ಡ್ರಗ್ಸ್ ಕೇಸ್: ED ಮುಂದೆ ಹಾಜರಾದ ರಾಣಾ ದಗ್ಗುಬಾಟಿ

Published : Sep 08, 2021, 06:31 PM IST
ಡ್ರಗ್ಸ್ ಕೇಸ್: ED ಮುಂದೆ ಹಾಜರಾದ ರಾಣಾ ದಗ್ಗುಬಾಟಿ

ಸಾರಾಂಶ

ಟಾಲಿವುಡ್‌ನಲ್ಲೂ ಚರ್ಚೆಯಾಗುತ್ತಿದೆ ಡ್ರಗ್ಸ್ ಕೇಸ್ ಇಡಿ ಮುಂಚೆ ಹಾಜರಾದ ನಟ ರಾಣಾ ದಗ್ಗುಬಾಟಿ

ಬಾಹುಬಲಿ ಖ್ಯಾತಿಯ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ಬೆಳಗ್ಗೆ 10ಗಂಟೆಯ ಹೊತ್ತಿಗೆ ಇಡಿ ಕಚೇರಿಗೆ ಆಗಮಿಸಿದ್ದಾರೆ ನಟ. ನಟನ ಬ್ಯಾಂಕ್ ಡೀಟೇಲ್ಸ್ ಹಾಗೂ ಹಣ ವರ್ಗಾವಣೆ ಬಗ್ಗೆ ವಿಚಾರಣೆ ನಡೆದಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಪತ್ತೆಯಾದ ಆರೋಪಿಗಳ ಜೊತೆಗಿನ ಲಿಂಕ್ ಹಾಗೂ ಹಣ ವರ್ಗಾವಣೆ ಹಿನ್ನೆಲೆ ವಿಚಾರಣೆ ನಡೆದಿದೆ.

ರಾಣಾ ದಗ್ಗುಬಾಟಿ ಇಡಿ ಮುಂದೆ ಹಾಜರಾದ ಐದನೇ ನಟ. ಕಳೆದ ತಿಂಗಳು ಇಡಿ 10 ಜನರಿಗೆ ನೋಟಿಸ್ ಕಳುಹಿಸಿತ್ತು. ನಿರ್ದೇಶಕ ಜಗನ್ನಾಥ್‌ ಪುರಿ,ನಟರಾದ ಚರ್ಮೀ ಕೌರ್, ರಾಕುಲ್ ಪ್ರೀತ್ ಸಿಂಗ್ ಹಾಗೂ ನಂದು ಅವರನ್ನು ಈವರೆಗೆ ವಿಚಾರಣೆ ಮಾಡಲಾಗಿದೆ. ಎಲ್‌ಎಸ್‌ಡಿ ಮತ್ತು ಎಂಡಿಎಂಎ ಸೇರಿದಂತೆ 'ಕ್ಲಾಸ್ ಎ' ಮಾದಕ ವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಕಳೆದ ತಿಂಗಳು ಟಾಲಿವುಡ್‌ನ 10 ವ್ಯಕ್ತಿಗಳಿಗೆ ಮತ್ತು ಖಾಸಗಿ ಕ್ಲಬ್ ಮ್ಯಾನೇಜರ್ ಸೇರಿದಂತೆ ಇನ್ನಿಬ್ಬರಿಗೆ ನೋಟಿಸ್ ನೀಡಿತ್ತು.

ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಕಾಪಾಡಿದ ಕೈ ಯಾವುದು? ಕಮಿಷನರ್ ಏನಂತಾರೆ!

ಮಂಗಳವಾರ ಎಂಟು ಗಂಟೆಗಳಿಗೂ ಹೆಚ್ಚು ಕಾಲ ನಂದುವನ್ನು ವಿಚಾರಣೆಗೆ ಒಳಪಡಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ಕ್ಯಾಲ್ವಿನ್ ಮಸ್ಕರೇನ್ಹಸ್ ಮತ್ತು ಇನ್ನಿಬ್ಬರನ್ನು ಮಂಗಳವಾರ ಇಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಎಸ್‌ಐಟಿ ತನ್ನ ಮುಂದೆ ವಿಚರಣೆಗೆ ಹಾಜರಾದ ಕೆಲವರ ರಕ್ತ, ಕೂದಲು, ಉಗುರು ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು.

12 ಪ್ರಕರಣಗಳಲ್ಲಿ ಎಂಟು ಪ್ರಕರಣಗಳಲ್ಲಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ತನಿಖೆಯ ಭಾಗವಾಗಿ ಪ್ರಶ್ನಿಸಲ್ಪಟ್ಟ ಟಾಲಿವುಡ್ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?