NMACC: ಬರೀ ಬ್ಯುಸಿನೆಸ್‌ಗೆ ಮಾತ್ರವಲ್ಲ, ಹಾಡು ಹಾಡಲೂ ಸೈ ಮುಖೇಶ್​ ಅಂಬಾನಿ- ಜೈ ಎಂದ ನೆಟ್ಟಿಗರು

By Suvarna NewsFirst Published May 10, 2023, 3:45 PM IST
Highlights

ಕಳೆದ ಮಾರ್ಚ್​ ತಿಂಗಳಿನಲ್ಲಿ ನಡೆದ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದಲ್ಲಿ ಖುದ್ದು ಮಖೇಶ್​ ಅಂಬಾನಿ ಹಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 
 

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬದ ಸದಸ್ಯರು ಹುಟ್ಟುಹಬ್ಬ, ಮದುವೆ, ಹಬ್ಬಗಳು ಮುಂತಾದ ತಮ್ಮ ಜೀವನದ ವಿಶೇಷ ಕ್ಷಣಗಳನ್ನು ಆನಂದಿಸುತ್ತಾರೆ.  ಅಂಬಾನಿ ಕುಟುಂಬವು ಕಳೆದ ಮಾರ್ಚ್ 31 ರಂದು ನೀತಾ ಅಂಬಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದಲ್ಲಿ (Nita Mukesh Ambani Cultural Centre- NMACC) ಹಲವು ತಾರೆಯರು ಭಾಗವಹಿಸಿದ್ದರು.  ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್‌ನ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಮತ್ತು ಹಾಲಿವುಡ್‌ಗೆ ದೊಡ್ಡ ದಿನ. ಹೆಚ್ಚು ಕಡಿಮೆ ಬಾಲಿವುಡ್‌ನ ಎಲ್ಲಾ ತಾರೆಗಳು ಭಾಗವಹಿಸಿದ್ದರು. ಇಡೀ ಘಟನೆಯನ್ನು ಸ್ಮರಣೀಯ ದಿನವನ್ನಾಗಿ  ಪರಿವರ್ತಿಸುವುದನ್ನು ಇಡೀ ಅಂಬಾನಿ ವಂಶಸ್ಥರು ಖಚಿತಪಡಿಸಿಕೊಂಡರು.

ಈ ಉದ್ಘಾಟನೆ ನಡೆದು ಎರಡು ತಿಂಗಳಾದ ಮೇಲೆ ಕಾರ್ಯಕ್ರಮದ ಕೆಲವೊಂದು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಿವೆ.  ಈಗ, ಮುಖೇಶ್ ಅಂಬಾನಿ, ನೀತಾ ಅಂಬಾನಿ (Nita Mukesh Ambani), ಇಶಾ ಅಂಬಾನಿ ಮತ್ತು ಅಂಬಾನಿ ಕುಟುಂಬದ ಇತರ ಸದಸ್ಯರು ಎನ್‌ಎಂಎಸಿಸಿಯ ಯಶಸ್ಸನ್ನು ಆಚರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

Latest Videos

NMACC: ಪಠಾಣ್​ ಜೊತೆ ಡಿಡಿಎಲ್​ಜೆ ಸ್ಟೆಪ್​ ಮಾಡಿ ಹುಚ್ಚೆಬ್ಬಿಸಿದ ಶಾರುಖ್​ ಖಾನ್​!

