾತಂಡ ಎಲ್ಲರ ಹೆಸರನ್ನು ವೇದಿಕೆ ಮೇಲೆ ಉಲ್ಲೇಖಿಸಿದರು. ಆದರೆ ಎಲ್ಲೂ ನಿರ್ಮಾಪಕರ ಬಗ್ಗೆ ಮಾತನಾಡಿಲ್ಲ. ನಿರ್ಮಾಪಕರ ಜೊತೆ ರಾಜಮೌಳಿ ಸಂಬಂಧ ಸರಿ ಇಲ್ವಾ ಎನ್ನುವ ಚರ್ಚೆ ಶುರುವಾಗಿದೆ. 

Tap to resize

Latest Videos

ನಿರ್ಮಾಪಕ ದಾನಯ್ಯ ಕೋಟಿಗಟ್ಟಲೇ ಹಣ ಸುರಿದು ಸಿನಿಮಾ ನಿರ್ಮಾಣ ಮಾಡಿದ್ದಾರೆ ಆದರೂ ಅವರನ್ನು ದೂರ ಇಟ್ಟಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿರ್ಮಾಪಕರು ಯಾವುದೇ ಪ್ರಚಾರದಲ್ಲೂ ಕಾಣಿಸಿಕೊಂಡಿಲ್ಲ. ಇತ್ತೀಚಿಗಷ್ಟೆ ಜಪಾನ್‌ಗೆ ಹಾರಿದ್ದ ಸಿನಿಮಾತಂಡ ಅಲ್ಲೂ ಸಿನಿಮಾ ರಿಲೀಸ್ ಮಾಡಿ ಸದ್ದು ಮಾಡಿತ್ತು. ಆದರೆ ಆಗಲೂ ನಿರ್ಮಾಪಕರು ಕಾಣಿಸಿಕೊಂಡಿರಲಿಲ್ಲ. ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಪ್ರಚಾರ ಮಾಡಿ ಸಿನಿಮಾ ರಿಲೀಸ್ ಮಾಡಿದ್ದರು. ಲಾಸ್ ಏಂಜಲೀಸ್‌ನಲ್ಲಿ ವಿಶೇಷ ಪ್ರದರ್ಶನ ಕಂಡಾಗಲೂ ನಿರ್ಮಾಪಕರು ಜೊತೆಯಲ್ಲಿ ಇರಲಿಲ್ಲ. 

'ನಾಟು ನಾಟು'ಗೆ ಪ್ರಶಸ್ತಿ ಬೆನ್ನಲ್ಲೇ ಜ್ಯೂ. ಎನ್​ಟಿಆರ್​ ಟ್ರೋಲ್: ಬೇಕಿತ್ತಾ ಈ ಸ್ಟೈಲು?

ಈ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ನಿರ್ಮಾಪಕ ದಾನಯ್ಯ ಮತ್ತು ರಾಜಮೌಳಿ ನಡುವಿನ ಸಂಬಂಧ ಚೆನ್ನಾಗಿಲ್ಲ ಹಣ ಖರ್ಚು ಮಾಡಿಸಿದ್ದಕ್ಕೆ ರಾಜಮೌಳಿ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಾಹುಬಲಿ ಗಳಿಸಿದ್ದಷ್ಟು ಹಣ ಗಳಿಸಿಲ್ಲ ಹಾಗಾಗಿ ನಿರ್ಮಾಪಕರು ಬೇಸರಗೊಂಡು ದೂರ ಸರಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜಮೌಳಿ ಅವರಿಗೆ ಹಾಲಿವುಡ್ ಪ್ರಚಾರಗಳಿಗೆ ಯಾವುದೇ ಹಣಕಾಸಿನ ಸಹಾಯ ಮಾಡದೆ ಇರುವುದು ರಾಜಮೌಳಿ ಮುಸಿಗೆ ಕಾರಣವಾಗಿದೆ. ವಿದೇಶದಲ್ಲಿ ಸಿನಿಮಾ ಪ್ರಚಾರಕ್ಕೆ ರಾಜಮೌಳಿಯೇ ತನ್ನ ಜೀಬಿನಿಂದ ಹಣ ಖರ್ಚು ಮಾಡುತ್ತಿದ್ದಾರೆ ಹಾಗಾಗೂ ದಾನಯ್ಯ ಸಿನಿಮಾತಂಡದಿಂದ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. 

Naatu Naatu; ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದನೆ

ಆರ್ ಆರ್ ಆರ್ ಸಿನಿಮಾದಿಂದ  ದಾನಯ್ಯ ಸಂಪೂರ್ಣವಾಗಿ ದೂರ ಸರಿದ್ರಾ ಅಥವಾ ಮುನಿಸು ಮರೆತು ಮತ್ತೆ ಒಂದಾಗುತ್ತಾರಾ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ಸಿನಿಮಾತಂಡ ಯಾವ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕೂಡ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಒಂದಿಷ್ಟು ಮುನಿಸು, ಕೋಪಗಳ ನಡುವೆಯೂ ಆರ್ ಆರ್ ಆರ್ ಸಿನಿಮಾ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗೋಲ್ಡನ್ ಗ್ಲೋಬ್ಸ್ ಹೆದ್ದಿರುವ ಆರ್ ಆರ್ ಆರ್ ಇದೀಗ ಆಸ್ಕರ್ ಮೇಲೆ ಕಣ್ಣು ಇಟ್ಟಿದೆ. 

click me!