
ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 'ಪವರ್' ಚಿತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಒಂದಾಗಿ #ArrestTrisha ಎಂದು ಟ್ರೆಂಡ್ ಸೃಷ್ಟಿಸಿದ್ದಾರೆ, ನಟಿಯನ್ನು ಬಂಧಿಸಲು ಒತ್ತಾಯ ಹಾಕುತ್ತಿದ್ದಾರೆ.
ತ್ರಿಷಾ ಬಂಧಿಸಲು ಕಾರಣವೇನು?
ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿರುವುದು ಮಣಿರತ್ನಂ ನಿರ್ದೇಶನ ಮಾಡುತ್ತಿರುವ 'ಪೊನ್ನಿಯಿಸ್ ಸೆಲ್ವನ್' ಸಿನಿಮಾದ ಕಡೆ. ದೊಡ್ಡ ತಾರಾ ಬಳಗ ಹೊಂದಿರುವ ಈ ಚಿತ್ರದಲ್ಲಿ ತ್ರಿಷಾ ಕೃಷ್ಣನ್ ಕೂಡ ನಟಿಸುತ್ತಿದ್ದಾರೆ. ಇಂದೋರ್‌ನಲ್ಲಿರುವ ಪ್ರಸಿದ್ಧ ದೇವಾಲಯದಲ್ಲಿ ಇಡೀ ತಂಡ ಚಿತ್ರೀಕರಣ ಮಾಡುತ್ತಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬರೂ ಚಪ್ಪಲಿ ಹೊರ ಬಿಟ್ಟು ಚಿತ್ರೀಕರಣ ಮಾಡುತ್ತಿದ್ದಾರೆ ಆದರೆ ತ್ರಿಷಾ ಚಪ್ಪಲಿ ಧರಿಸಿ ದೇಗುಲದಲ್ಲಿ ಓಡಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗುತ್ತಿದೆ.
ಚಿತ್ರೀಕರಣ ದೇಗುಲದಲ್ಲಿ ನಡೆಯುತ್ತಿರುವುದು ಎಂದು ಗೊತ್ತಿದ್ದರೂ ಈ ರೀತಿ ವರ್ತಿಸಿರುವುದನ್ನು ಕಂಡು ಕೆಲವು ಹಿಂದು ಸಂಘಟನೆಗಳು ಗರಂ ಆಗಿವೆ. ಗರ್ಭಗುಡಿ ಎದುರು ಚಪ್ಪಲಿ ಧರಿಸಿದ್ದಾರೆ ಅದೂ ಶಿವಲಿಂಗ ಮತ್ತು ನಂದಿ ನಡುವೆ ಚಪ್ಪಲಿ ಧರಿಸಿ ಓಡಾಡಿದ್ದಾರೆ. ಇದು ತಪ್ಪು ಎಂದು ಹಿಂದು ಸಂಘಟನೆಗಳು ತ್ರಿಷಾ ವಿರುದ್ಧ ಇಂದೋರ್‌ನ ಪೊಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಬಂಧಿಸಲು ಒತ್ತಾಯ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಚಿತ್ರೀಕರಣದ ವೇಳೆ ಕುದುರೆಯೊಂದು ನಿಧನವಾಗಿತ್ತು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸಿ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.