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು ಮಾತ್ರವಲ್ಲದೇ ಸಮಾಜದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗಿಯಾಗಿದ್ದರು. ಇವರೆಲ್ಲರ ಮುಂದೆ ನೀತಾ ಅಂಬಾನಿ ರಘುಪತಿ ರಾಘವ ರಾಜಾರಾಮ್ ಹಾಡಿಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿ ಬಂದಿದ್ದ ಅತಿಥಿಗಳ ಮನರಂಜಿಸಿದ್ದರು. ನೀತಾ ಅಂಬಾನಿ ನೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.  ಗ್ರೇಟ್ ಇಂಡಿಯನ್ ಮ್ಯೂಸಿಕಲ್ ಸಿವಿಲೈಜೇಷನ್ ಟು ನೇಷನ್ (Great Indian Musical: Civilisation to Nation) ಎಂಬ ವಿಷಯದಲ್ಲಿ ಅವರು ರಘುಪತಿ ರಾಘವ ರಾಜಾರಾಮ್ ಹಾಡಿಗೆ ತಾವೇ ಕೊರಿಯೋಗ್ರಾಫ್ ಮಾಡಿ ನೃತ್ಯ ಮಾಡಿದ್ದರು. ಇದೀಗ ವೈರಲ್​ ಆಗಿರುವ ವೀಡಿಯೊದಲ್ಲಿ, ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಅವರು ಹಾಡುವುದನ್ನು ಕೇಳಬಹುದು.  ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಡನ್ನು ಹಾಡುತ್ತಿದ್ದರೆ, ಇಬ್ಬರು ಯುವತಿಯರು ಎರಡು ದೊಡ್ಡ ಕೇಕ್​ಗಳನ್ನು ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಇಬ್ಬರು ಹುಡುಗಿಯರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೋಡಬಹುದು. ನಂತರ, ನೀತಾ ಅಂಬಾನಿ ಒಬ್ಬ ಹುಡುಗಿಗೆ ಕೇಕ್ ತಿನ್ನಿಸುತ್ತಿರುವುದನ್ನು ಕಾಣಬಹುದು.

NMACC ಉದ್ಘಾಟನಾ ಸಮಾರಂಭದಲ್ಲಿ ಅಂಬಾನಿಗಳು ತಮ್ಮ ಅತಿಥಿಗಳಿಗೆ ಗುಜರಾತಿ ಥಾಲಿಯನ್ನು ಬಡಿಸಿದರು. ಅಪ್ಪಟ ಗುಜರಾತಿ ಥಾಲಿಯು ಥೇಪ್ಲಾ, ಶ್ರೀಖಂಡ್, ಘುಗ್ರಾ, ಚುರ್ಮಾ ನಾ ಲಡೂ, ಭಕ್ರಿ, ಇತ್ಯಾದಿ ಭಕ್ಷ್ಯಗಳಿಂದ ತುಂಬಿತ್ತು. ಮುಖೇಶ್​ ಅವರು ಉದ್ಯಮ ಕ್ಷೇತ್ರ ಮಾತ್ರವಲ್ಲದೇ ಹಾಡಿಗೂ ಸೈ ಎನಿಸಿಕೊಂಡಿದ್ದರಿಂದ ನೆಟ್ಟಿಗರು ಜೈ ಎನ್ನುತ್ತಿದ್ದಾರೆ. 

NMACC ಗ್ರ್ಯಾಂಡ್ ಓಪನಿಂಗ್: ಶಾರುಖ್ ಕುಟುಂಬದೊಂದಿಗೆ ಪೋಸ್ ನೀಡಿದ ಸಲ್ಮಾನ್ ಖಾನ್

ಅಂದಹಾಗೆ,   ವಾಣಿಜ್ಯನಗರಿ ಮುಂಬೈನಲ್ಲಿ  ಭವ್ಯವಾಗಿ ತಲೆಯೆತ್ತಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಬಗ್ಗೆ ಗಣ್ಯಾತಿಗಣ್ಯರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.   ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ (Narendra Modi)   ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ ಉದ್ಘಾಟನೆಗೊಂಡಿರುವುದಕ್ಕೆ ಶುಭಾಶಯ ತಿಳಿಸಿದ್ದ ಪ್ರಧಾನಿ,  ಈ ವೇದಿಕೆ ದೇಶದ ಮೂಲೆ ಮೂಲೆಗಳಲ್ಲಿರುವ ಉದಯೋನ್ಮುಖ ಕಲಾವಿದರಿಗೆ  ದಾರಿದೀಪವಾಗಲಿ ಅಂತ ಶುಭ ಹಾರೈಸಿದ್ದರು. ಭಾರತದ ಅತ್ಯಂತ ಶ್ರೀಮಂತ ಕುಟುಂಬವು ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕವಾಗಿ ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದೆ ಎಂದಿದ್ದರು. 

click me!